ಬೀಜಿಂಗ್: ಉತ್ತರ ಚೀನಾದಲ್ಲಿ ರಾಸಾಯನಿಕ ಕಾರ್ಖಾನೆ ಬಳಿ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಬೀಜಿಂಗ್ನ ವಾಯುವ್ಯಕ್ಕೆ 200 ಕಿ.ಮೀ. ದೂರದಲ್ಲಿರುವ ಜಾಂಗ್ಜಿಯಾಕ್ನಲ್ಲಿನ ಹೆಬಿ ಶೆಂಗುವಾ ಕೆಮಿಕಲ್ ಕಂಪೆನಿಯಲ್ಲಿ ಈ ಅಪಘಾತ ಸಂಭವಿಸಿದೆ, ಇದರಲ್ಲಿ 50 ಸಣ್ಣ ಟ್ರಕ್ಗಳು ಹಾನಿಗೀಡಾಗಿವೆ.
ರಾತ್ರಿ ಸುಮಾರು 12:30ರ ಸಮಯದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಧಿಕೃತ ಪ್ರಸಾರಕ ಸಿ.ಜಿ.ಟಿ.ಟಿ.ಎನ್ ಟ್ವಿಟ್ಟರ್ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದೆ. ಇದರಲ್ಲಿ ಟ್ರಕ್ ಮತ್ತು ಕಾರಿನ ಸುಟ್ಟ ಭಾಗಗಳು ರಸ್ತೆಯ ಮೇಲೆ ಚದುರಿಹೋಗಿವೆ. ಆದಾಗ್ಯೂ, ಅಪಘಾತಕ್ಕೆ ಕಾರಣ ಎಂದು ಎಂಬುದು ನಿಖರವಾಗಿ ತಿಳಿದುಬಂದಿಲ್ಲ.