Double Money: ಹಠಾತ್ ಎಟಿಎಂನಿಂದ ಬಂತು ಡಬ್ಬಲ್ ಹಣ, ಮುಂದೇನಾಯ್ತು ತಿಳಿಯಲು ಸುದ್ದಿ ಓದಿ

ATM Machine: ಖಾತೆಯಿಂದ ಅರ್ಧ ಹಣ ಕಡಿತಗೊಳ್ಳುತ್ತಿತ್ತು ಮತ್ತು ಅದರ ಡಬ್ಬಲ್ ದಷ್ಟು ಹಣ ಎಟಿಎಂ ಯಂತ್ರದಿಂದ ಹೊರಬರುತ್ತಿತ್ತು. ಈ ಸುದ್ದಿ ಗಾಳಿಯಂತೆ ಹಬ್ಬಿತು ಮತ್ತು ನೋಡುವಷ್ಟರಲ್ಲಿ ನೂಕುನುಗ್ಗಲು ಉಂಟಾಯಿತು. ಅಲ್ಲಿ ಸಾಕಷ್ಟು ಜನಸ್ತೋಮ ನೆರೆಯಿತು ಮತ್ತು ಪ್ರತಿಯೊಬ್ಬರೂ ಮೊದಲು ಹಣ ಪಡೆದುಕೊಳ್ಳಲು ಯತ್ನಿಸಲಾರಂಭಿಸಿದರು.   

Written by - Nitin Tabib | Last Updated : Oct 14, 2022, 06:44 PM IST
  • ಸಾಮಾನ್ಯವಾಗಿ ತುರ್ತು ಪರಿಸ್ಥಿತಿಯಲ್ಲಿ ಉಪಯೋಗಕ್ಕಾಗಿ ಜನರು ಎಟಿಎಂ ಯಂತ್ರಗಳಿಂದ ಹಣವನ್ನು ಹಿಂಪಡೆಯುತ್ತಾರೆ.
  • ಎಟಿಎಂನ ವಿಶೇಷತೆ ಎಂದರೆ, ಈ ಮೂಲಕ ನಿಮ್ಮ ಖಾತೆಯಿಂದ ಎಲ್ಲಿ ಬೇಕಾದರೂ ಹಣ ಡ್ರಾ ಮಾಡಬಹುದು.
  • ನಿಮಗೆ ಬೇಕಾಗಿರುವ ಹಣವು ಖಾತೆಯಿಂದ ಕಡಿತಗೊಳ್ಳುತ್ತದೆ ಮತ್ತು ನಿಮ್ಮ ಕೈಗೆ ಬರುತ್ತದೆ.
Double Money: ಹಠಾತ್ ಎಟಿಎಂನಿಂದ ಬಂತು ಡಬ್ಬಲ್ ಹಣ, ಮುಂದೇನಾಯ್ತು ತಿಳಿಯಲು ಸುದ್ದಿ ಓದಿ title=
Double Money Giving ATM

Technical Glitch in ATM: ಸಾಮಾನ್ಯವಾಗಿ ತುರ್ತು ಪರಿಸ್ಥಿತಿಯಲ್ಲಿ ಉಪಯೋಗಕ್ಕಾಗಿ ಜನರು ಎಟಿಎಂ ಯಂತ್ರಗಳಿಂದ ಹಣವನ್ನು ಹಿಂಪಡೆಯುತ್ತಾರೆ. ಎಟಿಎಂನ ವಿಶೇಷತೆ ಎಂದರೆ, ಈ ಮೂಲಕ ನಿಮ್ಮ ಖಾತೆಯಿಂದ ಎಲ್ಲಿ ಬೇಕಾದರೂ ಹಣ ಡ್ರಾ ಮಾಡಬಹುದು. ನಿಮಗೆ ಬೇಕಾಗಿರುವ ಹಣವು ಖಾತೆಯಿಂದ ಕಡಿತಗೊಳ್ಳುತ್ತದೆ ಮತ್ತು ನಿಮ್ಮ ಕೈಗೆ ಬರುತ್ತದೆ. ಆದರೆ, ಎಷ್ಟು ಹಣ ನಿಮ್ಮ ಖಾತೆಯಿಂದ ಕಡಿತಗೊಳ್ಳುತ್ತಿದೆಯೋ, ಅದರ ದುಪ್ಪಟ್ಟು ಹಣ ನಿಮ್ಮ ಕೈಗೆ ಬರುವುದನ್ನು ನೀವು ಎಂದಾದರೂ ಊಹಿಸಿದ್ದೀರಾ?

ದುಪ್ಪಟ್ಟು ಹಣ ಕೊಡಲಾರಂಭಿಸಿದ ಎಟಿಎಂ
ಹೌದು, ಇದು ವಾಸ್ತವದಲ್ಲಿ ಸಂಭವಿಸಿದೆ. ಎಟಿಎಂ ಯಂತ್ರವೊಂದು ಇದ್ದಕ್ಕಿದ್ದಂತೆ ದುಪ್ಪಟ್ಟು ಹಣ ಕೊಡಲು ಆರಂಭಿಸಿದೆ ಮತ್ತು ಘಟನೆ ನಡೆದ ಬಳಿಕ ಅಲ್ಲಿ ಅಪಾರ ಜನಸ್ತೋಮವೇ ನೆರೆದಿದೆ. ಬಿಬಿಸಿ ವರದಿಯ ಪ್ರಕಾರ, ಈ ಘಟನೆ ಸ್ಕಾಟ್ಲೆಂಡಿನ ಡುಂಡಿ ನಗರದಲ್ಲಿ ಸಂಭವಿಸಿದ್ದು, ಅಲ್ಲಿರುವ ಚಾರ್ಲ್ಸ್ ಟನ್ ಡ್ರೈವ್ ನಲ್ಲಿರುವ ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಸಂಭವಿಸಿದ್ದು, ಜನರು ಬೇಡಿಕೆ ಇಟ್ಟ ಹಣದ ದುಪ್ಪಟ್ಟು ಹಣ ಹೊರಬರಲಾರಂಭಿಸಿದೆ, 

ಇದನ್ನೂ ಓದಿ-Viral Video: ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ... ಕೂದಲೆಳೆ ಅಂತರದಿಂದ ಪ್ರಾಣ ರಕ್ಷಿಸಿಕೊಂಡ ಬಡಪಾಯಿ ಆನೆ... ವಿಡಿಯೋ ನೋಡಿ

ಮೊದಲು ಹಣ ಪಡೆಯಲು ಹವಣಿಸಿದ ಜನ
ಇಲ್ಲಿ ವಿಶೇಷತೆ ಎಂದರೆ, ಜನರ ಕೈಗೆ ಸೇರಿದ ಹಣದ ಅರ್ಧದಷ್ಟು ಹಣ ಮಾತ್ರ ಅವರ ಖಾತೆಯಿಂದ ಕಡಿತಗೊಳ್ಳುತ್ತಿತ್ತು. ಈ ವಿಷಯ ಗಾಳಿಯಂತೆ ಹಬ್ಭಿದ್ದು, ನಂತರ ಅಲ್ಲಿ ನೂಕುನುಗ್ಗಲು ಉಂಟಾಗಿದೆ. ಅಲ್ಲಿಗೆ ಬಂದ ಪ್ರತಿಯೊಬ್ಬರೂ ಕೂಡ ಮೊದಲು ಹಣ ಹಿಂಪಡೆಯಲು ಪ್ರಯತ್ನಿಸಲಾರಂಭಿಸಿದರು. ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯಿತು ಎಂದರೆ, ಜನರನ್ನು ನಿಯಂತ್ರಿಸಲು ಅಲ್ಲಿಗೆ ಪೊಲೀಸರೇ ಧಾವಿಸಬೇಕಾಯಿತು. ಪೊಲೀಸರು ಅಲ್ಲಿಗೆ ಭೇಟಿ ನೀಡಿದಾಗ, ಜನರು ಮನಬಂದಂತೆ ಎಟಿಎಂನಿಂದ ಹಣ ಹೊರತೆಗೆಯುತ್ತಿದ್ದರು.

ಇದನ್ನೂ ಓದಿ-Viral Video: ವಿದ್ಯಾ ದೇಗುಲದ ಎದುರೇ ರೋಮಾನ್ಸ್! ವೈರಲ್ ಆಯಿತು ವಿದ್ಯಾರ್ಥಿಗಳ ವಿಡಿಯೋ

ಸ್ಥಳಕ್ಕೆ ಧಾವಿಸಿದ ಪೊಲೀಸರು ಘಟನೆಯ ಕುರಿತು ಮೊದಲು ಸಂಬಂಧಪಟ್ಟ ಬ್ಯಾಂಕ್ ಗೆ ಮಾಹಿತಿ ನೀಡಿದ್ದಾರೆ ಮತ್ತು ನಂತರ ಯಂತ್ರವನ್ನು ಸರಿಪಡಿಸಲಾಗಿದೆ. ಪ್ರಸ್ತುತ ದುಪ್ಪಟ್ಟು ಹಣಪಡೆದವರು ಕಾನೂನಿನ ಪ್ರಕಾರ, ಹಣವನ್ನು ಹಿಂದಿರುಗಿಸಬೇಕಾಗಲಿದೆ ಎನ್ನಲಾಗುತ್ತಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಬ್ಯಾಂಕ್ ಅಧಿಕಾರಿಗಳೂ ಕೂಡ ಘಟನೆಯ ಕುರಿತು ಪರಿಶೀಲನೆ ನಡೆಸಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News