ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಕೊರೊನಾದಿಂದ ಸಾಕಷ್ಟು ಕಲಿತೆ ಎಂದ ಟ್ರಂಪ್

ಇತ್ತೀಚೆಗೆ ಡೊನಾಲ್ಡ್ ಟ್ರಂಪ್​ ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಎರಡು ಬಾರಿ ದಿಢೀರನೆ ಕುಸಿತ ಕಂಡಿತ್ತು. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಮ್ಮಜನಕದ ಮಟ್ಟ ನಿಯಂತ್ರಣಕ್ಕೆ ಬಂದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಬಹುದು ಎಂದು ವೈದ್ಯರು ಹೇಳಿದ್ದರು. 

Written by - Yashaswini V | Last Updated : Oct 5, 2020, 10:35 AM IST
  • ಅಕ್ಟೋಬರ್ 2ರಂದು ಡೊನಾಲ್ಡ್ ಟ್ರಂಪ್ ಗೆ COVID-19 ಪಾಸಿಟಿವ್ ದೃಢಪಟ್ಟಿತ್ತು.
  • ಅವರನ್ನು ಅಮೆರಿಕದ ವಾಲ್ಟರ್​ ರೀಡ್​ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
  • ಉಸಿರಾಟ ತೊಂದರೆ, ಜ್ವರ, ಕೆಮ್ಮು ಸೇರಿ ಹಲವು ಕೊರೊನಾ ರೋಗಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಕೊರೊನಾ ಸಂಬಂಧಿ ಚಿಕಿತ್ಸೆ ಕೊಡಲಾಗಿತ್ತು.‌
ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಕೊರೊನಾದಿಂದ ಸಾಕಷ್ಟು ಕಲಿತೆ ಎಂದ ಟ್ರಂಪ್ title=
File Image

ವಾಷಿಂಗ್ಟನ್​: COVID-19 ಪಾಸಿಟಿವ್ ಬಂದು ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಿಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಅಕ್ಟೋಬರ್ 2ರಂದು ಡೊನಾಲ್ಡ್ ಟ್ರಂಪ್ ಗೆ COVID-19 ಪಾಸಿಟಿವ್ ದೃಢಪಟ್ಟಿತ್ತು. ಅವರನ್ನು ಅಮೆರಿಕದ ವಾಲ್ಟರ್​ ರೀಡ್​ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ತೊಂದರೆ, ಜ್ವರ, ಕೆಮ್ಮು ಸೇರಿ ಹಲವು ಕೊರೊನಾ ರೋಗಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಕೊರೊನಾ ಸಂಬಂಧಿ ಚಿಕಿತ್ಸೆ ಕೊಡಲಾಗಿತ್ತು.‌ ಡೊನಾಲ್ಡ್ ಟ್ರಂಪ್ ಗೆ ಚಿಕಿತ್ಸೆ ನೀಡುತ್ತಿದ್ದ ಅಕ್ಟೋಬರ್ 3ರಂದು 'ಮುಂದಿನ 48 ಗಂಟೆಗಳು ಬಹಳ ನಿರ್ಣಾಯಕವಾದವು. ಅಲ್ಲಿಯವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ' ಎಂದು ಹೇಳಿದ್ದರು. ಆದರೀಗ ಎರಡೇ ದಿನಗಳ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಚೇತರಿಸಿಕೊಂಡು ಆಸ್ಪತ್ರೆಯಿಂದಲೂ ಡಿಸ್ಚಾರ್ಜ್ ಆಗಿರುವುದು ಕುತೂಹಲ ಮೂಡಿಸಿದೆ.

ಡೊನಾಲ್ಡ್ ಟ್ರಂಪ್ ಆರೋಗ್ಯ ಸ್ಥಿತಿ ತುಂಬಾ ಕಳವಳಕಾರಿ, ಮುಂದಿನ 48 ಗಂಟೆಗಳು ನಿರ್ಣಾಯಕ

ಇತ್ತೀಚೆಗೆ ಡೊನಾಲ್ಡ್ ಟ್ರಂಪ್​ ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಎರಡು ಬಾರಿ ದಿಢೀರನೆ ಕುಸಿತ ಕಂಡಿತ್ತು. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಮ್ಮಜನಕದ ಮಟ್ಟ ನಿಯಂತ್ರಣಕ್ಕೆ ಬಂದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಬಹುದು ಎಂದು ವೈದ್ಯರು ಹೇಳಿದ್ದರು. ಅದರಂತೆ ಟ್ರಂಪ್ ರಕ್ತದಲ್ಲಿನ ಆಮ್ಲಜನಕ ಮಟ್ಟ ಈಗ ಸರಿ ಪ್ರಮಾಣಕ್ಕೆ ಬಂದಿದ್ದು ಸೋಮವಾರ ಬೆಳಿಗ್ಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ವಾಲ್ಟರ್​ ರೀಡ್​ ಮಿಲಿಟರಿ ಆಸ್ಪತ್ರೆಯಿಂದ ಡೊನಾಲ್ಡ್ ಟ್ರಂಪ್ ಈಗ ವೈಟ್​ ಹೌಸ್ (White House)​ ತಲುಪಿದ್ದು, ಇನ್ನು ಮುಂದೆ ಅವರಿಗೆ ವೈಟ್ ಹೌಸ್ ನಲ್ಲಿಯೇ ತಜ್ಞ ವೈದ್ಯರು ಚಿಕಿತ್ಸೆ ಮುಂದುವರೆಸಲಿದ್ದಾರೆ ಎಂದು ತಿಳಿದುಬಂದಿದೆ.

US President ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ Corona Positive

ಡೊನಾಲ್ಡ್ ಟ್ರಂಪ್ ವಾಲ್ಟರ್​ ರೀಡ್​ ಮಿಲಿಟರಿ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಅವರ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.​ ಕಪ್ಪು ಬಣ್ಣದ ಎಸ್​ಯುವಿ ಕಾರಿನಿಂದ ಟ್ರಂಪ್ ಹೊರಬರುತ್ತಿದ್ದಂತೆ ಅವರ  ಬೆಂಬಲಿಗರು 'ಟ್ರಂಪ್​ 2020' ಎಂಬ ಧ್ವಜ ಹಾರಿಸಿ ಯುಎಸ್​ಎ… ಯುಎಸ್ಎ ಎಂದು ಘೋಷಣೆಯನ್ನು ಮೊಳಗಿಸಿದರು. ಇದರಿಂದ ಉತ್ತೇಜಿತರಾದ ಟ್ರಂಪ್ ಬೆಂಬಲಿಗರ ಕಡೆ ನೋಡಿ ಚಪ್ಪಾಳೆ ತಟ್ಟಿದರು.

COVID-19 ವಿರುದ್ಧದ ತಮ್ಮ ಹೋರಾಟದ ಬಗ್ಗೆ ಪ್ರತಿಕ್ರಿಯಿ ನೀಡಿರುವ ಡೊನಾಲ್ಡ್ ಟ್ರಂಪ್, 'ಇದು ನಿಜಕ್ಕೂ ಆಸಕ್ತಿದಾಯಕ ಪ್ರಯಾಣವಾಗಿತ್ತು. ಕೋವಿಡ್​ನಿಂದ ನಾನು ಬಹಳಷ್ಟು ಕಲಿತಿದ್ದೇನೆ. ಇದೊಂಥರಾ ಶಾಲೆಗೆ ಹೋಗಿ ಕಲಿತಂತಾಯಿತು' ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ವಾಲ್ಟರ್​ ರೀಡ್​ ಮಿಲಿಟರಿ ಆಸ್ಪತ್ರೆಯ ಕೊಠಡಿಯಲ್ಲಿ ನಿಂತು ಮಾತನಾಡಿರುವ ವಿಡಿಯೋವೊಂದನ್ನು ಅವರು​ ಟ್ವೀಟ್​ ಮಾಡಿದ್ದಾರೆ.
 

Trending News