ಡೋಕ್ಲಾಮ: ವಿವಾದಿತ ಡೋಕ್ಲಾಮ ಬಳಿ ಮತ್ತೆ ರಸ್ತೆ ನಿರ್ಮಾಣ ಕಾಮಗಾರಿಗಾಗಿ 500 ಸೈನಿಕರನ್ನು ನೇಮಿಸಿರುವ ಚೀನಾ

ವಿವಾದಿತ ಡೋಕ್ಲಾಮ ಪ್ರದೇಶದಲ್ಲಿ ಮತ್ತೊಮ್ಮೆ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭಿಸಿರುವ ಚೀನಾ ಬೃಹತ್ ಪ್ರಮಾಣದಲ್ಲಿ ಸೇನೆ ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

Last Updated : Oct 6, 2017, 02:56 PM IST
ಡೋಕ್ಲಾಮ: ವಿವಾದಿತ ಡೋಕ್ಲಾಮ ಬಳಿ ಮತ್ತೆ ರಸ್ತೆ ನಿರ್ಮಾಣ ಕಾಮಗಾರಿಗಾಗಿ 500 ಸೈನಿಕರನ್ನು   ನೇಮಿಸಿರುವ ಚೀನಾ title=

ನವ ದೆಹಲಿ: ವಿವಾದಿತ ಡೋಕ್ಲಾಮ ಪ್ರದೇಶದಲ್ಲಿ ಚೀನಾ ಮತ್ತೊಮ್ಮೆ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದು, ಇದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಸೈನ್ಯವನ್ನು ನಿಯೋಜಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಚೀನಾದ ಈ ಕ್ರಮವು ಎರಡು ದೇಶಗಳ ಮಧ್ಯೆ ಮತ್ತೆ ಉದ್ವಿಗ್ನತೆಯನ್ನು ಉಂಟುಮಾಡಬಹುದಾದ ನಿರೀಕ್ಷೆಯಿದೆ. 

ಭಾರತಕ್ಕೆ ಪ್ರವಾಸ ಕೈಗೊಳ್ಳುವ ಚೀನಾ ಜನತೆಗೆ ಚೀನಾ ತನ್ನ ಸಲಹೆಯನ್ನು ಬಿಡುಗಡೆಗೊಳಿಸಿದೆ. ಚೀನಾ ಮೊದಲ ಬಾರಿಗೆ ಈ ರೀತಿಯ ಎಚ್ಚರಿಕೆಯ ಕ್ರಮವೊಂದನ್ನು ಕೈಗೊಂಡಿದೆ.

ಮಾಧ್ಯಮ ವರದಿಗಳ ಪ್ರಕಾರ, ಚೀನಾ ಸುಮಾರು 500 ಸೈನಿಕರನ್ನು ಡೋಕ್ಲಾಮ ಪ್ರದೇಶದ ಬಳಿ ನಿಯೋಜಿಸಿದೆ. ಹಿಂದೆ 73 ದಿನಗಳ ಕಾಲ ಚೀನಾ-ಭಾರತದ ನಡುವೆ ಯುದ್ಧದ ಕಾರ್ಮೋಡ ಕವಿದಿತ್ತು. ಈ ಪ್ರದೇಶದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಚೀನಾ ಮತ್ತೊಮ್ಮೆ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಿದೆ. ಈ ಪರಿಸ್ಥಿತಿಯು ಎರಡೂ ದೇಶಗಳ ನಡುವಿನ ಗಡಿಯಲ್ಲಿನ ಯುದ್ಧದ ಕಾರ್ಮೋಡ ಇನ್ನೂ ಕರಗಿಲ್ಲ ಎಂಬುದನ್ನು ಸೂಚಿಸುತ್ತಿವೆ.

Trending News