Covid-19 ರೋಗಿಗಳ ಪತ್ತೆಗೆ ವೈದ್ಯರ ಸಹಾಯಕ್ಕೆ ಬರಲಿವೆ ಶ್ವಾನಗಳು

ಈ ತರಬೇತಿ ನೀಡಲಾಗಿರುವ ಶ್ವಾನಗಳನ್ನು ರೈಲು ನಿಲ್ದಾಣ, ವಿಮಾನ ನಿಲ್ದಾಣ, ಮಾರುಕಟ್ಟೆ ಹಾಗೂ ಜನ ಸಂದಣಿಯ ಪ್ರದೇಶಗಳಲ್ಲಿ ಬಳಸಲಾಗುವುದು.

Last Updated : Apr 30, 2020, 05:16 PM IST
Covid-19 ರೋಗಿಗಳ ಪತ್ತೆಗೆ ವೈದ್ಯರ ಸಹಾಯಕ್ಕೆ ಬರಲಿವೆ ಶ್ವಾನಗಳು   title=

ನವದೆಹಲಿ: ವಿಶ್ವಾಧ್ಯಂತ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿನ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಎಷ್ಟೇ ಹರಸಾಹಸ ಪಟ್ಟರೂ ಕೂಡ ಕೋರೋಣ ವೈರಸ್ ಮೇಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಅಷ್ಟೇ ಅಲ್ಲ ವಿಜ್ಞಾನಿಗಳು ಹಾಗೂ ವೈದ್ಯರಿಗೆ ಈ ಪ್ರಕರಣಗಳು ಚಿಂತೆಯ ಕಾರಣವಾಗಿ ಪರಿನಮಿಸುತ್ತಿವೆ. ಕೆಲ ರೋಗಿಗಳಲ್ಲಂತೂ ಕೊರೊನಾ ವೈರಸ್ ಲಕ್ಷಣಗಳೇ ಇಲ್ಲ ಆದರೂ ಕೂಡ ಆ ರೋಗಿಗಳು ಕೊವಿಡ್-19 ಟೆಸ್ಟ್ ಗೆ ಧನಾತ್ಮಕವಾಗಿ ಪ್ರತಿಕ್ರಿಸುತ್ತಿದ್ದಾರೆ.

ಈ ರೀತಿ ಅಡಗಿ ಕುಳಿತ ಕೊವಿಡ್-19 ರೋಗಿಗಳ ಪತ್ತೆಗಾಗಿ ಒಂದು ವಿನೂತನ ಪ್ರಯತ್ನವನ್ನು ನಡೆಸಲಾಗುತ್ತಿದೆ. ಹೌದು, ರೋಗದ ಲಕ್ಷಣ ಪತ್ತೆಯಾಗದ ಕೊವಿಡ್ 19 ರೋಗಿಗಳ ಪತ್ತೆಗಾಗಿ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಶ್ವಾನಗಳು ತಮ್ಮ ವಾಸನೆ ಗ್ರಹಿಸುವ ಶಕ್ತಿಯನ್ನು ಉಪಯೋಗಿಸಿ ಕೊರೊನಾ ರೋಗಿಗಳ ಪತ್ತೆ ಹಚ್ಚಲಿವೆ. ಆಂಗ್ಲ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಈ ಕಾರ್ಯಕ್ಕಾಗಿ ಲೆಬ್ರಾಡೋರ್ ರಿಟ್ರೀವರ್ ಪ್ರಜಾತಿಯ ಶ್ವಾನಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎನ್ನಲಾಗಿದೆ.

ಕ್ರೈಂಗೆ ಸಂಬಂಧಿಸದ ಪ್ರಕರಣಗಳ ಪತ್ತೆಗಾಗಿ ಈ ಮೊದಲು ಪೊಲೀಸರು ಶ್ವಾನಗಳ ಬಳಕೆ ಮಾಡುತ್ತಿದ್ದರು. ಆದರೆ, ಇದೆ ಮೊದಲ ಬಾರಿಗೆ ರೋಗವೊಂದಕ್ಕೆ ತುತ್ತಾಗಿರುವ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸರ ಬದಲಾಗಿ ವೈದ್ಯರು ಇದೀಗ ನಾಯಿಗಳ ಸಹಾಯ ಪಡೆದುಕೊಳ್ಳಲಿದ್ದಾರೆ. ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯದ ಸಂಶೋಧಕರ ತಂಡವೊಂದು ಈ ಶ್ವಾನಗಳಿಗೆ ತರಬೇತಿ ನೀಡುತ್ತಿದೆ. ತರಬೇತಿಯ ಬಳಿಕ ಈ ಶ್ವಾನಗಳನ್ನು ರೈಲು ನಿಲ್ದಾಣ, ವಿಮಾನ ನಿಲ್ದಾಣ, ಮಾರುಕಟ್ಟೆ ಹಾಗೂ ಜನ ಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಬಳಸಲಾಗುವುದ ಎನ್ನಲಾಗಿದೆ. ಇಂತಹ ಪ್ರದೇಶಗಳಲ್ಲಿ ರೋಗಿಗಳ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟಸಾಧ್ಯವೇ ಇರುತ್ತದೆ.

ಒಂದು ವೇಳೆ ಈ ಶ್ವಾನಗಳು ಕೊರೊನಾ ವೈರಸ್ ರೋಗಿಗಳ ಪತ್ತೆಯಲ್ಲಿ ಯಶಸ್ವಿಯಾದರೆ, ಇದು ಈ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅತಿ ದೊಡ್ಡ ಯಶಸ್ಸು ಎಂದೇ ಪರಿಗಣಿಸಲಾಗುವುದು ಎಂದು ಸಂಶೋಧಕರು ಹೇಳಿದ್ದಾರೆ. ಅಷ್ಟೇ ಅಲ್ಲ ಈ ರೀತಿ ರೋಗಿಗಳ ಪತ್ತೆ ತುಂಬಾ ಸುಲಭವಾಗಲಿದೆ. ಎಲ್ಲಿಯವರೆಗೆ ಈ ಮಾರಕ ಕಾಯಿಲೆಗೆ ಲಸಿಕೆ ಸಿದ್ಧವಾಗುವುದಿಲ್ಲವೂ ಅಲ್ಲಿಯವರೆಗೆ ಇದರಿಂದ ತುಂಬಾ ಸಹಾಯವಾಗಲಿದೆ ಎಂದೇ ಹೇಳಲಾಗುತ್ತಿದೆ.

Trending News