ಈ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಜನನ ಪ್ರಮಾಣ

ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯಲು ಸರ್ಕಾರ 1979 ರಲ್ಲಿ, ಚೀನಾ ಸರ್ಕಾರ ರಾಷ್ಟ್ರವ್ಯಾಪಿ 'ಒಂದು ಮಕ್ಕಳ ನೀತಿ' ಯನ್ನು ಪರಿಚಯಿಸಿತು. 

Last Updated : Jan 18, 2020, 10:50 AM IST
ಈ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಜನನ ಪ್ರಮಾಣ title=
Image courtesy: IANS

ಬೀಜಿಂಗ್: 70 ವರ್ಷಗಳ ಹಿಂದೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರಚನೆಯಾದ ನಂತರ ಚೀನಾದಲ್ಲಿ ಜನನ ಪ್ರಮಾಣ ಕಡಿಮೆ ಆಗಿದೆ. ಜನಸಂಖ್ಯಾ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿದ್ದ ನೀತಿಯ ಸಡಿಲತೆಯ ಹೊರತಾಗಿಯೂ ಜನಸಂಖ್ಯಾ ನಿಯಂತ್ರಣ ಸಾಧಿಸುವಲ್ಲಿ ಚೀನಾ ಯಶಸ್ವಿಯಾಗಿದೆ ಎಂದು ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಎನ್ಬಿಎಸ್) ಶುಕ್ರವಾರ ಮಾಹಿತಿ ನೀಡಿದೆ.

2019 ರಲ್ಲಿ ಜನನ ಪ್ರಮಾಣ ಪ್ರತಿ ಸಾವಿರಕ್ಕೆ 10.48 ಶೇಕಡಾ ಎಂದು ಎನ್‌ಬಿಎಸ್ ಉಲ್ಲೇಖಿಸಿ ಬಿಬಿಸಿ ಹೇಳಿದೆ. 2019 ರಲ್ಲಿ ಒಂದು ಕೋಟಿ 46 ಲಕ್ಷ 50 ಸಾವಿರ ಮಕ್ಕಳು ಜನಿಸಿದ್ದಾರೆ ಎಂದು ಅದು ಹೇಳಿದೆ.

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಮುಂದೆ ಒಂದು ಸವಾಲಾಗಿದ್ದ ದೇಶದ ಜನನ ಪ್ರಮಾಣವು ವರ್ಷಗಳಿಂದ ಕುಸಿಯುತ್ತಿದೆ ಎಂದು ಅದು ತಿಳಿಸಿದೆ.

ಜನನ ಪ್ರಮಾಣ ಕುಸಿಯುತ್ತಿರುವ ಹೊರತಾಗಿಯೂ, ಚೀನಾದಲ್ಲಿ ಸಾವಿನ ಪ್ರಮಾಣವು ಈ ಹಿಂದೆ 1.39 ಬಿಲಿಯನ್‌ಗಿಂತ 2019 ರಲ್ಲಿ 1.4 ಬಿಲಿಯನ್‌ಗೆ ಇಳಿದಿದೆ ಎಂದು ಎನ್‌ಬಿಎಸ್ ಹೇಳಿದೆ.

ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯಲು ಸರ್ಕಾರ 1979 ರಲ್ಲಿ, ಚೀನಾ ಸರ್ಕಾರ ರಾಷ್ಟ್ರವ್ಯಾಪಿ 'ಒಂದು ಮಕ್ಕಳ ನೀತಿ' ಯನ್ನು ಪರಿಚಯಿಸಿತು. 

ನಿಯಮಗಳನ್ನು ಉಲ್ಲಂಘಿಸಿದ ಕುಟುಂಬಗಳಿಗೆ ದಂಡ ಹಾಕುವುದು. ಉದ್ಯೋಗ ಕಳೆದು ಕೊಳ್ಳುವುದು ಮತ್ತು ಕೆಲವೊಮ್ಮೆ ಗರ್ಭಪಾತವನ್ನು ಮಾಡಿಸಬೇಕಾದಂತಹ ಸ್ಥಿತಿ ಇತ್ತು ಎಂದು ಬಿಬಿಸಿ ಹೇಳಿದೆ. ಆದರೆ ಈ ನೀತಿಗೆ ಲಿಂಗ ಅಸಮತೋಲನ ಕಾರಣವಾಗಿದೆ. 2019 ರ ಅಂಕಿಅಂಶಗಳ ಪ್ರಕಾರ, ಪುರುಷರು ಮಹಿಳೆಯರಿಗಿಂತ ಮೂರು ಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ.

2015 ರಲ್ಲಿ, ಸರ್ಕಾರವು 'ಒಂದು ಮಕ್ಕಳ ನೀತಿ'ಯನ್ನು ರದ್ದುಗೊಳಿಸಿತು ಮತ್ತು ದಂಪತಿಗೆ ಇಬ್ಬರು ಮಕ್ಕಳನ್ನು ಹೊಂದಲು ಅವಕಾಶ ನೀಡಿತು. ಆದರೆ ಈ ಸುಧಾರಣೆ ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ತಿಳಿದು ಬಂದಿದೆ.

Trending News