Explainer: ಚೀನಾ-ಅಮೆರಿಕ ನಡುವಿನ ಉದ್ವಿಗ್ನತೆ, ಎರಡು ಮಹಾಶಕ್ತಿಗಳ ನಡುವೆ ಮಹಾಯುದ್ಧದ ಸೂಚನೆಯೇ?

China Vs America : ಯುಎಸ್ ಪಾರ್ಲಿಮೆಂಟ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯ ಬಗ್ಗೆ ಚೀನಾ ಕೋಪಗೊಂಡಿದ್ದು, ವಿಶ್ವದ ಎರಡು ಮಹಾಶಕ್ತಿಗಳಾದ ಚೀನಾ ಮತ್ತು ಅಮೆರಿಕ ನಡುವೆ ಯುದ್ಧ ಸಂಭವಿಸಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ. 

Written by - Chetana Devarmani | Last Updated : Aug 3, 2022, 02:01 PM IST
  • ಯುಎಸ್ ಪಾರ್ಲಿಮೆಂಟ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ
  • ತೀವ್ರಗೊಂಡ ಚೀನಾ-ಅಮೆರಿಕ ನಡುವಿನ ಉದ್ವಿಗ್ನತೆ
  • ಎರಡು ಮಹಾಶಕ್ತಿಗಳ ನಡುವೆ ಮಹಾಯುದ್ಧದ ಸೂಚನೆಯೇ?
Explainer: ಚೀನಾ-ಅಮೆರಿಕ ನಡುವಿನ ಉದ್ವಿಗ್ನತೆ, ಎರಡು ಮಹಾಶಕ್ತಿಗಳ ನಡುವೆ ಮಹಾಯುದ್ಧದ ಸೂಚನೆಯೇ?  title=
ಚೀನಾ-ಅಮೆರಿಕ

China Vs America : ಯುಎಸ್ ಪಾರ್ಲಿಮೆಂಟ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯ ಬಗ್ಗೆ ಚೀನಾ ಕೋಪಗೊಂಡಿದ್ದು, ವಿಶ್ವದ ಎರಡು ಮಹಾಶಕ್ತಿಗಳಾದ ಚೀನಾ ಮತ್ತು ಅಮೆರಿಕ ನಡುವೆ ಯುದ್ಧ ಸಂಭವಿಸಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ. ಇದಕ್ಕೆ ಕಾರಣ ಜೋ ಬೈಡನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯ ಬಳಿಕವೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬೆಂಕಿಯೊಂದಿಗೆ ಆಟವಾಡುವ ತಪ್ಪನ್ನು ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಇದರ ಹೊರತಾಗಿಯೂ ತೈವಾನ್‌ಗೆ ನ್ಯಾನ್ಸಿ ಪೆಲೋಸಿಯ ಭೇಟಿ ನೀಡಿದರು. ಈ ಬಗ್ಗೆ ಚೀನಾ ಕೋಪಗೊಂಡಿದೆ ಮತ್ತು ನಿರಂತರವಾಗಿ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿದೆ. ಇಷ್ಟೇ ಅಲ್ಲ, ಚೀನಾ ತನ್ನ ಸೇನಾ ಪಡೆಯನ್ನೂ ತೈವಾನ್ ಗಡಿಯ ಬಳಿ ವ್ಯಾಯಾಮದ ಹೆಸರಿನಲ್ಲಿ ಬಿಟ್ಟಿದೆ. ಆದರೆ, ಚೀನಾ ಸೇನೆಯು ನಾಲ್ಕು ದಿನಗಳ ಸಮರಾಭ್ಯಾಸ ನಡೆಸುವುದಾಗಿ ಹೇಳಿದೆ.

ತೈವಾನ್ ಮೇಲೆ ಈ ನಿರ್ಬಂಧಗಳನ್ನು ಹೇರಿದ ಚೀನಾ:

ಪೆಲೋಸಿಯ ಭೇಟಿಯಿಂದ ಅಸಮಾಧಾನಗೊಂಡ ಚೀನಾ, ತೈವಾನ್‌ನಲ್ಲಿ ಪೇಸ್ಟ್ರಿಗಳು, ಬೇಯಿಸಿದ ಸರಕುಗಳು ಮತ್ತು ಸಿಹಿತಿಂಡಿಗಳನ್ನು ಉತ್ಪಾದಿಸುವ ಹಲವಾರು ತೈವಾನೀಸ್ ಕಂಪನಿಗಳ ಮೇಲೆ ಆರ್ಥಿಕ ನಿರ್ಬಂಧಗಳು ಮತ್ತು ಆಮದು ನಿರ್ಬಂಧಗಳನ್ನು ಘೋಷಿಸಿದೆ. ಮಂಗಳವಾರ, ಚೀನಾ ಹಲವಾರು ತೈವಾನೀಸ್ ಆಹಾರ ಕಂಪನಿಗಳಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. 

ಇದನ್ನೂ ಓದಿ: ಝವಾಹಿರಿ ಹತ್ಯೆಗೆ ಅಮೆರಿಕಾ ಹಾದಿ ಸುಗಮ ಮಾಡಿಕೊಟ್ಟಿದ್ದೇ ಉಗ್ರನ ಈ ಹವ್ಯಾಸ ..!

ಫೋಕಸ್ ತೈವಾನ್ ಪ್ರಕಾರ, ತೈವಾನ್‌ನ ಕೌನ್ಸಿಲ್ ಆಫ್ ಅಗ್ರಿಕಲ್ಚರ್ (COA) ಕಪ್ಪುಪಟ್ಟಿಗೆ ಸೇರಿಸಲಾದ ಕಂಪನಿಗಳಲ್ಲಿ ಚಹಾ, ಡ್ರೈ ಫ್ರೂಟ್ಸ್‌, ಜೇನುತುಪ್ಪ, ಕೋಕೋ ಬೀನ್ಸ್ ಮತ್ತು ತರಕಾರಿಗಳು ಮತ್ತು ಸುಮಾರು 700 ಮೀನುಗಾರಿಕೆ ಹಡಗುಗಳು ಸೇರಿವೆ ಎಂದು ವರದಿ ಮಾಡಿದೆ.

ಪೆಲೋಸಿಯ ಮೇಲ್ವಿಚಾರಣೆಯ ಬಗ್ಗೆ ಚೀನಾ ಪ್ರಶ್ನೆಗಳನ್ನು ಎತ್ತಿತು:

ತೈವಾನ್‌ಗೆ ಪೆಲೋಸಿಯ ಭೇಟಿಯನ್ನು ಯುಎಸ್ ಕ್ಷಣದಿಂದ ಕ್ಷಣಕ್ಕೆ ಗಮನಿಸುತ್ತಿದೆ. ಆದ್ದರಿಂದ ಅದೇ ಸಮಯದಲ್ಲಿ, ಚೀನಾ ಇದನ್ನು ತನ್ನ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಎಂದು ಪರಿಗಣಿಸುತ್ತಿದೆ. ಚೀನಾದ ವಿದೇಶಾಂಗ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ, “ನ್ಯಾನ್ಸಿ ಅವರ ತೈವಾನ್ ಭೇಟಿಯು ಪ್ರತ್ಯೇಕತಾವಾದಿ ಗುಂಪುಗಳಿಗೆ ತಪ್ಪು ಸಂದೇಶವನ್ನು ರವಾನಿಸಿದೆ ಎಂದು ಹೇಳಲಾಗಿದೆ. ನಮ್ಮ ಬಲವಾದ ವಿರೋಧದ ಹೊರತಾಗಿಯೂ, ನ್ಯಾನ್ಸಿ ತೈವಾನ್‌ಗೆ ಭೇಟಿ ನೀಡಿದ್ದಾರೆ. ಇದು ಚೀನಾದ ತತ್ವ ನೀತಿಯ ಉಲ್ಲಂಘನೆಯಾಗಿದೆ. ಇದು ಚೀನಾ ಮತ್ತು ಅಮೆರಿಕ ನಡುವಿನ ಸಂಬಂಧಗಳ ಮೇಲೆ ಆಳವಾದ ಪರಿಣಾಮ ಬೀರಿದೆ ಮತ್ತು ಇದು ತೈವಾನ್‌ನಲ್ಲಿನ ಶಾಂತಿಯ ಮೇಲೂ ಪರಿಣಾಮ ಬೀರುತ್ತದೆ" ಎಂದಿದೆ. ಚೀನಾದ ಈ ಹೇಳಿಕೆಯನ್ನು ದೊಡ್ಡ ದೃಷ್ಟಿಕೋನದಲ್ಲಿ ನೋಡಲಾಗುತ್ತಿದೆ.

ಚೀನಾದ ಹೇಳಿಕೆಗೆ ಅಮೆರಿಕದ ಶ್ವೇತಭವನದ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಪ್ರತಿಕ್ರಿಯಿಸಿದ್ದು, ನಾವು ಯಾವುದೇ ನೀತಿಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ. "ನ್ಯಾನ್ಸಿಯ ಪ್ರಯಾಣವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ನಮ್ಮ ಸ್ಪೀಕರ್ ಅವರ ಭೇಟಿಯು ಚೀನಾದ ನೀತಿಗೆ ಅನುಗುಣವಾಗಿದೆ. ಒನ್ ಚೀನಾ ನೀತಿಯಲ್ಲಿ ಈ ಭೇಟಿಯಿಂದ ಏನೂ ಬದಲಾಗಿಲ್ಲ" ಎಂದು ಜಾನ್ ಕಿರ್ಬಿ ಹೇಳಿದ್ದಾರೆ.

ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಪತ್ತೆಯಾಯ್ತು 8000 ವರ್ಷಗಳ ಪುರಾತನ ದೇವಾಲಯ!

ಏತನ್ಮಧ್ಯೆ, ಚೀನಾ ಯುಎಸ್ ರಾಯಭಾರಿಯನ್ನು ಕರೆಸಿದೆ ಮತ್ತು ಪೆಲೋಸಿಯ ಭೇಟಿಯ ಬಗ್ಗೆ ಈ ರೀತಿ ಹೇಳಿದೆ, "ನಿರಾಕರಣೆಯ ಹೊರತಾಗಿಯೂ, ಪೆಲೋಸಿಯ ಭೇಟಿ ಗ್ರಹಿಕೆಗೆ ಮೀರಿದೆ. ಪೆಲೋಸಿ ಬೆಂಕಿಯೊಂದಿಗೆ ಆಟವಾಡುತ್ತಿದ್ದು, ಈ ತಪ್ಪಿಗೆ ಅಮೆರಿಕ ಅನುಭವಿಸಬೇಕಾಗುತ್ತದೆ ಎಂದು ಚೀನಾ ಎಚ್ಚರಿಸಿದೆ." 

ಎರಡು ಮಹಾಶಕ್ತಿಗಳ ನಡುವೆ ಹೆಚ್ಚಾಗುತ್ತಿರುವ ಈ ಉದ್ವಿಗ್ನತೆ ಯುದ್ಧಕ್ಕೆ ನಾಂದಿ ಹಾಡುತ್ತಾ ಎಂಬ ಆತಂಕ ಕಾಡಲು ಆರಂಭಿಸಿದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News