BIG NEWS: CORONAVIRUSಗೆ ಶೀಘ್ರವೇ ಈ ದೇಶದಲ್ಲಿ ಸಿದ್ಧವಾಗಲಿದೆ ಲಸಿಕೆ!

ವೈರಸ್ ನಿವಾರಣೆಗೆ ಶೀಘ್ರವೇ ಮಾರುಕಟ್ಟೆಯಲ್ಲಿ ಲಸಿಕೆ ಬಿಡುಗಡೆಯಾಗಲಿದೆ.

Last Updated : Mar 12, 2020, 04:17 PM IST
BIG NEWS: CORONAVIRUSಗೆ ಶೀಘ್ರವೇ ಈ ದೇಶದಲ್ಲಿ ಸಿದ್ಧವಾಗಲಿದೆ ಲಸಿಕೆ! title=

ನವದೆಹಲಿ: ವಿಶ್ವಾದ್ಯಂತ ಪಸರಿಸುತ್ತಿರುವ ಕೊರೊನಾ ವೈರಸ್ ಭೀತಿಯ ಮಧ್ಯೆ ಜನರಿಗೆ ಭಾರಿ ನೆಮ್ಮದಿ ನೀಡುವ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ವಿಶ್ವಾದ್ಯಂತ ಹಲವು ಜನರು ಈ ಮಾರಕ ರೋಗದ ಸೋಂಕಿಗೆ ತುತ್ತಾಗುತ್ತಿದ್ದರೆ, ಹಲವು ಜನರು ಈ ವೈರಸ್ ನಿಂದ ಉಂಟಾಗುವ ರೋಗಕ್ಕೆ ದಿನನಿತ್ಯ ಬಲಿಯಾಗುತ್ತಿದ್ದಾರೆ. ಇವೆಲ್ಲವುಗಳ ಮಧ್ಯೆ ದೇಶವೊಂದು ಈ ಮಹಾಮಾರಿಗೆ ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆ ಎಂದು ಘೋಷಿಸಿದೆ. ಶೀಘ್ರವೇ ಈ ಲಸಿಕೆಯ ಮೊದಲ ಉತ್ಪಾದನೆಯನ್ನು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ದೇಶಗಳಿಗೆ ರವಾನೆಯಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.

ಈ ದೇಶ ತಯಾರಿಸಿದೆ ಲಸಿಕೆ
ಇಸ್ರೇಲ್ ನ ಇನ್ಸ್ಟಿಟ್ಯೂಟ್ ಫಾರ್ ಬಯಾಲಜಿಕಲ್ ರಿಸರ್ಚ್ ನ ವಿಜ್ಞಾನಿಗಳು ಕೊರೊನಾ ವೈರಸ್ ಅಂದರೆ COVID-19ಗೆ ಲಸಿಕೆ ಅಭಿವೃದ್ಧಿಪಡಿಸಿದೆ ಎಂದು ಹೇಳಿಕೊಂಡಿದ್ದು, ಶೀಘ್ರವೇ ಇದನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದಿದೆ. ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ನ ರಕ್ಷಣಾ ಸಚಿವ ನಮ್ಮ ದೇಶದ ವಿಜ್ಞಾನಿಗಳು ಕೊರೊನಾ ವೈರಸ್ ನ ಗುಣ ಹಾಗೂ ಜೈವಿಕ ತಂತ್ರವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ವೈರಸ್ ನ ಪ್ರತಿರೋಧಕ ಇನ್ನೂ ಸಿದ್ಧಪಡಿಸಲಾಗಿಲ್ಲ. ಈ ಕಾರ್ಯಕ್ಕೆ ಇನ್ನೂ ಕಾಲಾವಕಾಶ ಬೇಕಾಗಲಿದೆ ಎಂದಿದ್ದಾರೆ. ಅಷ್ಟೇ ಅಲ್ಲ ನಮ್ಮ ಸಂಸ್ಥೆಯ ಸುಮಾರು 50ಕ್ಕೂ ಅಧಿಕ ನುರಿತ ವಿಜ್ಞಾನಿಗಳು ಈಗಾಗಲೇ ಈ ವೈರಸ್ ನ ವಿರುದ್ಧ ಹೋರಾಡುವ ಲಸಿಕೆಯನ್ನು ತಯಾರಿಸುವಲ್ಲಿ ಕಾರ್ಯತತ್ಪರರಾಗಿದ್ದಾರೆ ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಗೆ ಲಸಿಕೆ ಸಿದ್ಧವಾದ ಬಳಿಕ ಅದರ ಟ್ರೈಯಲ್ ಪ್ರಕ್ರಿಯೆ ನಡೆಸಲಾಗುವುದು. ಈ ಪ್ರಕ್ರಿಯೆಯ ವೇಳೆ ಈ ಲಸಿಕೆಯನ್ನು ಪ್ರಾಣಿಗಳು ಹಾಗೂ ಮನುಷ್ಯರ ಮೇಲೆ ಪರೀಕ್ಷಿಸಲಾಗುವುದು. ಈ ವೇಳೆ ವ್ಯಾಕ್ಸಿನ್ ನ ಗುಣ ಹಾಗೂ ಅದರ ಸೈಡ್ ಎಫೆಕ್ಟ್ ಗಳ ಕುರಿತು ಕೂಡ ಅಧ್ಯಯನ ನಡೆಸಲಾಗುವುದು. ಈ ಪ್ರಕ್ರಿಯೆಗೆ ಕೆಲ ತಿಂಗಳುಗಳ ಸಮಯಾವಕಾಶ ಬೇಕಾಗಲಿದೆ. ಬಳಿಕ ಈ ಲಸಿಕೆಗೆ ಮಂಜೂರಾತಿ ಪಡೆಯಲು ಅಮೆರಿಕಾದ ಫುಡ್ ಅಂಡ್ ಅಡ್ಮಿನಿಸ್ಟ್ರೇಷನ್(FDA) ಹಾಗೂ ಚೀನಾದ ಔಷಧಿ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು. ಈ ಸಂಸ್ಥೆಗಳು ಲಸಿಕೆಗೆ ಮಂಜೂರಾತಿ ನೀಡಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಅನುಮತಿ ನೀಡಲಿದೆ.

Trending News