Coronavirus LIVE:ಸೋಮವಾರದಿಂದ ಅಮೇರಿಕಾದಲ್ಲಿ ಮಾರಕ ಕೋರೊನಾ ವೈರಸ್ ಗಾಗಿ ಸಿದ್ಧಪಡಿಸಲಾಗಿರುವ ಲಸಿಕೆಯನ್ನು ಮನುಷ್ಯರ ಮೇಲೆ ಪರೀಕ್ಷೆ ಆರಂಭಗೊಂಡಿದೆ. BBCಯಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಒಟ್ಟು 45 ಸ್ವಯಂಸೇವಕರ ಮೇಲೆ ಸಿಯೇಟಲ್ ನ ಕ್ಯಾನ್ಸರ್ ಪರ್ಮನೆಂಟ್ ರಿಸರ್ಚ್ ಕೇಂದ್ರದಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಈ ವ್ಯಾಕ್ಸಿನ್ ಬಳಕೆಯಿಂದ ಕೊರೊನಾ ವೈರಸ್ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇದರಲ್ಲಿ ವೈರಸ್ ನಿಂದ ಕಾಪಿ ಮಾಡಲಾಗಿರುವ ಹಾನಿಕಾರಕ ಜೆನೆಟಿಕ್ ಕೋಡ್ ಗಳಿವೆ ಎನ್ನಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ತಜ್ಞರು ಈ ವ್ಯಾಕ್ಸಿನ್ ಪರೀಕ್ಷೆಗೆ ಹಲವು ತಿಂಗಳುಗಳ ಕಾಲಾವಕಾಶ ಬೇಕಾಗಲಿದೆ ಎಂದಿದ್ದಾರೆ. ವಿಶ್ವಾದ್ಯಂತದ ವಿಜ್ಞಾನಿಗಳೂ ಕೂಡ ಈ ಕುರಿತು ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಇದಕ್ಕೂ ಮೊದಲು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮನುಷ್ಯರ ಮೇಲೆ ಈ ಲಸಿಕೆಯ ಪರೀಕ್ಷಣೆಗಾಗಿ ಧನ ಸಹಾಯ ಒದಗಿಸಿತ್ತು. ಆದರೆ, ಈ ಕಾರ್ಯದಲ್ಲಿ ತೊಡಗಿರುವ ಬಯೋಟೆಕ್ನಾಲಜಿ ಕಂಪನಿ ಮಾಡರ್ನ್ ಥೆರೆಪ್ಯೂಟಿಕ್ಸ್ ಹೇಳುವ ಪ್ರಕಾರ ಈ ವ್ಯಾಕ್ಸಿನ್ ಅನ್ನು ಟೆಸ್ಟ್ ಪ್ರಕ್ರಿಯೆ ಮೂಲಕವೇ ತಯಾರಿಸಲಾಗಿದೆ ಎಂದು ಹೇಳಿಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬ್ರಿಟನ್ ನ ಇಂಪೀರಿಯಲ್ ಕಾಲೇಜ್ ಲಂಡನ್ ನ ಸಾಂಕ್ರಾಮಿಕ ರೋಗ ತಜ್ಞ ಜಾನ್ ಟ್ರೇಗೊನಿಂಗ್, "ಈ ವ್ಯಾಕ್ಸಿನ್ ನಲ್ಲಿ ಈ ಮೊದಲು ಉಪಯೋಗದಲ್ಲಿದ್ದ ತಂತ್ರಜ್ಞಾನದ ಬಳಕೆ ಮಾಡಲಾಗಿದೆ" ಎಂದು ಹೇಳಿದ್ದಾರೆ. ಈ ವ್ಯಾಕ್ಸಿನ್ ಅನ್ನು ಉನ್ನತ ಮಾನದಂಡಗಳ ಅಡಿ ಸಿದ್ಧಪಡಿಸಲಾಗಿದೆ. ನಮ್ಮ ಉಪಯೋಗಕ್ಕೆ ಸುರಕ್ಷಿತ ಎಂದು ನಾವು ಭಾವಿಸುವ ವಸ್ತುಗಳನ್ನು ಇದರ ತಯಾರಿಕೆಗೆ ಬಳಸಲಾಗಿದೆ ಹಾಗೂ ಈ ಟೆಸ್ಟ್ ನಲ್ಲಿ ಭಾಗವಹಿಸುವ ಕಾರ್ಯಕರ್ತರ ಮೇಲೆ ನಾವು ಸೂಕ್ಷ್ಮಗಾಗಿ ಗಮನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.