ಅಟಲ್ ಜೀ ಈಗ ಪಾಕಿಸ್ತಾನದ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್

ಅಟಲ್ ಬಿಹಾರಿ ವಾಜಪೇಯಿ ಅವರ ಮರಣದಿಂದಾಗಿ ಇಡೀ ದೇಶ ಶೋಕಸಾಗರದಲ್ಲಿ ಮುಳುಗಿದೆ. ಇದರ ಜೊತೆಯಲ್ಲಿ, ನೆರೆಯ ಪಾಕಿಸ್ತಾನದಲ್ಲಿ ಜನರು ಕೂಡ ಅಟಲ್ ಜೀ  ಸಾವಿನಿಂದ ದುಃಖಿತರಾಗಿದ್ದಾರೆ.

Last Updated : Aug 17, 2018, 09:05 AM IST
ಅಟಲ್ ಜೀ ಈಗ ಪಾಕಿಸ್ತಾನದ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ title=
File Photo

ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಅವರ ಮರಣದಿಂದಾಗಿ ಇಡೀ ದೇಶ ಶೋಕಸಾಗರದಲ್ಲಿ ಮುಳುಗಿದೆ. ಇದರ ಜೊತೆಯಲ್ಲಿ, ನೆರೆಯ ಪಾಕಿಸ್ತಾನದಲ್ಲಿ ಜನರು ಕೂಡ ಅಟಲ್ ಜೀ ಸಾವಿನಿಂದ ದುಃಖಿತರಾಗಿದ್ದಾರೆ. ಅಟಲ್ ಜೀ ಅವರ ನಿಧನದ ನಂತರ, ಪಾಕಿಸ್ತಾನದ ಜನರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಪ್ರಾರಂಭಿಸಿದರು. ಕೆಲವೇ ನಿಮಿಷಗಳಲ್ಲಿ #AtalBihariVajpayee ಆಶ್ ಟ್ಯಾಗ್ ನೊಂದಿಗೆ ಅವರು ಟ್ವಿಟ್ಟರ್ನಲ್ಲಿ ಟಾಪ್ ಟ್ರೆಂಡಿಂಗ್ ಆಗಿತ್ತು. ಆದಾಗ್ಯೂ ಇದು ನಂತರ ಎರಡನೇ ಸ್ಥಾನದಲ್ಲಿದೆ.

ಪಾಕಿಸ್ತಾನದೊಂದಿಗೆ ಭಾರತದ ಸಂಬಂಧಗಳನ್ನು ಸುಧಾರಿಸಲು ಅಟಲ್ ಜೀ ಯವರ ಪ್ರಯತ್ನಗಳಿಗಾಗಿ ಹೆಚ್ಚಿನ ಜನರು ಅವರನ್ನು ಶ್ಲಾಘಿಸುತ್ತಿದ್ದಾರೆ. ತಮ್ಮ ಹೃದಯವನ್ನು ಮುಟ್ಟಿದ ಸ್ನೇಹದ ಹಾದಿಯಲ್ಲಿ ಅಟಲ್ ಜೀ ಪಾಕಿಸ್ತಾನಕ್ಕೆ ಬಂದಿದ್ದಾರೆ ಎಂದು ಕೆಲವರು ಹೇಳುತ್ತಾರೆ. 

ನಿಜವಾದ ಅರ್ಥದಲ್ಲಿ ಅಟಲ್ ಜೀ ಮಾತ್ರ ಪಾಕಿಸ್ತಾನ ಮತ್ತು ಭಾರತದ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿದ್ದಾರೆ ಎಂದು ಹಲವರು ಹೇಳಿದ್ದಾರೆ.

ಪಾಕಿಸ್ತಾನದ ಜನರಿಂದಲೂ ಸಂತಾಪ
"ಬಿಜೆಪಿಯಿಂದ ಬಂದಿದ್ದರೂ, ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪಾಕಿಸ್ತಾನದಲ್ಲಿ ತುಂಬಾ ಇಷ್ಟಪಟ್ಟಿದ್ದಾರೆ. ಅದಲ್ಲದೆ, ಅವರು ದೋಸ್ತಿ ಬಸ್ ನಲ್ಲಿ ಪಾಕಿಸ್ತಾನಕ್ಕೆ ಬಂದರು. ಆ ಕಾರಣದಿಂದ ಅವರು ಪಾಕಿಸ್ತಾನದಲ್ಲಿ ನಂಬರ್ ಒನ್ ಟ್ರೆಂಡ್ ನಲ್ಲಿದ್ದಾರೆ" ಎಂದು ಒಮರ್ ಆರ್ ಪುರೈಷಿ ಬರೆದಿದ್ದಾರೆ. ಅವರು ತಮ್ಮ ಟ್ವೀಟ್ ನೊಂದಿಗೆ ಅಟಲ್ ಬಿಹಾರಿ ವಾಜಪೇಯಿಯವರಿ ಪಾಕಿಸ್ತಾನದ ಟ್ವೀಟ್ ನಲ್ಲಿ ಟ್ರೆಂಡ್ ಆಗಿರುವ ಒಂದು ಶಾಟ್ ಅನ್ನು ಪೋಸ್ಟ್ ಮಾಡಿದರು.

ಪಾಕಿಸ್ತಾನದ ಪತ್ರಕರ್ತ ಮೆಹರ್ ತರಾರ್ ಎಂಬುವರು, ' ಅಟಲ್ ಬಿಹಾರಿ ವಾಜಪೇಯಿ ಸಾಹೇಬರೇ ನಿಮಗೆ ಶ್ರದ್ಧಾಂಜಲಿ. ಸ್ನೇಹದ ಸಂದೇಶ ಹೊತ್ತು, ಸಾದಾ-ಇ-ಸರ್ಹದ್ ಬಸ್ ನಲ್ಲಿ ಲಾಹೋರ್ ಗೆ ಪ್ರಯಾಣಿಸಿದ್ದ ಭಾರತೀಯ ಪ್ರಧಾನಮಂತ್ರಿ, ಯಾರು ಭಾರತ ಮತ್ತು ಪಾಕಿಸ್ತಾನದ ರಕ್ತಸಿಕ್ತ ಇತಿಹಾಸವನ್ನು ಮೀರಿ ಹೋಗಬೇಕೆಂದು ಬಯಸಿ, ಸ್ನೇಹಿತರಾದವರು, ಅವರ ನಿಧನಕ್ಕಾಗಿ ಸಂತಾಪ ಎಂದು ಬರೆದಿದ್ದಾರೆ.

"ವಾಸ್ತವವಾಗಿ, ಅಟಲ್ ಸಾಹಬ್ ಒಬ್ಬ ಮಹಾನ್ ರಾಜಕಾರಣಿಯಾಗಿದ್ದರು ಮತ್ತು ಅವರ ಸರ್ಕಾರದ ಸಮಯದಲ್ಲಿ, ಭಾರತ ಮತ್ತು ಪಾಕಿಸ್ತಾನವು ನಿಜವಾದ ಶಾಂತಿಯ ಸಮೀಪದಲ್ಲಿತ್ತು, ಅವರಿಗೆ ಶ್ರದ್ಧಾಂಜಲಿ" ಎಂದು  ಜಿಬ್ರಾನ್ ಅಶ್ರಫ್ ಎಂಬುವರು ಬರೆದಿದ್ದಾರೆ. ಅಟಲ್ ಜೀ ಅವರ ಸಾವಿನ ಹೊರತಾಗಿಯೂ, ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಪುನಃಸ್ಥಾಪಿಸಬಹುದೆಂದು ಅವರು ನಿರೀಕ್ಷಿಸಿದ್ದಾರೆ.

"ಅಟಲ್ ಬಿಹಾರಿ ವಾಜಪೇಯಿ ಭಾರತ-ಪಾಕ್ ಶಾಂತಿ ಸಂಕೇತದ ನಿಜವಾದ ಬೆಂಬಲಿಗರಾಗಿದ್ದರು. ಶಾಂತಿ ಪುನಃಸ್ಥಾಪನೆ ಮತ್ತು ಎರಡು ದೇಶಗಳ ನಡುವೆ ಉತ್ತಮ ಸಂಬಂಧವನ್ನು ಉಂಟುಮಾಡುವ ಅವರ ಪ್ರಯತ್ನಗಳು ಯಾವಾಗಲೂ ನೆನಪಿನಲ್ಲಿರುತ್ತವೆ. ವಾಜಪೇಯಿ ಸಾಹೇಬರಿಗೆ ಶ್ರದ್ಧಾಂಜಲಿ ಎಂದು ಫೈಝಲ್ ಇಕ್ಬಾಲ್ ಎಂಬುವವರು ಬರೆದಿದ್ದಾರೆ. 

Trending News