TikTok ಬಳಿಕ ಇದೀಗ Alibaba ಮೇಲೆ ತೂಗುಗತ್ತಿ! ಬಿಜಿಂಗ್ ಹೃದಯ ಬಡಿತ ಹೆಚ್ಚಿಸಿದ ಟ್ರಂಪ್ ಹೇಳಿಕೆ

ಅಲಿಬಾಬಾದಂತಹ ಇನ್ನೂ ಕೆಲ ಚೀನಾ ಮಾಲೀಕತ್ವದ ಕಂಪನಿಗಳಿಗೆ ಸರ್ಕಾರ ಕಡಿವಾಣ ಹಾಕಲಿದೆಯೇ? ಎಂದು ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಅವರನ್ನುಪ್ರಶ್ನಿಸಲಾಗಿ, ಇದಕ್ಕೆ ಉತ್ತರ ನೀಡಿರುವ ಟ್ರಂಪ್ ,"ಸರಿ, ನಾವು ಇನ್ನೂ ಹಲವು ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದೇವೆ ಮತ್ತು ಹೌದು, ಅದು ಸಂಭವಿಸುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

Last Updated : Aug 16, 2020, 03:44 PM IST
TikTok ಬಳಿಕ ಇದೀಗ Alibaba ಮೇಲೆ ತೂಗುಗತ್ತಿ! ಬಿಜಿಂಗ್ ಹೃದಯ ಬಡಿತ ಹೆಚ್ಚಿಸಿದ ಟ್ರಂಪ್ ಹೇಳಿಕೆ title=

ನವದೆಹಲಿ: ಟಿಕ್ ಟೋಕ್ ನಿಷೇಧದ ನಂತರ, ಇದೀಗ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೊಂದು ಹೇಳಿಕೆ ನೀಡುವ ಮೂಲಕ ಬೀಜಿಂಗ್ ಎದೆಬಡಿತ ಮತ್ತೊಮ್ಮೆ ಹೆಚ್ಚಿಸಿದ್ದಾರೆ.  ಅಲಿಬಾಬಾದಂತಹ ಚೀನಾದ ಟೆಕ್ ದೈತ್ಯ ಕಂಪನಿಗಳ ಮೇಲೆ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಟ್ರಂಪ್ ಶನಿವಾರ ಹೇಳಿದ್ದಾರೆ. ಟ್ರಂಪ್ ಅವರ ರುಟೀನ್ ಸುದ್ದಿಗೊಷ್ಟಿಯ ವೇಳೆ  ಅಲಿಬಾಬಾದಂತಹ ಇನ್ನೂ ಕೆಲ ಚೀನಾದ ಮಾಲೀಕತ್ವದ ಕಂಪನಿಗಳ ಮೇಲೆ ಸರ್ಕಾರ ಹಿಡಿತ ಸಾಧಿಸಲಿದೆಯೇ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ.

 ಇದಕ್ಕೆ ಉತ್ತರ ನೀಡಿರುವ ಟ್ರಂಪ್, "ಸರಿ! ನಾವು ಇನ್ನೂ ಹಲವು ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದೇವೆ ಮತ್ತು ಹೌದು, ಅದು ಸಂಭವಿಸಬಹುದು" ಎಂದಿದ್ದಾರೆ. ಯುಎಸ್ನಲ್ಲಿ ಟಿಕ್ ಟಾಕ್ ಕಿರು ವಿಡಿಯೋ ಆ್ಯಪ್ ಅನ್ನು ನಿಷೇಧಿಸಲು ಆದೇಶಗಳನ್ನು ನೀಡುವ ಮೊದಲೇ ಟ್ರಂಪ್ ತಂತ್ರಜ್ಞಾನ ಕ್ಷೇತ್ರದ ಚೀನೀ ಕಂಪನಿಗಳ ವಿರುದ್ಧ ತನ್ನ ಅಭಿಯಾನ ಆರಂಭಿಸಿದ್ದಾರೆ.

ಡೇಟಾ ಸೆಕ್ಯೋರಿಟಿ ಅಡಿ ಕಾರ್ಯಾಚರಣೆ
ಇದಕ್ಕೂ ಮೊದಲು ಟಿಕ್ ಟಾಕ್ ನ ಮೂಲ ಕಂಪನಿ ಬೈಟ್ ಡಾನ್ಸ್ (Bytedance) ವಿರುದ್ಧ ಫರ್ಮಾನು ಹೊರಡಿಸಿದ್ದ ಟ್ರಂಪ್ 90 ದಿನಗಳಲ್ಲಿ ಅಮೇರಿಕಾದಿಂದ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ತಮ್ಮ ಅಧ್ಯಕ್ಷೀಯ ಅವಧಿಯ ಆರಂಭದಿಂದಲೇ ಟ್ರಂಪ್ ಅಮೇರಿಕಾದೊಂದಿಗಿನ ಚೀನಾದ ಸಂಬಂಧವನ್ನು ಸಂಪೂರ್ಣ ರದ್ದುಗೊಳಿಸಿದ್ದಾರೆ. ಇದಲ್ಲದೆ ಕೊರೊನಾದ ಆರಂಭದಿಂದಲೂ ಕೂಡ ಟ್ರಂಪ್ ಬಿಜಿಂಗ್ ವಿರುದ್ಧ ಅತ್ಯಂತ ಆಕ್ರಮಣಕಾರಿ ನಿಲುವನ್ನು ತಳೆದಿದ್ದಾರೆ.

ಕಳೆದ ವರ್ಷ ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಚೀನಾ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಟ್ರಂಪ್ ಹಲವು ವೇದಿಕೆಗಳಲ್ಲಿ ಹಲವು ಬಾರಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಚೀನಾ ಕಾರಣವೇ ಈ ಸಾಂಕ್ರಾಮಿಕ ರೋಗ ಇಡೀ ಜಗತ್ತಿಗೆ  ಗಂಡಾಂತರಕ್ಕೆ ಈಡು ಮಾಡಿದೆ. ಆದರೆ ಇಲ್ಲಿ ವಿಶೇಷ ಎಂದರೆ ಚೀನಾ ಟ್ರಂಪ್ ಅವರ ಇಂತಹ ಆರೋಪಗಳನ್ನು ಹಲವು ಬಾರಿ ತಿರಸ್ಕರಿಸಿದೆ. ಇದರಿಂದ ಟ್ರಂಪ್ ಚೀನಾದ ಪ್ರತಿಯೊಂದು ಸಂಗತಿಗಳನ್ನು ನಿಷೇಧಿಸಲು ಉತ್ಸುಕರಾಗಿದ್ದಾರೆಂಬಂತೆ ತೋರುತ್ತಿದೆ.

ಬಿಜಿಂಗ್ ಮೇಲೆ ಗೂಢಚಾರಿಕೆಯ ಆರೋಪ
ಇದಕ್ಕೂ ಮೊದಲು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ತಂತ್ರಜ್ಞಾನ ಕ್ಷೇತ್ರದ ಅತಿ ದೊಡ್ಡ ಕಂಪನಿ ಹುವಾವೆ ಮೇಲೆ ಗೂಧಚಾರಿಕೆಯ ಆರೋಪ ಮಾಡಿ, ಅಮೇರಿಕಾದಲ್ಲಿ 5G ಹಾಗೂ ಹುವಾವೆಯನ್ನು ಗುರಿಯಾಗಿಸಿದ್ದರು. ಅತ್ತ ಇನ್ನೊಂದೆಡೆ ಯುರೋಪ್ ನ ಹಲವು ದೇಶಗಳೂ ಕೂಡ ಕಂಪನಿಯಿಂದ 5G ತಂತ್ರಜ್ಞಾನ ಹಾಗೂ ಉಪಕರಣಗಳ ಖರೀದಿಯ ಮೇಲೆ ನಿರ್ಬಂಧ ವಿಧಿಸುವುದಾಗಿ ಘೋಷಿಸಿದ್ದರು.

Trending News