ಬಿಗ್‌ಬಾಸ್‌ ಫಿನಾಲೆ ತಲುಪಲು ಹಣದ ಒಪ್ಪಂದ ಮಾಡಿಕೊಂಡಿದ್ದಾರಾ ಈ ಲೇಡಿ ಸ್ಪರ್ಧಿ! ಕೊನೆಗೂ ಬಹಿರಂಗವಾಯ್ತು ಮಹಾಮೋಸ!

Bigg Boss: ಸಿರೀಯಲ್ ನಟಿ ಇಶಾ ಸಿಂಗ್ ಅವರು 'ಬಿಗ್ ಬಾಸ್ 18' ರ ತಯಾರಕರೊಂದಿಗೆ ವಿಶೇಷ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಹುಟ್ಟಿಕೊಂಡಿವೆ. ಟಾಪ್ 6 ಮತ್ತು ಗ್ರ್ಯಾಂಡ್ ಫಿನಾಲೆ ತನಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವರು ನಿರ್ಮಾಪಕರಿಗೆ ನಿರ್ದಿಷ್ಟ ಶೇಕಡಾವಾರು ಸಂಭಾವನೆಯನ್ನು ಪಾವತಿಸಿದ್ದಾರೆ ಎಂದು ಹೇಳಲಾಗುತ್ತದೆ.‌   

Written by - Savita M B | Last Updated : Jan 20, 2025, 10:08 AM IST
  • 'ಬಿಗ್ ಬಾಸ್ 18' ನಲ್ಲಿ ಒಟ್ಟು 23 ಸ್ಪರ್ಧಿಗಳು ಭಾಗವಹಿಸಿದ್ದರು.
  • ಟಾಪ್ 6 ರಲ್ಲಿ ಇಶಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಬಿಗ್‌ಬಾಸ್‌ ಫಿನಾಲೆ ತಲುಪಲು ಹಣದ ಒಪ್ಪಂದ ಮಾಡಿಕೊಂಡಿದ್ದಾರಾ ಈ ಲೇಡಿ ಸ್ಪರ್ಧಿ! ಕೊನೆಗೂ ಬಹಿರಂಗವಾಯ್ತು ಮಹಾಮೋಸ!  title=

Bigg Boss Finale: 'ಬಿಗ್ ಬಾಸ್ 18' ನಲ್ಲಿ ಒಟ್ಟು 23 ಸ್ಪರ್ಧಿಗಳು ಭಾಗವಹಿಸಿದ್ದರು. ಅವರಲ್ಲಿ ಆರು ಮಂದಿ ಮಾತ್ರ ಗ್ರ್ಯಾಂಡ್ ಫಿನಾಲೆ ತಲುಪಲು ಸಾಧ್ಯವಾಯಿತು. ಪ್ರತಿ ವಾರ ಮಾಡುವ ಟಾಸ್ಕ್‌ಗಳು, ಆ ಟಾಸ್ಕ್‌ಗಳಲ್ಲಿ ಮಾಡಿದ ಬೆಟ್ಟಿಂಗ್‌ಗಳು, ಸ್ಪರ್ಧಿಗಳು ಪಡೆದ ಮತಗಳು ಮತ್ತು ಒಟ್ಟಾರೆ ಜನಪ್ರಿಯತೆಯ ಆಧಾರದ ಮೇಲೆ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಟಾಪ್ 6 ಸ್ಪರ್ಧಿಗಳಲ್ಲಿ ಇಶಾ ಸಿಂಗ್, ವಿವಿಯನ್ ದೇಸೇನಾ, ಕರಣ್‌ವೀರ್ ಮೆಹ್ರಾ, ಅವಿನಾಶ್ ಮಿಶ್ರಾ, ಚುಮ್ ದರಾಂಗ್ ಮತ್ತು ರಜತ್ ದಲಾಲ್ ಸೇರಿದ್ದಾರೆ. ಇವರಲ್ಲಿ ಖ್ಯಾತ ಕಿರುತೆರೆ ನಟಿ ಇಶಾ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಕಾರಣಗಳಿಂದ ಸುದ್ದಿಯಾಗಿದ್ದಾರೆ. ಕೆಲವರು ಆಕೆಯನ್ನು 'ಬಿಗ್ ಬಾಸ್‌ನ ಗರ್ಲ್‌ಫ್ರೆಂಡ್' ಎಂದು ಕರೆದರೆ, ಇನ್ನು ಕೆಲವರು 'ಚುಗ್ಲಿ ಆಂಟಿ' ಎಂದು ಟೀಕಿಸಿದ್ದಾರೆ. ಈ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೋಲ್‌ಗೆ ಒಳಗಾದ ಸ್ಪರ್ಧಿ ಇಶಾ ಎಂದು ಹೇಳಿದರೆ ತಪ್ಪಾಗಲಾರದು. ಬಿಗ್ ಬಾಸ್ ಮನೆಯಲ್ಲಿ ಟಾಪ್ 6 ರಲ್ಲಿ ಇಶಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ-ಬಿಗ್‌ ಬಾಸ್‌ ಡಬಲ್‌ ಎಲಿಮಿನೇಷನ್‌ನಿಂದ ಪಾರಾದರೂ ಫಿನಾಲೆ ತಲುಪಲ್ವಾ ಈ ಸ್ಟ್ರಾಂಗ್‌ ಕಂಟೆಸ್ಟಂಟ್‌! ಗೌತಮಿ, ಧನರಾಜ್‌ ಬಳಿಕ ಮತ್ತೊಬ್ಬ ಸ್ಪರ್ಧಿ ರಾತ್ರೋ ರಾತ್ರಿ ಔಟ್‌!!

ಗ್ರ್ಯಾಂಡ್ ಫಿನಾಲೆ ತಲುಪಲು ಬಿಗ್ ಬಾಸ್ ಮೇಕರ್‌ಗಳೊಂದಿಗೆ ಇಶಾ ಸಿಂಗ್ ದೊಡ್ಡ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಇತ್ತೀಚೆಗೆ ಹೇಳಲಾಗಿದೆ. ಈ ಒಪ್ಪಂದದ ಪ್ರಕಾರ, ಇಶಾ 'ಬಿಗ್ ಬಾಸ್ 18' ನಿಂದ ತನ್ನ ಗಳಿಕೆಯ 30 ಪ್ರತಿಶತವನ್ನು ನಿರ್ಮಾಪಕರಿಗೆ ನೀಡಿದ್ದಾಳೆ ಎನ್ನಲಾಗುತ್ತಿದೆ.. ಆದರೆ ಈ ಮಾತುಕತೆಯನ್ನು ಇಶಾ ಕುಟುಂಬ ಮತ್ತು ಅವರ ತಂಡ ನಿರಾಕರಿಸಿದೆ. ಈ ವಿಚಾರದಲ್ಲಿ ಇಶಾ ಕುಟುಂಬ ಸತ್ಯಾಂಶ ಹೊರ ತಂದಿದೆ. “ಇಶಾ ಅಂತಿಮ ಹಂತಕ್ಕೆ ಬರಲು ತಯಾರಕರಿಗೆ 30 ಪ್ರತಿಶತದಷ್ಟು ಸಂಭಾವನೆಯನ್ನು ಪಾವತಿಸುತ್ತಾರೆ ಎಂಬ ಮಾತುಗಳು ಸುಳ್ಳು. ಅಂತಹ ಚರ್ಚೆಗಳು ಅವಳು ವರ್ಷಗಳಲ್ಲಿ ಮಾಡಿದ ಕಠಿಣ ಪರಿಶ್ರಮ ಮತ್ತು ಕೆಲಸದ ಮೇಲಿನ ಅವಳ ಶ್ರದ್ಧೆಯನ್ನು ಅವಮಾನಿಸುತ್ತವೆ. ತನ್ನ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದಾಗಿ ಬಿಗ್ ಬಾಸ್ 18 ರ ಗ್ರ್ಯಾಂಡ್ ಫಿನಾಲೆಯಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದ್ದಾಳೆ" ಎಂದು ಇಶಾ ತಂಡ ವಿವರಿಸಿದೆ.

ಇದನ್ನೂ ಓದಿ-BBK 11: ಡಬಲ್‌ ಎಲಿಮಿನೇಷನ್‌ ಬೆನ್ನಲ್ಲೇ ಮೋಕ್ಷಿತಾ ಬಳಿಕ ಬಿಗ್‌ಬಾಸ್‌ ಫಿನಾಲೆಗೆ ಎಂಟ್ರಿ ಕೊಟ್ಟೇಬಿಟ್ರು ಯಾರೂ ಊಹಿಸದ ಸ್ಪರ್ಧಿ!

ಇಶಾ ಅವರ ಕುಟುಂಬ ಸದಸ್ಯರು ಕೂಡ ತಮ್ಮ ವಿರುದ್ಧ ಇಂತಹ ವದಂತಿಗಳನ್ನು ಹಬ್ಬಿಸುವವರನ್ನು ಟೀಕಿಸಿದ್ದಾರೆ. “ನೀವು ಈಶಾ ಬಗ್ಗೆ ಏನಾದರೂ ಹೇಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ತನ್ನ ಕಠಿಣ ಪರಿಶ್ರಮದಿಂದ ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾಳೆ" ಎಂದು ಹೇಳಿದ್ದಾರೆ.. 'ಬಿಗ್ ಬಾಸ್ 18'ರ ರೌಂಡ್ 2 ರಲ್ಲಿ ಇಶಾ ಅವರನ್ನು ಬೆಂಬಲಿಸಲು ಅವರ ಸಹೋದರ ಬಿಗ್ ಬಾಸ್ ಮನೆಗೆ ತಲುಪಿದರು. ಆದರೆ ಇಶಾಗೆ 'ಬಿಗ್ ಬಾಸ್ 18' ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಆಕೆಯ ಪಯಣ ಕೇವಲ ಟಾಪ್ 6ರ ವರೆಗೆ ಮಾತ್ರವಾಗಿತ್ತು... ಪ್ರೇಕ್ಷಕರಿಂದ ಕಡಿಮೆ ಮತಗಳು ಬಂದ ಕಾರಣ ಇಶಾ ಆರನೇ ಸ್ಥಾನದಿಂದ ಎಲಿಮಿನೇಟ್ ಆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News