Air India News: Air India ಗೆ Ilker Ayci ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬರುತ್ತಿಲ್ಲ! ಕಾರಣ ಇಲ್ಲಿದೆ

Air India CEO-MD Appointment: ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗುವ ಪ್ರಸ್ತಾಪವನ್ನು ಟರ್ಕಿಶ್ ಪ್ರಜೆ ಇಲ್ಕರ್ ಐಸಿ ತಿರಸ್ಕರಿಸಿದ್ದಾರೆ.

Written by - Nitin Tabib | Last Updated : Mar 1, 2022, 04:12 PM IST
  • Air India ಮುಖ್ಯಸ್ಥ ಸ್ಥಾನ ತಿರಸ್ಕರಿಸಿದ Ilker Ayci.
  • ಟಾಟಾ ಸನ್ಸ್ ನಿರ್ಧಾರಕ್ಕೆ ಆಕ್ಷೇಪಿಸಿದ್ದ SJM
  • ಫೆಬ್ರುವರಿ 14 ರಂದು ಏರ್ ಇಂಡಿಯಾ ಈ ಕುರಿತು ಘೋಷಣೆ ಮಾಡಿತ್ತು
Air India News: Air India ಗೆ Ilker Ayci ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬರುತ್ತಿಲ್ಲ! ಕಾರಣ ಇಲ್ಲಿದೆ title=
Air India CEO-MD Appointment (File Photo)

Air India: ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗುವ ಪ್ರಸ್ತಾಪವನ್ನು ಟರ್ಕಿಶ್ ಪ್ರಜೆ ಇಲ್ಕರ್ ಐಸಿ (Ilker Ayci) ತಿರಸ್ಕರಿಸಿದ್ದಾರೆ. ವಿಮಾನಯಾನ ಉದ್ಯಮದ ಮೂಲಗಳು ಮಂಗಳವಾರ ಈ ಮಾಹಿತಿಯನ್ನು ನೀಡಿವೆ. ಟಾಟಾ ಸನ್ಸ್ ಫೆಬ್ರವರಿ 14 ರಂದು ಟರ್ಕಿಯ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ಇಲ್ಕರ್ ಐಸಿ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು  ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡುವುದಾಗಿ ಘೋಷಿಸಿತ್ತು.

ಇದನ್ನೂ ಓದಿ-ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಅನ್ನೇ ಏಕೆ ಆಯ್ಕೆ ಮಾಡುತ್ತಾರೆ?

ಇದಕ್ಕೂ ಮೊದಲು 14 ಫೆಬ್ರವರಿ 2022 ರಂದು, ಟಾಟಾ ಸನ್ಸ್ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ CEO ಮತ್ತು MD ಆಗಿ ನೇಮಕ ಮಾಡಿತ್ತು. ಇಲ್ಕರ್ ಐಸಿ ಅವರ ಉಮೇದುವಾರಿಕೆಯನ್ನು ಪರಿಗಣಿಸಲು ಏರ್ ಇಂಡಿಯಾ ಮಂಡಳಿಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ, ಇದರಲ್ಲಿ ಟಾಟಾ ಸನ್ಸ್ (Tata Sons) ಅಧ್ಯಕ್ಷ ಎನ್ ಚಂದ್ರಶೇಖರನ್ ( N Chandrasekaran)  ಕೂಡ ವಿಶೇಷ ಆಹ್ವಾನಿತರಾಗಿದ್ದರು. ಇಲ್ಕರ್ ಐಸಿಯನ್ನು ಅವರು ಏಪ್ರಿಲ್ 1, 2022 ರಿಂದ  ಅಧಿಕಾರ ವಹಿಸಿಕೊಳ್ಳಬೇಕಿತ್ತು. ಇಲ್ಕರ್ ಐಸಿ ಇದುವರೆಗೂ ಕೂಡ ಟರ್ಕಿಶ್ ಏರ್‌ಲೈನ್ಸ್‌ನ (Turkish Airlines) ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ-Russia Ukraine war : ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವು

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ ಮಂಚ್ (SJM) ಶುಕ್ರವಾರ ಏರ್ ಇಂಡಿಯಾಗೆ  ಇಲ್ಕರ್ ಐಸಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ (MD) ಆಗಿ ನೇಮಿಸಲು ಸರ್ಕಾರವು ಅನುಮತಿ ನೀಡಬಾರದು ಎಂದು ಹೇಳಿತ್ತು. ಈ ಕುರಿತು ಮಾತನಾಡಿದ್ದ ಸ್ವದೇಶಿ ಜಾಗರಣ ಮಂಚ್‌ನ ಸಹ ಸಂಚಾಲಕ ಅಶ್ವಿನಿ ಮಹಾಜನ್,  ಈ ವಿಷಯದ ಬಗ್ಗೆ ಸರ್ಕಾರವು "ಈಗಾಗಲೇ ಸೂಕ್ಷ್ಮವಾಗಿದೆ" ಮತ್ತು ವಿಷಯವನ್ನು "ಬಹಳ ಗಂಭೀರವಾಗಿ" ಆಲೋಚಿಸುತ್ತಿದೆ ಎಂದು ಹೇಳಿದ್ದಾರೆ. ಹೊಸದಾಗಿ ನೇಮಕಗೊಳ್ಳುತ್ತಿರುವ CEO ಮತ್ತು MD ಯನ್ನು SJM ಏಕೆ ವಿರೋಧಿಸುತ್ತಿದೆ ಎಂದು ಪ್ರಶ್ನಿಸಿದ್ದಾಗೆ, ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ  ಎಂದು ಮಹಾಜನ್ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ-Russia Ukraine war : ಭಾರತೀಯರನ್ನು ಮರಳಿ ಕರೆತರುವ ಕಾರ್ಯಾಚರಣೆಯಲ್ಲಿ ವಾಯುಪಡೆ ಭಾಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News