ನವದೆಹಲಿ: ಕೇರಳದಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಮಾಲ್ಡೀವ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯದಿಂದಾಗಿ ತಪ್ಪು ರನ್ ವೇಯಲ್ಲಿ ಇಳಿದ ಘಟನೆ ಶುಕ್ರವಾರ ನಡೆದಿದೆ.
ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎನ್ನಲಾಗಿದ್ದು, ವಿಮಾನದ ಎರಡು ಚಕ್ರಗಳಿಗೆ ಹಾನಿಯಾಗಿದೆ.
ಈ ಬಗ್ಗೆ ವರದಿ ಬಿಡುಗಡೆ ಮಾಡಿರುವ ಏರ್ ಇಂಡಿಯಾ, ಏರ್ ಬಸ್ A320 ನಿಯೋ ಏರ್ ಕ್ರಾಫ್ಟ್ ನಿರ್ಮಾಣ ಹಂತದಲ್ಲಿದ್ದ ರನ್ ವೇಯಲ್ಲಿ ಬಂದಿಳಿದಿದ್ದು, ವಿಮಾನದಲ್ಲಿದ್ದ 136 ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದೆ. ಮಾಲ್ದೀವ್ಸ್‌ನ ಮಾಲೇ ವೆಲಾನಾ ಇಂಟರ್ ನ್ಯಾಶನಲ್ ಏರ್‌ಪೋರ್ಟ್'ನಲ್ಲಿ ಈ ಘಟನೆ ನಡೆದಿದೆ.
Air India flight #AI263 landed at the nonoperational runway (under construction) at Male Velana International Airport in the Maldives: Flight24 pic.twitter.com/utL4XljH8D
— ANI (@ANI) September 7, 2018