ನವದೆಹಲಿ: ಶ್ರೀಲಂಕಾ ತಾತ್ಕಾಲಿಕವಾಗಿ ಫೇಸ್ಬುಕ್ ಮತ್ತು ವಾಟ್ಸಪ್ ಸೇರಿದಂತೆ ಕೆಲವು ಸಾಮಾಜಿಕ ಮಾಧ್ಯಮ ಜಾಲಗಳನ್ನು ನಿಷೇಧಿಸಿದೆ.ಈಸ್ಟರ್ ದಿನದಂದು ಸಂಭವಿಸಿದ ಬಾಂಬ್ ದಾಳಿಯ ನಂತರ ಮಸೀದಿ ಹಾಗೂ ಮುಸ್ಲಿ ವ್ಯಾಪಾರಿಗಳ ಮೇಲೆ ದಾಳಿಗಳು ನಡೆದ ಹಿನ್ನಲೆಯಲ್ಲಿ ಈಗ ಶ್ರೀಲಂಕಾ ಈ ಕ್ರಮವನ್ನು ತೆಗೆದುಕೊಂಡಿದೆ.
ಭಾನುವಾರದಂದು ಬಹುಪಾಲು ಕ್ರಿಶ್ಚಿಯನ್ ರೇ ಇರುವ ಪಶ್ಚಿಮ ಕರಾವಳಿಯ ಪಟ್ಟಣ ಚಿಲಾದಲ್ಲಿ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಮೂಲಕ ಪ್ರಾರಂಭವಾದ ವಿವಾದದ ನಂತರ ಹಲವಾರು ಮಸೀದಿಗಳು ಹಾಗೂ ಮುಸ್ಲಿಂ ಅಂಗಡಿ ವ್ಯಾಪಾರಿಗಳ ಮೇಲೆ ಕಲ್ಲು ತೂರಾಟವನ್ನು ನಡೆಸಲಾಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ.
ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಪೋಸ್ಟ್ ಬರೆದುಕೊಂಡಿರುವ ಅಬ್ದುಲ್ ಹಮೀದ್ ಮೊಹಮದ್ ಹಸ್ಮಾರ್ ಅವರನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಮಿಲಿಟರಿ ವಕ್ತಾರ ಸುಮಿತ್ ಅಟ್ಟಪಟ್ಟು ಮಾತನಾಡುತ್ತಾ, ಹೆಚ್ಚಾಗಿ ಬೌದ್ಧ ಜಿಲ್ಲೆಯ ಜನರು ಬಂಧಿತ ವ್ಯಕ್ತಿಯ ಬಿಡುಗಡೆಗೆ ಒತ್ತಾಯಿಸಿದ್ದಾರೆ."ಪರಿಸ್ಥಿತಿಯನ್ನು ನಿಯಂತ್ರಿಸಲು, ರಾತ್ರಿಯ ವೇಳೆ ಪೊಲೀಸ್ ಕರ್ಫ್ಯೂ ವಿಧಿಸಲಾಗಿದೆ" ಎಂದು ಅಟ್ಟಪಟ್ಟು ಹೇಳಿದರು.
ಈಗದಾಳಿಯಲ್ಲಿ ಹಲವಾರು ಮಸೀದಿಗಳು ಮತ್ತು ಮುಸ್ಲಿಂ ಮನೆಗಳು ಹಾನಿಗೀಡಾಗಿವೆ ಎಂದು ಶ್ರೀಲಂಕಾದ ಮುಸ್ಲಿಂ ಕೌನ್ಸಿಲ್ ಹೇಳಿದೆ ಆದರೆ ನಿಖರವಾದ ಹಾನಿ ಮತ್ತು ಬಂಧಿಸಿರುವವರ ಸಂಖ್ಯೆಯು ಸ್ಪಷ್ಟವಾಗಿಲ್ಲ ಎನ್ನಲಾಗಿದೆ.