ಕಾಬೂಲ್ ವಶಕ್ಕೆ ಪಡೆದ ನಂತರ ಕಾಶ್ಮೀರ ಕುರಿತಂತೆ ಹೇಳಿಕೆ ನೀಡಿದ ತಾಲಿಬಾನ್

ಮೂಲಗಳ ಪ್ರಕಾರ, ತಾಲಿಬಾನ್ ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಆಂತರಿಕ ಸಮಸ್ಯೆ ಎಂದು ಹೇಳಿದೆ. ಕಾಶ್ಮೀರ ತಮ್ಮ ಅಜೆಂಡಾದಲ್ಲಿ ಇಲ್ಲ, ಇದು ಎರಡು ದೇಶಗಳ ನಡುವಿನ ಸಮಸ್ಯೆ ಎಂದು ತಾಲಿಬಾನ್‌ ಹೇಳಿದೆ. 

Written by - Ranjitha R K | Last Updated : Aug 17, 2021, 08:10 PM IST
  • ಕಾಶ್ಮೀರದ ಬಗ್ಗೆ ತಾಲಿಬಾನ್‌ ಅಭಿಪ್ರಾಯವೇನು?
  • ಕಾಬೂಲ್ ವಶಪಡಿಸಿಕೊಂಡ ನಂತರ ನೀಡಿದ ಹೇಳಿಕೆ
  • ಕಾಶ್ಮೀರ ಎರಡು ದೇಶಗಳ ನಡುವಿನ ಸಮಸ್ಯೆ ಎಂದ ತಾಲಿಬಾನ್
ಕಾಬೂಲ್ ವಶಕ್ಕೆ ಪಡೆದ ನಂತರ ಕಾಶ್ಮೀರ ಕುರಿತಂತೆ ಹೇಳಿಕೆ ನೀಡಿದ ತಾಲಿಬಾನ್  title=
ಕಾಶ್ಮೀರದ ಬಗ್ಗೆ ತಾಲಿಬಾನ್‌ ಅಭಿಪ್ರಾಯವೇನು? (photo zee news)

ನವದೆಹಲಿ : ಅಫ್ಘಾನಿಸ್ತಾನವನ್ನು ತಾಲಿಬಾನ್ (Taliban) ವಶಕ್ಕೆ ಪಡೆದ ನಂತರ, ಇದೀಗ ಪ್ರಪಂಚದಾದ್ಯಂತ ಭೀತಿ ಉಂಟಾಗಿದೆ. ಪ್ರಪಂಚದ ಎಲ್ಲಾ  ದೇಶಗಳ ಮೇಲೂ ಇದು ಪರಿಣಾಮ ಬೀರಿದೆ. ಆದರೆ, ತಾಲಿಬಾನ್ ನಿರಂತರವಾಗಿ ಅಭಿವೃದ್ಧಿ ಮತ್ತು ಜನರ ಪರವಾಗಿ ನೀಡುವ ಆಡಳಿತದ ಬಗ್ಗೆ ಮಾತನಾಡುತ್ತಿದೆ. ಈಗ ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ತಾಲಿಬಾನ್ ಹೇಳಿಕೆ ನೀಡಿದೆ. 

ಕಾಶ್ಮೀರ ಎರಡು ದೇಶಗಳ ನಡುವಿನ ವಿಚಾರ : 
ಮೂಲಗಳ ಪ್ರಕಾರ, ತಾಲಿಬಾನ್ ಕಾಶ್ಮೀರ (Kashmir) ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಆಂತರಿಕ ಸಮಸ್ಯೆ ಎಂದು ಹೇಳಿದೆ. ಕಾಶ್ಮೀರ ತಮ್ಮ ಅಜೆಂಡಾದಲ್ಲಿ ಇಲ್ಲ, ಇದು ಎರಡು ದೇಶಗಳ ನಡುವಿನ ಸಮಸ್ಯೆ ಎಂದು ತಾಲಿಬಾನ್‌ ಹೇಳಿದೆ. ಆದರೆ  ಪಾಕಿಸ್ತಾನದಲ್ಲಿ (Pakistan) ಆಶ್ರಯ ಪಡೆದಿರುವ ಲಷ್ಕರ್-ಎ-ತೊಯ್ಬಾ (lashkar e taiba) ಮತ್ತು ತೆಹ್ರೀಕ್-ಇ-ತಾಲಿಬಾನ್ ನಂತಹ ಭಯೋತ್ಪಾದಕ ಸಂಘಟನೆಗಳು ಅಫ್ಘಾನಿಸ್ತಾನದಲ್ಲಿಯೂ ತಮ್ಮ ಅಸ್ತಿತ್ವವನ್ನು ಹೊಂದಿವೆ. ಕಾಬೂಲ್‌ನ ಕೆಲವು ಪ್ರದೇಶಗಳಲ್ಲಿ, ತಾಲಿಬಾನ್ ಸಹಾಯದಿಂದ ಈ ಸಂಘನೆಗಳು ಕಾರ್ಯನಿರ್ವಹಿಸುತ್ತಿವೆ. 

ಇದನ್ನೂ ಓದಿ: Viral Video: ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಚಿಕ್ಕಮಕ್ಕಳಂತೆ ಆಟವಾಡಿದ ತಾಲಿಬಾನ್ ಉಗ್ರರು..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban) ಪ್ರವೇಶದ ನಂತರ, ಕಾಶ್ಮೀರದಲ್ಲೂ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಬಹುದು. ಕಾಶ್ಮೀರದಲ್ಲಿ  ಗಡಿ ನಿಯಂತ್ರಣ ರೇಖೆಯಿಂದ (LOC) ಸುಮಾರು 400 ಕಿಮೀ ದೂರದಲ್ಲಿ ತಾಲಿಬಾನಿಗಳಿರುವುದಾಗಿ ಹೇಳಲಾಗಿದೆ. ಈ ಹಿಂದೆ ಕೂಡ ಕಂದಹಾರ್ ಹೈಜಾಕ್ ನಂತಹ ಘಟನೆಗಳಲ್ಲಿ,  ಪಾಕಿಸ್ತಾನಿ ಭಯೋತ್ಪಾದಕರಿಗೆ, (Terrorist) ತಾಲಿಬಾನ್ ಸಹಾಯ ಮಾಡಿತ್ತು. ಸದ್ಯದ ಪರಿಸ್ಥಿತಿಯಲ್ಲಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ತಾಲಿಬಾನ್ ಅನ್ನು ತನ್ನ ಪ್ರಭಾವಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಬಹುದು ಎನ್ನಲಾಗಿದೆ. 

ಯೋಜನೆಯನ್ನು ಪೂರ್ಣಗೊಳಿಸಲು ಭಾರತಕ್ಕೆ ಮನವಿ ಮಾಡಿದ ತಾಲಿಬಾನ್ : 
ಈ ನಡುವೆ, ಅಫ್ಘಾನಿಸ್ತಾನದಲ್ಲಿ ತನ್ನ ಯೋಜನೆಗಳನ್ನು ಮುಂದುವರಿಸುವಂತೆ ತಾಲಿಬಾನ್ ಭಾರತಕ್ಕೆ ಮನವಿ ಮಾಡಿದೆ. ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಪಾಕಿಸ್ತಾನದ (Pakistan) ಸುದ್ದಿ ವಾಹಿನಿಯೊಂದಿಗಿನ ಸಂಭಾಷಣೆಯಲ್ಲಿ ಭಾರತವು ಅಫ್ಘಾನಿಸ್ತಾನದಲ್ಲಿ ತನ್ನ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. ಏಕೆಂದರೆ ಈ ಎಲ್ಲಾ ಯೋಜನೆಗಳು ಇಲ್ಲಿನ ಪ್ರಜೆಗಳಿಗಾಗಿ ಎಂದವರು ಹೇಳಿದ್ದಾರೆ.  ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಭಾರತವು ಹಲವಾರು ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ. 

ಇದನ್ನೂ ಓದಿ: Viral Photo: ಮುಂಬೈ ಲೋಕಲ್ ಆಗಿ ಮಾರ್ಪಟ್ಟ US ಮಿಲಿಟರಿ ವಿಮಾನ, 134 ಸೈನಿಕರು ಪ್ರಯಾಣಿಸುವ ವಿಮಾನದಲ್ಲಿ 640 ಆಫ್ಘನ್ ನಾಗರಿಕರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News