Afghanistan Crisis: ತಾಲಿಬಾನಿಗಳ ಮುಂದೆ ಕಾಬೂಲ್ ಸರೆಂಡರ್! ಅಧಿಕಾರ ಹಸ್ತಾಂತರಕ್ಕೆ ಮಾತುಕತೆ ಆರಂಭ !

Afghanistan Crisis: ಅಫ್ಘಾನಿಸ್ತಾನವನ್ನು  (Afghanistan) ಇದೀಗ ತಾಲಿಬಾನ್ ಆಕ್ರಮಿಸಿಕೊಂಡಿದೆ. ಅಧಿಕಾರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಅಲಿ ಅಹ್ಮದ್ ಜಲಾಲಿ (Ali Ahmed Jalali) ಹೊಸ ತಾತ್ಕಾಲಿಕ ಸರ್ಕಾರದ ಮುಖ್ಯಸ್ಥರಾಗಿ ಭಾನುವಾರ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. 

Written by - Nitin Tabib | Last Updated : Aug 15, 2021, 06:28 PM IST
  • ಅಫ್ಘಾನಿಸ್ತಾನವನ್ನು (Afghanistan) ಇದೀಗ ತಾಲಿಬಾನ್ ಆಕ್ರಮಿಸಿಕೊಂಡಿದೆ.
  • ಅಧಿಕಾರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ.
  • ಮೂಲಗಳ ಪ್ರಕಾರ, ಅಲಿ ಅಹ್ಮದ್ ಜಲಾಲಿ ಹೊಸ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ಭಾನುವಾರ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
Afghanistan Crisis: ತಾಲಿಬಾನಿಗಳ ಮುಂದೆ ಕಾಬೂಲ್ ಸರೆಂಡರ್! ಅಧಿಕಾರ ಹಸ್ತಾಂತರಕ್ಕೆ ಮಾತುಕತೆ ಆರಂಭ ! title=
Taliban Crisis(File Photo)

Afghanistan Crisis: ಅಫ್ಘಾನಿಸ್ತಾನವನ್ನು  (Afghanistan) ಇದೀಗ ತಾಲಿಬಾನ್ ಆಕ್ರಮಿಸಿಕೊಂಡಿದೆ. ಅಧಿಕಾರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಅಲಿ ಅಹ್ಮದ್ ಜಲಾಲಿ (Ali Ahmed Jalali) ಹೊಸ ತಾತ್ಕಾಲಿಕ ಸರ್ಕಾರದ ಮುಖ್ಯಸ್ಥರಾಗಿ ಭಾನುವಾರ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ತಾಲಿಬಾನ್‌ಗೆ (Taliban) ಅಧಿಕಾರವನ್ನು ವರ್ಗಾಯಿಸಲು ಅಫ್ಘಾನ್ ಅಧ್ಯಕ್ಷೀಯ ಅರಮನೆಯಲ್ಲಿ (ARG) ಮಾತುಕತೆ ನಡೆಯುತ್ತಿದೆ. ರಾಷ್ಟ್ರೀಯ ಸಮನ್ವಯದ ಉನ್ನತ ಮಂಡಳಿಯ ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ (Abdullah Abdullah) ಈ ಪ್ರಕ್ರಿಯೆಗೆ ಮಧ್ಯಸ್ಥಿಕೆ ವಹಿಸುತ್ತಿದ್ದಾರೆ ಎಂದು ಖಾಮಾ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಲಿ ಅಹ್ಮದ್ ಜಲಾಲಿಯನ್ನು ಹೊಸ ಹಂಗಾಮಿ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗುತ್ತಿದೆ ಎಂದು ಎಂದು ಮೂಲಗಳು ತಿಳಿಸಿವೆ. ಖಾಮಾ ಪ್ರೆಸ್ ನ್ಯೂಸ್ ಏಜೆನ್ಸಿ ಈ ಮಾಹಿತಿಯನ್ನು ನೀಡಿದೆ.

ಈ ನಡುವೆ ಬೇರೆ ಬೇರೆ ವಿಡಿಯೋ ಕ್ಲಿಪ್ ಗಳ ಮೂಲಕ ಭರವಸೆ ನೀಡಿರುವ ಆಫ್ಥಾನಿಸ್ತಾನದ ಆಂತರಿಕ ಹಾಗೂ ವಿದೇಶಾಂಗ ವ್ಯವಹಾರಗಳ ಮಂತ್ರಿ ಅಬ್ದುಲ್ ಸತ್ತಾರ್ ಮಿರ್ಜಾಕವಾಲ್, ಕಾಬೂಲ್ ಜನರನ್ನು ಸುರಕ್ಸಿತವಾಗಿರಿಸಲಾಗುವುದು ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಸಹಯೋಗದೊಂದಿಗೆ ನಗರದ ರಕ್ಷಣೆಯಲ್ಲಿ ತಾವು ತೊಡಗಿರುವುದಾಗಿ ಅವರು ಹೇಳಿದ್ದಾರೆ. ಕಾಬೂಲ್ (Kabool) ಮೇಲೆ ಯಾವುದೇ ರೀತಿಯ ಹಲ್ಲೆ ನಡೆಸಲಾಗುವುದಿಲ್ಲ ಎಂದು ಮಿರ್ಜಾಕ್ವಾಲ್ ಹೇಳಿದ್ದಾರೆ. ನಗರದಲ್ಲಿರುವ ಭದ್ರತಾ ಪಡೆಗಳು ಜನರ ರಕ್ಷಣೆ ಮಾಡಲಿದ್ದಾರೆ ಎಂದು ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ-Afghanistan: ಕಾಬೂಲ್ ಅನ್ನು ನಾಲ್ಕು ದಿಕ್ಕುಗಳಿಂದಲೂ ಸುತ್ತುವರೆದಿರುವ ತಾಲಿಬಾನ್

ಇದಕ್ಕೂ ಮೊದಲು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ತಾಲಿಬಾನ್ (Taliban), ಕಾಬೂಲ್ ಜನರು ಹೆದರುವ ಅವಶ್ಯಕತೆ ಇಲ್ಲ ಎಂಬ ಭರವಸೆಯನು ನೀಡಿತ್ತು. ಸೈನ್ಯದ ರೂಪದಲ್ಲಿ ಆಫ್ಘಾನ್ ರಾಜಧಾನಿಯನ್ನು ಪ್ರವೇಶಿಸುವುದು ತಮ್ಮ ಉದ್ದೇಶವಾಗಿಲ್ಲ ಮಾತು ಶಾಂತಿಯುತವಾಗಿ ಅಧಿಕಾರ ಹಸ್ತಾಂತರದ ಕುರಿತು ಹೇಳಿಕೆ ನೀಡಿದೆ.

ಇಂದು ತಾಲಿಬಾನ್ ನಾಲ್ಕು ದಿಕ್ಕುಗಳಿಂದ ತಾಲಿಬಾನ್ ನಗರವನ್ನು ಪ್ರವೇಶಿಸಿದೆ ಎಂಬುದು ಇಲ್ಲಿ ಗಮನಾರ್ಹ. ಈ ಅವಧಿಯಲ್ಲಿ ತಾಲಿಬಾನ್ ಗೆ ತುಂಬಾ ಕಡಿಮೆ ವಿರೋಧ ವ್ಯಕ್ತವಾಗಿದೆ. ಟೋಲೋ ನ್ಯೂಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ತಾಲಿಬಾನ್ ಇದೀಗ ತನ್ನ ಸದಸ್ಯರನ್ನು ಕಾಬೂಲ್ ಗೇಟ್ ಬಳಿ ನಿಲ್ಲಲು ಸೂಚನೆ ನೀಡಿದ್ದು, ನಗರವನ್ನು ಪ್ರವೇಶಿಸದಿರಲು ಆದೇಶ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ-Afghanistan Crisis: ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ನಮ್ಮಿಂದ ಯಾವುದೇ ಅಪಾಯ ಇಲ್ಲ ಎಂದ ತಾಲಿಬಾನ್

ಏತನ್ಮಧ್ಯೆ ರಷ್ಯಾ, ಆಫ್ಘಾನಿಸ್ತಾನದ ವಿಷಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತುಸಭೆ ನಡೆಸುವುದರ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಮಾತನಾಡಿರುವ ಆಫ್ಘಾನಿಸ್ತಾನದ ರಷ್ಯಾ ಅಧ್ಯಕ್ಷರ ವಿಶೇಷ ಪ್ರತಿನಿಧಿ ಜಮೀರ್ ಕಾಬುಲೋವ್, "ಪ್ರಸ್ತುತ ನಾವು ಈ ಸಭೆಯನ್ನು ನಡೆಸುತ್ತಿದ್ದೇವೆ. ಆದರೆ ಅದು ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ನಾವು ಈ ಕುರಿತು ಮೊದಲೇ ಯೋಚಿಸಬೇಕಾಗಿತ್ತು ಹಾಗೂ ಇದೀಗ ಸಭೆ ನಡೆಸಬಾರದು" ಎಂದು ಹೇಳಿದ್ದಾರೆ.

ಈ ಮೊದಲು, ತಾಲಿಬಾನ್‌ಗಳು ಹೇಳಿಕೆಯಲ್ಲಿ ಕಾಬೂಲ್ ನಿವಾಸಿಗಳಿಗೆ ಅಫ್ಘಾನ್ ರಾಜಧಾನಿಯನ್ನು ಸೇನಾಪಡೆಗೆ ಪ್ರವೇಶಿಸುವ ಉದ್ದೇಶವಿಲ್ಲ ಎಂದು ಭರವಸೆ ನೀಡಿದರು. ಅವರು ಶಾಂತಿಯುತವಾಗಿ ಅಧಿಕಾರದ ವರ್ಗಾವಣೆಯ ಬಗ್ಗೆ ಮಾತನಾಡಿದರು.

ಇದನ್ನೂ ಓದಿ-Airstrike on Taliban Terrorists: ತಾಲಿಬಾನ್ ಉಗ್ರರ ಮೇಲೆ Airstrike, 254 ಉಗ್ರರ ಹತ್ಯೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ 

Trending News