Afghanistan Crisis: ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ನಮ್ಮಿಂದ ಯಾವುದೇ ಅಪಾಯ ಇಲ್ಲ ಎಂದ ತಾಲಿಬಾನ್

Afghaanistaan Crisis - ಪಾಕ್ ಮೂಲದ ಭಯೋತ್ಪಾದಕ ಗುಂಪುಗಳೊಂದಿಗೆ ತಾಲಿಬಾನ್ ಆಳವಾದ ಸಂಬಂಧ ಹೊಂದಿರುವ ಕುರಿತಾದ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ವಕ್ತಾರ (Taliban Spokesperson) ಮೊಹಮ್ಮದ್ ಸುಹೇಲ್ ಶಾಹೀನ್ (Muhammed Suhail Shaheen), ಇದೊಂದು ಆಧಾರ ರಹಿತ ಆರೋಪವಾಗಿದ್ದು, ವಾಸ್ತವಿಕತೆ ಬೇರೆಯೇ ಇದೆ ಎಂದಿದ್ದಾರೆ.

Written by - Nitin Tabib | Last Updated : Aug 14, 2021, 10:56 AM IST
  • ಅಫ್ಘಾನಿಸ್ತಾನದಲ್ಲಿರುವ ಭಾರೆತೀಯರಿಗೆ ನಮ್ಮಿಂದ ಯಾವುದೇ ತೊಂದರೆ ಇಲ್ಲ ಎಂದ ತಾಲಿಬಾನ್.
  • ಭಾರತದ ವಿರುದ್ಧ ಅಫ್ಘಾನಿಸ್ತಾನ್ ಭೂಮಿಯನ್ನು ಬಳಕೆ ಮಾಡುವುದಿಲ್ಲ ಎಂದ ವಕ್ತಾರ.
  • ಭಾರತದ ನೆರವಿನಿಂದ ನಡೆಯುತಿರುವ ಯೋಜನೆಗಳಿಗೂ ಕೂಡ ಯಾವುದೇ ಅಪಾಯ ಇಲ್ಲ ಎಂದ ಮೊಹಮ್ಮದ್ ಸುಹೈಲ್ ಶಾಹೀನ್.
Afghanistan Crisis: ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ನಮ್ಮಿಂದ ಯಾವುದೇ ಅಪಾಯ ಇಲ್ಲ ಎಂದ ತಾಲಿಬಾನ್ title=
Afghaanistaan Crisis(File Photo)

Afghaanistaan Crisis - ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ಭಾರತೀಯರಿಗಾಗಿ (Indians In Afghanistan) ತಾಲಿಬಾನ್ ವಕ್ತಾರರು ಭಾರಿ ನೆಮ್ಮದಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ನಮ್ಮಿಂದ ಯಾವುದೇ ಅಪಾಯ ಇಲ್ಲ ಎಂದು ತಾಲಿಬಾನ್ ಹೇಳಿದೆ. ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳನ್ನು ಗುರಿಯಾಗಿಸುವುದಿಲ್ಲ ಎಂದು ತಾಲಿಬಾನ್ ಭರವಸೆ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನ್ ವಕ್ತಾರ ಮೊಹಮ್ಮದ್ ಸುಹೇಲ್ ಶಾಹೀನ್, "ನಮ್ಮ ಕಡೆಯಿಂದ ಯಾವುದೇ ಬೆದರಿಕೆಯಿಲ್ಲ ಎಂದು ನಾವು ಭಾರತೀಯ ರಾಜತಾಂತ್ರಿಕರು ಮತ್ತು ರಾಯಭಾರ ಕಚೇರಿಗೆ ಭರವಸೆ ನೀಡಲು ಬಯಸುತ್ತೇವೆ. ನಾವು ದೂತಾವಾಸಗಳಿಗೆ ಬೆದರಿಕೆ ಹಾಕುವುದಿಲ್ಲ. ಇದನ್ನು ನಾವು ನಮ್ಮ ಹೇಳಿಕೆಯಲ್ಲಿ ಒಂದೇ ಸಲ ಅಲ್ಲ ಹಲವು ಬಾರಿ ಹೇಳಿದ್ದೇವೆ. ಮಾಧ್ಯಮಗಳಲ್ಲಿಯೂ ಕೂಡ ನಾವು ನಮ್ಮ ಭರವಸೆಯನ್ನು ನೀಡಿದ್ದೇವೆ" ಎಂದಿದ್ದಾರೆ.

ಆಫ್ಘಾನಿಸ್ತಾನದ (Afghanistan) ಭೂಮಿಯನ್ನು ಭಾರತೀಯರ ವಿರುದ್ಧ ಬಳಸುವುದಿಲ್ಲ ಎಂಬ ಭರವಸೆಯನ್ನು ನೀವು ಭಾರತೀಯರಿಗೆ ನೀಡಲು ಬಯಸುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ತಾಲಿಬಾನ್ ವಕ್ತಾರರು. 'ನಾವು ಯಾವುದೇ ನೆರೆ ರಾಷ್ಟ್ರಗಳ ವಿರುದ್ಧ ಆಫ್ಘಾನ್ ಭೂಮಿಯನ್ನು ಬಳಕೆಯಾಗಲು ಅನುಮತಿಸುವುದಿಲ್ಲ ಮತ್ತು ಇದು ನಮ್ಮ ಸಾಮಾನ್ಯ ನೀತಿಯಾಗಿದೆ. ಈ ನೀತಿಗೆ ನಾವು ಬದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಭಾರತದ ನೆರವಿನಿಂದ ನಡೆಯುತ್ತಿರುವ ಯೋಜನೆಗಳ ಕುರಿಟು ಹೇಳಿಕೆ ನೀಡಿರುವ ತಾಲಿಬಾನ್ (Taliban), 'ಆಫ್ಘಾನ್ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುತ್ತಿರುವ ಎಲ್ಲ ಕಾರ್ಯಗಳನ್ನು ಪ್ರಶಂಸಿಸುತ್ತೇವೆ. ಆಣೆಕಟ್ಟು, ಇನ್ಫ್ರಾಸ್ಟ್ರಕ್ಚರ್ ಯೋಜನೆಗಳು ಸೇರಿದಂತೆ ಆಫ್ಘಾನಿಸ್ತಾನದ ಅಭಿವೃದ್ಧಿ ಹಾಗೂ ಪುನರ್ನಿರ್ಮಾಣ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ನಡೆಸಲಾಗಿರುವ ಯೋಜನೆಗಳು ಇದರಲ್ಲಿ ಶಾಮೀಲಾಗಿವೆ' ಎಂದು ಅದು ಹೇಳಿದೆ. 

ಇದನ್ನೂ ಓದಿ-ಈ ದೇಶದಲ್ಲಿ ಸೈನ್ಯಕ್ಕೆ ಸೇರುವ ಮಹಿಳೆಯೆರಿಗೆ ಮಾಡಲಾಗುತ್ತೆ Virginity Test : ಈ ಬದಲಾವಣೆಗೆ ಮುಂದಾದ ಸರ್ಕಾರ

ಆಫ್ಘಾನಿಸ್ತಾನದ ಸಂಪೂರ್ಣ ದಕ್ಷಿಣ ಭಾಗದಲ್ಲಿ ತಾಲಿಬಾನ್ ನಿಯಂತ್ರಣ
ತಾಲಿಬಾನ್ ಶುಕ್ರವಾರ ಆಫ್ಘಾನಿಸ್ತಾನದ ಮತ್ತೆ ನಾಲ್ಕು ಪ್ರಾಂತ್ಯಗಳ ರಾಜಧಾನಿಗಳ ಮೇಲೆ ಹಿಡಿತ ಸಾಧಿಸಿದ್ದು, ಸಂಪೂರ್ಣ ದಕ್ಷಿಣ ಆಫ್ಘಾನಿಸ್ತಾನದ ಮೇಲೆ ತನ್ನ ಪ್ರಾಬಲ್ಯ ಸಾಧಿಸಿದೆ. ಇದೀಗ ತಾಲಿಬಾನ್ ಮೆಲ್ಲಗೆ ಕಾಬೂಲ್ ಕಡೆಗೆ ತನ್ನ ಪ್ರಯಾಣ ಬೆಳೆಸಿದೆ. ಆಫ್ಥಾನಿಸ್ತಾನದ ಎರಡನೇ ಹಾಗೂ ಮೂರನೇ ಅತಿ ದೊಡ್ಡ ನಗರಗಳ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ತಾಲಿಬಾನ್ ಹೆಲ್ಮಂಡ್ ಪ್ರಾಂತ್ಯದ ರಾಜಧಾನಿ ಲಕ್ಷರ್ ಗಾರ್ ಅನ್ನು ತನ್ನ ವಶಕ್ಕೆ ಪಡೆದಿದೆ. ಸುಮಾರು ಎರಡು ದಶಕಗಳ ಯುದ್ದದ ವೇಳೆ ಹೆಲ್ಮಂಡ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದೇಶಿ ಸೈನಿಕರು ಹತ್ಯೆಗೀಡಾಗಿದ್ದಾರೆ.

ಇದನ್ನೂ ಓದಿ-OMG ! ಈ ದೇಶದಲ್ಲಿ Ladies Fingerಗಳನ್ನು ಬೆಂಡೆಯಂತೆ ಕತ್ತರಿಸಿ ಸುಡುತ್ತಾರಂತೆ !

ದಕ್ಷಿಣ ಕ್ಷೇತ್ರದ ಮೇಲೆ ಹಿಡಿತ ಎಂದರೆ ಆಫ್ಘಾನಿಸ್ಥಾನದ ಸುಮಾರು 34 ಪ್ರಾಂತ್ಯಗಳ ರಾಜಧಾನಿಗಳ ಮೇಲೆ ತಾಲಿಬಾನ್ ಹಿಡಿತ ಎಂದರ್ಥ. ಕೆಲವೇ ವಾರಗಳ ಬಳಿಕ ಅಮೇರಿಕಾ ತನ್ನ ಉಳಿದ ಸೈನಿಕರನ್ನು ಹಿಂದಕ್ಕೆ ಪಡೆಯುತ್ತಿರುವ ಹಿನ್ನೆಲೆ ತಾಲಿಬಾನ್, ಆಫ್ಘಾನಿಸ್ತಾನದ ಸುಮಾರು 2/3 ರಷ್ಟು ಭಾಗ ತನ್ನ ಹಿಡಿತಕ್ಕೆ ಪಡೆದುಕೊಂಡಂತೆ.

ಇದನ್ನೂ ಓದಿ-Marburg Virus: ಪಶ್ಚಿಮ ಆಫ್ರಿಕಾದ ಗಿನಿ ದೇಶದಲ್ಲಿ ದೊರೆತ ಮಾರಕ ಮಾರಬರ್ಗ್ ವೈರಸ್ ಮೊದಲ ಪ್ರಕರಣ, ಇಲ್ಲಿದೆ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News