High Security For Mango Trees: ಎರಡು ಮಾವಿನ ಮರಗಳ ರಕ್ಷಣೆಗೆ 3 ಸೆಕ್ಯೂರಿಟಿ ಗಾರ್ಡ್ ಹಾಗೂ 6 ನಾಯಿಗಳ ನಿಯೋಜನೆ, ಕಾರಣ ರೋಚಕವಾಗಿದೆ

Japanese Mango Miyazaki In Jabalpur: ಇವು ಇಡೀ  ವಿಶ್ವದಲ್ಲಿಯೇ ಅತ್ಯಂತ ದುಬಾರಿ ಹಣ್ಣುಗಳ ಗಿಡಗಳಾಗಿವೆ. ಈ ಹಣ್ಣುಗಳನ್ನು ಜಪಾನ್ ಪಟ್ಟಣವೊಂದರಲ್ಲಿ ಬೆಳೆಯಲಾಗುತ್ತದೆ. ಈ ಗಿಡದ ಒಂದು ಹಣ್ಣಿನ ತೂಕ ಸುಮಾರು 350 ಗ್ರಾ.ನಷ್ಟಿದೆ.  

Written by - Nitin Tabib | Last Updated : Jul 4, 2022, 12:07 PM IST
  • ಮಾವಿನ ಹಣ್ಣಿನ ಎರಡು ಗಿಡಗಳಿಗೆ ಹೈ ಸೆಕ್ಯೂರಿಟಿ
  • ಯಾಕೆ ಇಷ್ಟೊಂದು ಹೈ ಸೆಕ್ಯೂರಿಟಿ ಅಂತೀರಾ?
  • ಇವು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣುಗಳಾಗಿವೆ.
High Security For Mango Trees: ಎರಡು ಮಾವಿನ ಮರಗಳ ರಕ್ಷಣೆಗೆ 3 ಸೆಕ್ಯೂರಿಟಿ ಗಾರ್ಡ್ ಹಾಗೂ 6 ನಾಯಿಗಳ ನಿಯೋಜನೆ, ಕಾರಣ ರೋಚಕವಾಗಿದೆ title=
High Security For Mango Trees

World's Costliest Mango: ಮಾವಿನ ಹಣ್ಣಿನ ಸೀಸನ್ ನಡೆಯುತ್ತಿದೆ ಮತ್ತು ಉದ್ಯಮಿ ಹರ್ಷ್ ಗೋಯೆಂಕಾ ಹಣ್ಣುಗಳಲ್ಲಿನ ಅತ್ಯಂತ ದುಬಾರಿ ಹಣ್ಣಿನ ಒಂದು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನೀವು ಮಿಯಾಜಾಕಿಯನ್ನು ನೋಡಬಹುದಾಗಿದೆ. ಇದು ಪ್ರಮುಖವಾಗಿ ಜಪಾನ್ ನಲ್ಲಿ ಬೆಳೆಯಲಾಗುವ ಒಂದು ಹಣ್ಣಿನ ತಳಿಯಾಗಿದೆ. ಭಾರತದಲ್ಲಿ ಈ ಹಣ್ಣುಗಳು ಸಿಗುವುದು ತೀರಾ ಅಪರೂಪ ಮತ್ತು ಹಣ್ಣುಗಳನ್ನು ಬೆಳೆಯುವವರಿಗೆ ಅವುಗಳ ರಕ್ಷಣೆಗೆ ವ್ಯಾಪಕ ಬಂದೋಬಸ್ತ್ ಕೈಗೊಳ್ಳಬೇಕಾಗುತ್ತದೆ. ಅದನ್ನೇ ಹರ್ಷ್ ಗೋಯೆಂಕಾ ಅವರು ತಮ್ಮ ಟ್ವೀಟ್ ನಲ್ಲಿ ಹೈಲೈಟ್ ಮಾಡಿದ್ದಾರೆ. ಈ ಕುರಿತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ಆರ್.ಪಿ.ಜಿ ಗ್ರೂಪ್ ನ ಅಧ್ಯಕ್ಷರು, 'ಅಸಾಧಾರಣ ಮಾಣಿಕ್ಯ-ಬಣ್ಣದ ಜಪಾನೀ ಮಾವು ಮಿಯಾಜಾಕಿ ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಹೇಳಲಾಗಿದ್ದು, ಪ್ರತಿ ಕೆ.ಜಿಗೆ ₹2.7 ಲಕ್ಷಕ್ಕೆ ಮಾರಾಟವಾಗಿದೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಪರಿಹಾರ್ ಎಂಬ ರೈತ ಎರಡು ಮರಗಳನ್ನು ರಕ್ಷಿಸಲು ಮೂರು ಭದ್ರತಾ ಸಿಬ್ಬಂದಿ ಮತ್ತು ಆರು ನಾಯಿಗಳನ್ನು ನಿಯೋಜಿಸಿದ್ದಾರೆ' ಎಂದು ಹೇಳಿದ್ದಾರೆ.

ಈ ಅತ್ಯಂತ ದುಬಾರಿ ಹಣ್ಣಿಗೆ ಸೆಕ್ಯೂರಿಟಿ ಒದಗಿಸಬೇಕಾಗುತ್ತದೆ
ಇದು ಇಡೀ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಕಳೆದ ವರ್ಷ ಈ ನಾಟ್ ಸೊ ಕಾಮನ್ ಹಣ್ಣು ಕೆ.ಜಿಗೆ 2.70 ಲಕ್ಷ ರೂ.ಗೆ ಮಾರಾಟವಾಗಿದೆ. ಸುದ್ದಿ ಸಂಸ್ಥೆ ಎಎನ್ಐ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ರೈಲು ಯಾತ್ರೆ ಮಾಡುವಾಗ ಯಾತ್ರಿಯೋಬ್ಬರಿಂದ ಪರಿಹಾರ ಈ ಮಿಯಾಜಾಕಿ ಸಸಿಯನ್ನು ಪಡೆದುಕೊಂಡಿದ್ದರು. ಆದರೆ, ಆರಂಭದಲ್ಲಿ ಈ ಮರದಿಂದ ಬರುವ ರೂಬಿ ಬಣ್ಣದ ಮಾವಿನ ಹಣ್ಣುಗಳು ಜಪಾನಿ ಹಣ್ಣುಗಳಾಗಿವೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಮಿಯಾಜಾಕಿ ಮಾವಿನಹಣ್ಣುಗಳನ್ನು ಅವುಗಳ ಆಕಾರ ಮತ್ತು ಉರಿಯುತ್ತಿರುವ ಕೆಂಪು ಬಣ್ಣದ ಕಾರಣ 'ಎಗ್ಸ್ ಆಫ್ ಸನ್ ಶೈನ್' (ಜಾಪನೀಸ್‌ನಲ್ಲಿ ತೈಯೊ-ನೋ-ತಮಾಗೊ) ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ-Crocodile Video: ಮೊಸಳೆ ಬಾಯಿಯಿಂದ ತನ್ನ ಸ್ನೇಹಿತನನ್ನು ಹೊರತೆಗೆದ ವ್ಯಕ್ತಿ! ವಿಡಿಯೋ ನೋಡಿ

ಒಂದು ಹಣ್ಣಿನ ಸರಾಸರಿ ತೂಕ 350ಗ್ರಾಂ ಇರುತ್ತದೆ
ಮಿಯಾಜಾಕಿ ಮಾವಿನ ಹಣ್ಣಿನ ಹಸರು ಜಪಾನ್ ನಲ್ಲಿ ಈ ಹಣ್ಣುಗಳನ್ನು ಬೆಳೆಯುವ ನಗರದ ಕಾರಣ ಬಂದಿದೆ. ಈ ಹಣ್ಣುಗಳಲ್ಲಿನ ಒಂದು ಹಣ್ಣಿನ ಸರಾಸರಿ ತೂಕ 350 ಗ್ರಾಂ.ನಷ್ಟಿರುತ್ತದೆ. ಆಂಟಿಆಕ್ಸಿಡೆಂಟ್, ಬೀಟಾಕ್ಯಾರೋಟಿನ್ ಹಾಗೂ ಫೋಲಿಕ್ ಆಸಿಡ್ ನಿಂದ ಸಮೃದ್ಧಈ ಹಣ್ಣು ಏಪ್ರಿಲ್ ಹಾಗೂ ಆಗಸ್ಟ್ ಆವಧಿಯಲ್ಲಿ ಬೆಳೆಯಲಾಗುತ್ತದೆ. ಜಪನೀಸ್ ಟ್ರೇಡ್ ಪ್ರಮೋಷನ್ ಸೆಂಟರ್ ಪ್ರಕಾರ, ಮಿಯಾಝಾಕಿಯು ಆಗ್ನೇಯ ಏಷ್ಯಾದಲ್ಲಿ ವ್ಯಾಪಕವಾಗಿ ಬೆಳೆಯುವ ಹಳದಿ ಪೆಲಿಕಾನ್ ಮಾವಿನ ಹಣ್ಣಿನಿಂದ ಭಿನ್ನವಾಗಿರುವ 'ಇರ್ವಿನ್' ಮಾವಿನ ಒಂದು ವಿಧವಾಗಿದೆ.

ಇದನ್ನೂ ಓದಿ-Cobra VS Mongoose: ಹಾವು ಮುಂಗುಸಿಯ ನಡುವೆ ಭೀಕರ ಕಾಳಗ, ಗೆದ್ದಿದ್ದು ಯಾರು? ವಿಡಿಯೋ ನೋಡಿ

ಜಪಾನಿ ಮಾವು ಜನರಿಗೆ ತುಂಬಾ ವಿಶಿಷ್ಠ ಎನಿಸಿದೆ 
ಮಿಯಾಜಾಕಿಯ ಈ ಮಾವಿನಹಣ್ಣುಗಳನ್ನು ಜಪಾನ್‌ ದೇಶಾದ್ಯಂತ ಸಾಗಿಸಲಾಗುತ್ತದೆ ಮತ್ತು ಅವುಗಳ ಉತ್ಪಾದನೆಯ ಪ್ರಮಾಣವು ಜಪಾನ್‌ನ ಓಕಿನಾವಾ ನಂತರ ಎರಡನೇ ಸ್ಥಾನದಲ್ಲಿದೆ. ಮಿಯಾಝಾಕಿಯಲ್ಲಿ ಮಾವು ಉತ್ಪಾದನೆಯು 70 ರ ದಶಕದ ಕೊನೆಯಲ್ಲಿ ಮತ್ತು 80 ರ ದಶಕದ ಆರಂಭದಲ್ಲಿ ಆರಂಭಗೊಂಡಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳ ವರದಿಗಳು ಹೇಳಿವೆ. ನಗರದ ಬೆಚ್ಚನೆಯ ವಾತಾವರಣ, ಸುದೀರ್ಘವಾದ ಬಿಸಿಲು ಮತ್ತು ಹೇರಳವಾದ ಮಳೆಯಿಂದಾಗಿ ಮಿಯಾಜಾಕಿಯ ರೈತರಿಗೆ ಮಾವು ಕೃಷಿ ಅಳವಡಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವರದಿಗಳು ಹೇಳಿವೆ. ಇದು ಈಗ ಇಲ್ಲಿನ ಮುಖ್ಯ ಉತ್ಪನ್ನವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News