Anchor Anushree: ಅನುಶ್ರೀಗೆ ಆಂಕರಿಂಗ್‌ ಅಲ್ಲ.. ಈ ಕೆಲಸ ಅಂದ್ರೆ ಇಷ್ಟವಂತೆ!! ಏನದು ಗೊತ್ತಾ?

Anchor Anushree favourite Work: ನಿರೂಪಕಿ, ನಟಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್‌, ವದಂತಿಗಳು ಹೀಗೆ ಹಲವಾರು ಜೀವನದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.. 

1 /5

ನಟಿ, ಆಂಕರ್‌ ಅನುಶ್ರೀ ತುಳು ಯೂಟ್ಯೂಬ್‌ ಚಾನೆಲ್‌ಗೆ ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಅನು ತಮ್ಮ ಜೀವನದ ಸಾಕಷ್ಟು ಕುತೂಹಲಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.   

2 /5

ಮಂಗಳೂರಿನಿಂದ ಪ್ರಯಾಣ ಆರಂಭಿಸಿದ ಅನುಶ್ರೀ ಮೊದಲು ಮಂಗಳೂರು ಕನ್ನಡದಲ್ಲೇ ಮಾತನಾಡುತ್ತಿದ್ದರು.. ನಂತರ ಬೆಂಗಳೂರಿನಲ್ಲಿ ತರಕಾರಿ ಮಾರಾಟ ಮಾರುವವರ ಬಳಿ ಮಾತನಾಡುತ್ತ ಬೆಂಗಳೂರು ಕನ್ನಡ ಮಾತನಾಡಲು ಕಲಿತುಕೊಂಡಿದ್ದರಂತೆ..  

3 /5

ಬಾಲ್ಯದ ಕೆಲವು ಕರಾಳ ದಿನಗಳನ್ನು ನೆನಪಿಸಿಕೊಂಡ ಅನುಶ್ರೀ ತಂದೆ ಇಲ್ಲದೇ ಬೆಳೆದ ಅನುಭವವನ್ನು ಮನಬಿಚ್ಚಿ ಮಾತನಾಡಿದ್ದರು.. ಇದೇ ವೇಳೆ ಆಂಕರ್‌ ಅನುಶ್ರೀ ನಿರೂಪಣೆಗೆ ಬರುವ ಮುನ್ನ ಇಷ್ಟಪಟ್ಟು ಮಾಡಿದ ಕೆಲಸದ ಬಗ್ಗೆ ಹೇಳಿಕೊಂಡಿದ್ದಾರೆ..  

4 /5

ಆಂಕರ್‌ ಅನುಶ್ರೀ ಟೆಲಿ ಕಾಲರ್‌ ಆಗಿ ಕೆಲಸ ಮಾಡುತ್ತಿರುವಾಗ ದಕ್ಷಿಣ ಕನ್ನಡದ ಅರುಣ್‌ ಆಳ್ವಾ ಎಂಬ ಡಾನ್ಸರ್‌ ಪರಿಚಯವಾಗಿ ಅವರಿಂದ ಬ್ಯಾಕ್‌ ಡಾನ್ಸರ್‌ ಆಗಿ ಕೆಲಸ ಮಾಡಿದ್ದರು.. ಈ ಬಗ್ಗೆ ಮಾತನಾಡಿದ ಅನುಶ್ರೀ ನಂಗೆ ಆಂಕರಿಂಗ್‌ಗಿಂತ ಡಾನ್ಸ್‌ ಮಾಡೋದು ತುಂಬಾ ಇಷ್ಟ.. ಡ್ಯಾನ್ಸ್‌ ಬಗ್ಗೆ ತುಂಬಾ ಕ್ರೇಜ್‌ ಇತ್ತು ಎಂದಿದ್ದಾರೆ..   

5 /5

ಚಟಪಟ ಮಾತಿನ ಮೂಲಕ ಎಲ್ಲರನ್ನು ರಂಜಿಸುತ್ತಿರೋ ಆಂಕರ್‌ ಕಮ್‌ ನಟಿ ಅನುಶ್ರೀ ತಮ್ಮ ಆರಂಭಿಕ ಜೀವನದಲ್ಲಿ ಸಾಕಷ್ಟು ಏರುಪೇರು ಕಂಡಿದ್ದಾರೆ.. ನೋವನ್ನೇ ಸವಾಲಾಗಿ ಸ್ವೀಕರಿಸಿದ ಈ ಚೆಲುವೆ ಇಂದು ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯಾಗಿ ಹೊರಹೊಮ್ಮಿದ್ದಾರೆ..