ಮುಕೇಶ್‌ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..

Anant Ambani Radhika Merchant Wedding: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.

Written by - Chetana Devarmani | Last Updated : May 30, 2024, 04:12 PM IST
    • ಅನಂತ್ ಅಂಬಾನಿ ಮದುವೆಯ ಆಮಂತ್ರಣ ಪತ್ರಿಕೆ
    • ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌
    • ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ
ಮುಕೇಶ್‌ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..  title=

Anant Ambani-Radhika Merchant Wedding Card: ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ.‌ ಇಡೀ ಕುಟುಂಬ ಅನಂತ್ ಮತ್ತು ರಾಧಿಕಾ ಅವರ ಎರಡನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳಲ್ಲಿ ಬಯುಸಿಯಾಗಿದೆ. ಇದರಲ್ಲಿ ಅನೇಕ ತಾರೆಯರು ಭಾಗವಹಿಸಲಿದ್ದಾರೆ. 

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ವಿವಾಹವಾಗಲಿದ್ದಾರೆ. ಇವರ ಮದುವೆ ಲಂಡನ್‌ನಲ್ಲಿ ನಡೆಯಲಿದೆ ಎಂದು ಹಲವು ಊಹಾಪೋಹಗಳು ಇದ್ದವು. ಆದರೆ ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ಎಲ್ಲಾ ರಹಸ್ಯಗಳನ್ನು ಬಹಿರಂಗಪಡಿಸಲಾಗಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹ ಮುಂಬೈನಲ್ಲಿ ನಡೆಯಲಿದೆ. ಮುಂಬೈನಲ್ಲಿ ಮದುವೆಯಾಗುವುದಾಗಿ ಅನಂತ್ ಹಲವು ಸಂದರ್ಶನಗಳಲ್ಲಿ ಹೇಳಿದ್ದರು.  

ಇದನ್ನೂ ಓದಿ: ʻನಟ ಪ್ರಜ್ವಲ್​ ದೇವರಾಜ್​ ಇನ್ನಿಲ್ಲ’ ಎಂಬುದು ಸುಳ್ಳು ಸುದ್ದಿ... ಕಿಡಿಗೇಡಿಗಳ ಕೆಲಸಕ್ಕೆ ಗರಂ ಆದ ಕುಟುಂಬಸ್ಥರು

ಅನಂತ್ ಮತ್ತು ರಾಧಿಕಾ ಮುಂಬೈನಲ್ಲಿ ವಿವಾಹವಾಗಲಿದ್ದಾರೆ. ಜುಲೈ 12 ರಂದು ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಮುಂಬೈನಲ್ಲಿಯೇ ಈ ಮದುವೆ ಸಮಾರಂಭ ನಡೆಯಲಿದ್ದು, ಅಂಬಾನಿ ಕುಟುಂಬದವರು ಅತಿಥಿಗಳಿಗೆ ಕಳುಹಿಸುವ ವೆಡ್ಡಿಂಗ್ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಇಶಾ ಅಂಬಾನಿಯಿಂದ ಶ್ಲೋಕಾ ಅಂಬಾನಿ ಮತ್ತು ಇತರ ಕುಟುಂಬ ಸದಸ್ಯರ ಹೆಸರನ್ನು ಸಹ ಹಾಕಲಾಗಿದೆ. ಮೂರು ದಿನಗಳ ಸಂಪೂರ್ಣ ವೇಳಾಪಟ್ಟಿಯನ್ನು ಸಹ ನೀಡಲಾಗಿದೆ.

 

 

ಜುಲೈ 12ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭ ಆರಂಭವಾಗಲಿದ್ದು ಜುಲೈ 14ರವರೆಗೆ ನಡೆಯಲಿವೆ. ಈ ಜೋಡಿಯ ವಿವಾಹವು ಮುಂಬೈನಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಎಲ್ಲ ಕಾರ್ಯಕ್ರಮಗಳು ಅಂಬಾನಿ ಮನೆ ಆಂಟಿಲಿಯಾದಲ್ಲಿ ನಡೆಯುತ್ತಿಲ್ಲ. ಬದಲಾಗಿ ಮುಂಬೈನಲ್ಲಿರುವ ಮುಖೇಶ್ ಅಂಬಾನಿಯ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ. 

ಜುಲೈ 12 ರಂದು ಮೊದಲ ದಿನ ಶುಭ ವಿವಾಹ ಸಮಾರಂಭ ನಡೆಯಲಿದ್ದು, ಭಾರತೀಯ ಸಾಂಪ್ರದಾಯಿಕ ಡ್ರೆಸ್ ಕೋಡ್ ಅನ್ನು ಇರಿಸಲಾಗಿದೆ. ಜುಲೈ 13 ರಂದು ಆಶೀರ್ವಾದ ಸಮಾರಂಭವಿರುತ್ತದೆ ಮತ್ತು ಅದಕ್ಕೆ ಭಾರತೀಯ ಔಪಚಾರಿಕ ಡ್ರೆಸ್ ಕೋಡ್ ಇರುತ್ತದೆ. ಮಂಗಲ್ ಉತ್ಸವ ಅಥವಾ ಮದುವೆಯ ಆರತಕ್ಷತೆಯನ್ನು ಜುಲೈ 14 ರಂದು ಆಯೋಜಿಸಲಾಗಿದೆ. ಅತಿಥಿಗಳು ಭಾರತೀಯ ಚಿಕ್ ಡ್ರೆಸ್ ಕೋಡ್‌ನೊಂದಿಗೆ ಆಗಮಿಸಲಿದ್ದಾರೆ. 

ಅಂಬಾನಿ ಅವರು ಮಗಳು ಇಶಾ ಮತ್ತು ಅವರ ಪತಿ ಅನಂತ್ ಪರ್ಮಲ್ ಅವರ ಹೆಸರು ಜೊತೆಗೆ ಹಿರಿಯ ಮಗ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ ಅವರ ಹೆಸರನ್ನು ಸಹ ಕಾರ್ಡ್‌ನಲ್ಲಿ ಹಾಕಲಾಗಿದೆ. ಅಂಬಾನಿ ಕುಟುಂಬದ ಕಿರಿಯ ಸದಸ್ಯರಲ್ಲಿ ಪೃಥ್ವಿ ಅಂಬಾನಿ, ಆದಿಶಕ್ತಿ ಅಂಬಾನಿ, ಕೃಷ್ಣ ಅಂಬಾನಿ ಮತ್ತು ವೇದಾ ಅಂಬಾನಿ ಹೆಸರು ಹಾಕಲಾಗಿದೆ. 

ಇದನ್ನೂ ಓದಿ: ನಟಿ ಖುಷ್ಬೂ ಮೇಲೆ ಹೆತ್ತ ತಂದೆಯಿಂದಲೇ ನಡೆದಿತ್ತು ಲೈಂಗಿಕ ದೌರ್ಜನ್ಯ !?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News