Man try to commit suicide Viral Video Today: ವಿಖ್ರೋಲಿಯ ಕನ್ನಂವರ್ ನಗರದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ನಿರ್ಮಾಣ ಹಂತದ ಕಟ್ಟಡದ 13 ನೇ ಮಹಡಿಯಿಂದ ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ಎಂಬಂತೆ ಆತನ ಜೀವ ಉಳಿದಿದೆ. ಸ್ಥಳೀಯರ ಸಹಾಯದಿಂದ ಆತನನ್ನು ರಕ್ಷಿಸಲಾಗಿದ್ದು, ಈ ಪ್ರಕರಣದ ಕುರಿತು ವಿಖ್ರೋಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗ್ಗೆ ತಿಂಡಿಗೂ ಮುನ್ನ ʻಈʼ ಪುಟ್ಟ ಬೀಜವನ್ನು ಸೇವಿಸುವುದರಿಂದ ನಿಮ್ಮ ಶುಗರ್ ದಿನವಿಡೀ ಕಂಟ್ರೋಲ್ನಲ್ಲಿರುತ್ತದೆ!
ಜೀವನದಲ್ಲಿ ಬೇಸತ್ತ ಅನೇಕ ಜನರು ಜೀವನವೇ ಬೇಡ ಎಂದು ಭಾವಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳು ಸಹ ಮನಸ್ಸಿಗೆ ಬರುತ್ತವೆ. ಆದರೆ ದೇವರ ಅಪ್ಪಣೆ ಇಲ್ಲದೆ ಯಾರೂ ಸಹ ಸಾಯಲು ಸಾಧ್ಯವಿಲ್ಲ, ಕೊಲ್ಲು ಕೂಡ ಸಾಧ್ಯವಿಲ್ಲ... ಈ ಮಾತು ಇಂದು ಅಕ್ಷರಶಃ ನಿಜವಾಗಿದೆ.
ವಿಖ್ರೋಲಿಯ ಕನ್ನಂವರ್ ನಗರ ಪ್ರದೇಶದಲ್ಲಿ ಕಟ್ಟಡ ಸಂಖ್ಯೆ 57 ರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ ನಿರ್ಮಾಣದ ಸಂದರ್ಭದಲ್ಲಿ ಸುರಕ್ಷತಾ ಬಲೆಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಸಿಲುಕಿಕೊಂಡು ಬಚಾವ್ ಆಗಿದ್ದಾನೆ.
ಆ ಕೆಲಸಗಾರನ ಹೆಸರು ಬಿರ್ಜು ಪ್ರಸಾದ್ ರಮೇಶ್ ಬನರ್ವ. ಕೆಲವು ದಿನಗಳಿಂದ ಮಾನಸಿಕ ಒತ್ತಡದಲ್ಲಿದ್ದ ಬಿರ್ಜು, ಕಳೆದ ದಿನ ಕೆಲಸ ಮಾಡುತ್ತಿದ್ದ ಕಟ್ಟಡ ಸಂಖ್ಯೆ 57 ರ ಹದಿಮೂರನೇ ಮಹಡಿಗೆ ಹೋಗಿ ಅಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಎಂಟನೇ ಮಹಡಿಯಲ್ಲಿ ಹಾಕಲಾದ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾನೆ. ಅಲ್ಲಿಂದ ಹಾರಿ ಮೂರನೇ ಮಹಡಿಯ ಕಿಟಕಿಯಲ್ಲಿ ಸಿಲುಕಿಕೊಂಡಿದ್ದಾನೆ. ಅಲ್ಲಿಂದಲೂ ಹಾರಲು ಯತ್ನಿಸಿದ್ದ ಆತ ಮತ್ತೆ ಬಲೆಗೆ ಬಿದ್ದು ಬದುಕುಳಿದಿದ್ದಾನೆ.
In a miraculous incident at Kannamwar Nagar, a construction worker survived after jumping from the 13th floor of an under-construction building. The worker,landed on safety nets installed on the 8th and 3rd floors before finally being caught in a ground-level net.@mumbaimatterz pic.twitter.com/MyYHS7UlFc
— Visshal Singh (@VishooSingh) January 15, 2025
ಇದನ್ನೂ ಓದಿ: Bra Tips: ಮಹಿಳೆಯರು ʼಬ್ರಾʼ ಧರಿಸದಿದ್ದರೆ ಏನಾಗುತ್ತದೆ? ಇದಕ್ಕೆ ತಜ್ಞರ ಉತ್ತರ ಏನೆಂದು ತಿಳಿಯಿರಿ
ಬಿರ್ಜು ಪ್ರಸಾದ್ ರಮೇಶ್ ಬನರ್ವ ಅವರನ್ನು ರಕ್ಷಿಸಿದ ನಂತರ ಉತ್ತರ ಪ್ರದೇಶದ ಗೋರಖ್ಪುರದ ಅವರ ಗ್ರಾಮಕ್ಕೆ ವಾಪಸ್ ಕಳುಹಿಸಲಾಗಿದೆ. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ. ಇದರಲ್ಲಿ ಯುವಕ ಸುರಕ್ಷತಾ ಜಾಲದಿಂದ ನೇತಾಡುತ್ತಿರುವುದು ಕಂಡುಬರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ