Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸದಾ ವೈರಲ್ ಆಗುತ್ತಿವೆ. ಅವುಗಳಲ್ಲಿ ಕೆಲವು ತಮಾಷೆಯಾಗಿದ್ದರೆ.. ಕೆಲವು ಆಶ್ಚರ್ಯಕರವಾಗಿರುತ್ತವೆ. ವಾಸ್ತವವಾಗಿ, ಸಾಕುಪ್ರಾಣಿಗಳು ಎಲ್ಲಿಯವರೆಗೆ ತಮಗೆ ಹಾನಿಯಾಗುವುದಿಲ್ಲವೋ ಅಲ್ಲಿಯವರೆಗೆ.. ಅವು ಕೂಡ ಯಾರ ಹತ್ತಿರವೂ ಹೋಗುವುದಿಲ್ಲ. ಆದರೆ ಸಿಂಹ, ಹುಲಿ ಮತ್ತು ಚಿರತೆಯಂತಹ ಕಾಡು ಪ್ರಾಣಿಗಳು ಏನೇ ಮಾಡದಿದ್ದರೂ ದಾಳಿ ಮಾಡುತ್ತವೆ. ಸಾಕುಪ್ರಾಣಿಗಳು ವಿಭಿನ್ನವಾಗಿವೆ. ಅವುಗಳಿಗೆ ಸಿಟ್ಟು ಬಂದರೂ ಭಯ ಪಡಬೇಕಾಗಿಲ್ಲ. ಇತ್ತೀಚೆಗೆ, ಸಸ್ಯಾಹಾರಿ ಪ್ರಾಣಿಗಳಾದ ನವಿಲು-ಮೇಕೆಯ ಮಧ್ಯ ಘರ್ಷಣೆಯೊಂದು ನಡೆದಿದೆ.. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಶಾಂತವಾಗಿ ಕಾಣುವ ನವಿಲು ಕೂಡ ಕೋಪದಿಂದ ಮೇಕೆಯ ಮೇಲೆ ಎರಗುತ್ತದೆ. ಎರಡೂ ಕೂಡ ಡಿಕ್ಕಿ ಹೊಡೆಯುತ್ತವೆ. ಮೇಕೆಯಿಂದ ತಪ್ಪಿಸಿಕೊಳ್ಳಲು ನವಿಲು.. ನವಿಲಿನಿಂದ ತಪ್ಪಿಸಿಕೊಳ್ಳಲು ಮೇಕೆ.. ಎರಡೂ ಮುಗ್ಧ ಪ್ರಾಣಿಗಳ ನಡುವಳಿಕೆಯ ರೀತಿ ನೆಟ್ಟಿಗರ ಮನಸೆಳೆಯುತ್ತಿದೆ. ಇದನ್ನು ನೋಡಿ ನೆಟ್ಟಿಗರೆಲ್ಲಾ ನಗುತ್ತಿದ್ದಾರೆ.
अपनी सामर्थ्य पर हमेशा भरोसा करें,
ईश्वर ने सभी को मुसीबतों से टकराने योग्य बनाया है.#सुप्रभात pic.twitter.com/AgD9lxC4OQ— Dipanshu Kabra (@ipskabra) February 28, 2022
ಇದನ್ನೂ ಓದಿ-BBK11: ಬಿಗ್ ಬಾಸ್ ಮನೆಗೆ ಎಲಿಮಿನೇಟ್ ಆದ ಸ್ಪರ್ಧಿಗಳ ರೀ ಎಂಟ್ರಿ.. ಮಿಡ್ ವೀಕ್ ಎಲಿಮಿನೇಷನ್‌ಗೆ ಮೆಗಾ ಟ್ವಿಸ್ಟ್!
ವೈರಲ್ ಆಗಿರುವ ವಿಡಿಯೋದಲ್ಲಿ ಮೇಕೆ ಮತ್ತು ನವಿಲು ಎದುರುಗಡೆ ನಿಂತಿರುವುದನ್ನು ಕಾಣಬಹುದು. ಇದರಲ್ಲಿ ಮೇಕೆ ಕೋಪಗೊಂಡಂತೆ ಕಾಣುತ್ತದೆ ಮತ್ತು ಮೊದಲು ತನ್ನ ಕೊಂಬುಗಳಿಂದ ನವಿಲಿನ ಮೇಲೆ ದಾಳಿ ಮಾಡುತ್ತದೆ. ಆದರೆ ಮೇಕೆ ಹತ್ತಿರ ಬಂದ ತಕ್ಷಣ ನವಿಲು ಮೇಲಕ್ಕೆ ಹಾರಿ ಇನ್ನೊಂದು ಬದಿಗೆ ತಲುಪುತ್ತದೆ. ಹೀಗೆ ಅನೇಕ ಬಾರಿ ಆಗುತ್ತದೆ.. ಈ ಅನುಕ್ರಮದಲ್ಲಿ ಪ್ರತಿ ಬಾರಿ ಮೇಕೆ ದಾಳಿ ನಡೆಸಿದಾಗ ನವಿಲು ತಂತ್ರ ಅನುಸರಿಸಿ ಪರಾರಿಯಾಗುತ್ತದೆ. ಈ ತಮಾಷೆಯ ವಿಡಿಯೋ ನೋಡಿ ಹಲವರು ನಗುತ್ತಿದ್ದಾರೆ. ಮೇಕೆ ಮತ್ತು ನವಿಲಿನ ನಡುವೆ ಇಂತಹ ಕಾಳಗವನ್ನು ಹಿಂದೆಂದೂ ನೋಡಿಲ್ಲ ಎಂದು ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ-BBK11: ಬಿಗ್ ಬಾಸ್ ಮನೆಗೆ ಎಲಿಮಿನೇಟ್ ಆದ ಸ್ಪರ್ಧಿಗಳ ರೀ ಎಂಟ್ರಿ.. ಮಿಡ್ ವೀಕ್ ಎಲಿಮಿನೇಷನ್‌ಗೆ ಮೆಗಾ ಟ್ವಿಸ್ಟ್!
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾವಾಗಲೂ ನಿಮ್ಮ ಸ್ವಂತ ಶಕ್ತಿಯ ಮೇಲೆ ನಂಬಿಕೆ ಇಡಿ.. ದೇವರು ಎಲ್ಲರಿಗೂ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ನೀಡಿದ್ದಾನೆ.. ಎಂದು ಶೀರ್ಷಿಕೆ ಬರೆದಿದ್ದಾರೆ. ಈ 9 ಸೆಕೆಂಡ್ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ