Baba Vanga: ಲಾಸ್ ಏಂಜಲೀಸ್ ಬೆಂಕಿಯಿಂದ ಸುಟ್ಟು ಧಗ ಧಗ ಉರಿಯುತ್ತಿದೆ, ಇಡೀ ಪ್ರದೇಶವೇ ಸುಟ್ಟು ಕರಕಲಾಗಿದೆ, ಮತ್ತೊಂದೆಡೆ ಕೋರೋನಾದ ನಂತರ ಮತ್ತೊಂದು ವೈರಸ್ ಹರಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಬಾಬಾ ವಂಗಾ ಅವರು ನುಡಿದಿದ್ದ 2025 ರ ಭವಿಷ್ಯ ನಿಜವಾಗುವಂತೆ ಕಾಣುತ್ತಿದೆ.
ಈ ಹಿಂದೆಯೂ ಕೂಡ ಬಾಬಾ ವಂಗಾ ಅವರು ನುಡಿದ ಹಲವು ಭವಿಷ್ಯಗಳು ನಿಜವಾಗಿದೆ. 2024 ರಲ್ಲಿ ಬಾಬಾ ವಂಗಾ ಅವರು ಕಣ್ಣಿಗೆ ಕಾಣದ ಜೀವಿಯೊಂದು ಇಡೀ ಪ್ರಪಂಚವನ್ನೆ ಆವರಿಸಲಿದೆ, ಇದರಿಂದ ಹೆಚ್ಚಿನ ಜನ ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು, ಅದರಂತೆಯೇ ಕೋರೋನಾ ಜನರನ್ನು ಆವರಿಸಿ, ಜಗತ್ತಿನಾದ್ಯಂತ ಕೋಟಿ ಕೋಟಿ ಜನ ಮಾರಣಾಂತಿಕ ರೋಗಕ್ಕೆ ಪ್ರಾಣ ಬಿಟ್ಟರು.
ಇದಷ್ಟೆ ಅಲ್ಲದೆ 2024 ರಲ್ಲಿ ವಿಶ್ವದ ದೊಡ್ಡ ದೇಶ ಬೆಂಕಿಗೆ ಆಹುತಿಯಾಗಲಿದೆ, ಪ್ರಳಯ, ಭೂಕಂಪ, ಪ್ರವಾಹ ಜನರನ್ನು ಕಾಡಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು, ಅದರಂತೆಯೇ, 2024ರಲ್ಲಿ ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡ ಬೆಂಕಿ ಜನರನ್ನು ಬೆಚ್ಚಿ ಬೀಳಿಸಿತ್ತು, ಇನ್ನೂ ಹಲವು ದೇಶಗಳಲ್ಲಿ ಪ್ರಳಯ, ಭೂಕಂಪದಿಂದ ಜನ ತಮ್ಮ ಸೂರು ಕಳೆದುಕೊಂಡು ಬೀದಿಗೆ ಬರುವಂತಾಯಿತು.
ಇದೀಗ 2025 ಕ್ಕೂ ಆರಂಭಕ್ಕೂ ಮುನ್ನವೇ ಬಾಬಾ ವಾಂಗಾ ಅವರು ನುಡಿದಿದ್ದ ಭವಿಷ್ಯದ ಕುರಿತು ಚರ್ಚೆಗಳು ಶುರುವಾಗಿದ್ದವು, 2025 ರಲ್ಲಿ ಜಗತ್ತಿನ ವಿನಾಶವಾಗಲಿದೆ ಎಂದು ಬಾಬಾ ವಂಗಾ ಅವರು ತಾವು ಸಾಯುವ ಮುನ್ನವೇ ಭವಿಷ್ಯ ನುಡಿದಿದ್ದರು. ಇದೀಗ ಈ ನಡುವೆ ಸಂಭವಿಸುತ್ತಿರುವ ಘಟನೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ, ಬಾಬಾ ವಂಗಾ ಅವರು ನುಡಿದ ಒಂದೊಂದೆ ಭವಿಷ್ಯ ನಿಜವಾಗುತ್ತಿದೆ.
ಒಂದು ಕಡೆ ಚೀನಾದಿಂದ ಕೊರೋನಾದ ನಂತರ HMPV ಎಂಬ ವೈರಸ್ ಪ್ರಪಂಚದಾದ್ಯಂತ ಹರಡುತ್ತಿದೆ, ಮತ್ತೊಂದೆಡೆ, ಪ್ರವಾಸಿಗರು ಮನ ಕದ್ದಿದ್ದ, ತನ್ನ ಸುಂದರ ತಾಣಗಳಿಗೆ ಸಾಕ್ಷಿಯಾಗಿದ್ದ ಲಾಸ್ ಏಂಜಲಿಸ್ ಧಗ ಧಗ ಉರಿಯುತ್ತಿದೆ, ಇದನ್ನೆಲ್ಲಾ ನೋಡುತ್ತಿದ್ದರೆ, 2025 ರಲ್ಲಿ ಪ್ರಪಂಚ ವಿನಾಶ ಆಗುತ್ತಾ ಎಂಬ ಅನುಮಾನ ಶುರುವಾಗಿದೆ, ಇದನ್ನೆಲ್ಲಾ ನೋಡಿ ಸಧ್ಯ ಜನ ಬೆಚ್ಚಿಬಿದ್ದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.