VIRAL VIDEO: ಅಬ್ಬಬ್ಬಾ ಲಾಟರಿ! ಒಂದೇ ಮಂಟಪದಲ್ಲಿ ನಾಲ್ವರನ್ನು ಮದುವೆಯಾದ ಭೂಪ!

Viral Wedding Video: ಈ ವೈರಲ್ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ʼನಿನ್ನ ಧೈರ್ಯ ಮೆಚ್ಚಲೇಬೇಕುʼ ಎಂದು ಕೆಲವರು ಕಾಮೆಂಟ್‌ ಮಾಡಿದ್ರೆ, ʼಅದೃಷ್ಟ ಅಂದರೆ ನಿಂದೆ ಗುರುʼ ಅಂತಾ ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ.

Written by - Puttaraj K Alur | Last Updated : Dec 9, 2023, 06:34 PM IST
  • ಒಂದೇ ಮಂಟಪದಲ್ಲಿ ನಾಲ್ವರನ್ನು ಮದುವೆಯಾದ ಭೂಪ!
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿರುವ ವಿಡಿಯೋ
  • ಅಬ್ಬಬ್ಬಾ ಲಾಟರಿ! ಲಕ್‌ ಅಂದ್ರೆ ಇದೇ ಅಲ್ವಾ ಎನ್ನುತ್ತಿರುವ ನೆಟಿಜನ್ಸ್
VIRAL VIDEO: ಅಬ್ಬಬ್ಬಾ ಲಾಟರಿ! ಒಂದೇ ಮಂಟಪದಲ್ಲಿ ನಾಲ್ವರನ್ನು ಮದುವೆಯಾದ ಭೂಪ! title=
ನಾಲ್ವರನ್ನು ಮದುವೆಯಾದ ಭೂಪ!

ನವದೆಹಲಿ: ಇಂದಿನ ದಿನಗಳಲ್ಲಿ ಮದುವೆಯಾಗುವುದಕ್ಕೆ ಹುಡುಗಿ ಸಿಗುವುದೇ ಕಷ್ಟವಾಗಿದೆ. ವಯಸ್ಸು ಮೀರುತ್ತಾ ಬಂದರೂ ಸಹ ಅನೇಕ ಯುವಕರು ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿಯುತ್ತಿದ್ದಾರೆ. ಸಿಕ್ಕಾಪಟ್ಟೆ ಡಿಮ್ಯಾಂಡ್‌ಗಳ ಕಾರಣ ಇಂದಿನ ಯುವಕ-ಯುವತಿಯರು ತುಂಬಾ ಲೇಟಾಗಿ ಮದುವೆಯಾಗುತ್ತಿದ್ದಾರೆ. ಹೀಗಾಗಿ ಮದುವೆ ಅನ್ನೋದು ಕಷ್ಟ ಕಷ್ಟ.. ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. 

ಇಂದು ಮದುವೆಯಾಗುವ ಯುವಕರಿಗೆ ಒಂದು ಹುಡುಗಿಯೇ ಸಿಗುವುದು ಕಷ್ಟವಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಇಲ್ಲೋರ್ವ ವ್ಯಕ್ತಿ ಒಂದೇ ಮಂಟಪದಲ್ಲಿ ನಾಲ್ವರು ಯುವತಿಯರ ಜೊತೆಗೆ ಸಪ್ತಪದಿ ತುಳಿಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಹೌದು, ನೀವು ನಂಬಲೇಬೇಕು. ಇದು ನಿಜವಾಗಿಯೂ ನಡೆದಿರುವ ಘಟನೆ.

ಇದನ್ನೂ ಓದಿ: ಕಿಂಗ್ ಕೋಬ್ರಾ ಹೆಡೆಯನ್ನು ನೆಕ್ಕುತ್ತಾ ಮುದ್ದಾಡಿದ ಗೋಮಾತೆ… ಅಸಾಮಾನ್ಯದ ಸ್ನೇಹದ ವಿಡಿಯೋ ವೈರಲ್

ಸದ್ಯ ವ್ಯಕ್ತಿಯೊಬ್ಬ ಒಂದೇ ಮಂಟಪದಲ್ಲಿ ನಾಲ್ವರೊಂದಿಗೆ ವಿವಾಹವಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.‌ ಸಾಂಪ್ರದಾಯಿಕವಾಗಿ ವಸ್ತ್ರ ಧರಿಸಿರುವ ವರ ಒಂದೇ ಮಂಟಪದಲ್ಲಿ ನಾಲ್ವರು ಯುವತಿಯರನ್ನು ಮದುವೆಯಾಗಿದ್ದಾನೆ. ಸೂಟು-ಬೂಟು ಮತ್ತು ತಲೆಗೆ ರುಮಾಲು ಧರಿಸಿದ ವರ ನಾಲ್ವರ ಜೊತೆಗೆ ಸಪ್ತಪದಿ ತುಳಿಯುತ್ತಿರುವ ವಿಡಿಯೋ ವೈರಲ್‌ ಆಗಿದೆ.  मुसाफिर(Traveller) ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ʼಸಾರಥಿ ನನ್ನ ರಥವನ್ನು ಹಳ್ಳದ ಕಡೆಗೆ ತೆಗೆದುಕೊಂಡು ಹೋಗುʼ ಅಂತಾ ವ್ಯಂಗ್ಯವಾಗಿ ಕ್ಯಾಪ್ಶನ್‌ ಬರೆಯಲಾಗಿದೆ. 

ಈ ವೈರಲ್ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ʼನಿನ್ನ ಧೈರ್ಯ ಮೆಚ್ಚಲೇಬೇಕುʼ ಎಂದು ಕೆಲವರು ಕಾಮೆಂಟ್‌ ಮಾಡಿದ್ರೆ, ʼಅದೃಷ್ಟ ಅಂದರೆ ನಿಂದೆ ಗುರುʼ ಅಂತಾ ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. ಈ ಮದುವೆ ಎಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ಮಾತ್ರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. 

ಇದನ್ನೂ ಓದಿ: ಮೂವಿಂಗ್‌ ಟ್ರೇನ್‌ನಲ್ಲಿ ಮಹಿಳೆಯ ಬೆಲ್ಲಿ ಡ್ಯಾನ್ಸ್‌: ಇಂಟರ್‌ನೆಟ್‌ನಲ್ಲಿ ವಿಡಿಯೋ ವೈರಲ್!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News