Viral Video: ಅನಕ್ಷರಸ್ಥ ರಾಜಕಾರಣಿಗಳಿಗೆ ಮತ ಹಾಕಬೇಡಿ; ಅನಾಕಾಡೆಮಿ ಶಿಕ್ಷಕನ ವಿಡಿಯೋ ವೈರಲ್!

BALA ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರ ವಿವಿಧ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ.

Written by - Puttaraj K Alur | Last Updated : Aug 13, 2023, 04:55 PM IST
  • ಹೆಸರು ಬದಲಾಯಿಸುವ ಅನಕ್ಷರಸ್ಥ ರಾಜಕಾರಣಿಗಳಿಗೆ ಮತ ನೀಡಬೇಡಿ
  • ಆನ್‍ಲೈನ್ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅನಾಕಾಡೆಮಿ ಶಿಕ್ಷಕನ ಸಲಹೆ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಯೋ
Viral Video: ಅನಕ್ಷರಸ್ಥ ರಾಜಕಾರಣಿಗಳಿಗೆ ಮತ ಹಾಕಬೇಡಿ; ಅನಾಕಾಡೆಮಿ ಶಿಕ್ಷಕನ ವಿಡಿಯೋ ವೈರಲ್! title=
'ಅನಕ್ಷರಸ್ಥ ರಾಜಕಾರಣಿಗಳಿಗೆ ಮತ ನೀಡಬೇಡಿ'

ನವದೆಹಲಿ: ಹೆಸರು ಬದಲಾಯಿಸುವ ಅನಕ್ಷರಸ್ಥ ರಾಜಕಾರಣಿಗಳಿಗೆ ಮತ ನೀಡಬೇಡಿ ಎಂದು ಆನ್‍ಲೈನ್ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅನಾಕಾಡೆಮಿ ಶಿಕ್ಷಕ ಸಲಹೆ ನೀಡಿದ್ದಾನೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಹೌದು, ಅನಾಕಾಡೆಮಿ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಗೆ ಸಲಹೆ ನೀಡಿರುವ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ. ಈ ವಿಡಿಯೋದಲ್ಲಿ ಶಿಕ್ಷಕ, ‘ವಿದ್ಯಾರ್ಥಿಗಳಿಗೆ ಗಮನವಿಟ್ಟು ಕೇಳಿ, ಮುಂದಿನ ಬಾರಿ ನೀವು ಮತ ​​ಚಲಾಯಿಸುವಾಗ ನೆನಪಿಸಿಕೊಳ್ಳಿ, ಅನಕ್ಷರಸ್ಥ ರಾಜಕಾರಣಿಗಳ ಬದಲು ಅಕ್ಷರಸ್ಥರನ್ನು ಆಯ್ಕೆ ಮಾಡಿ. ಇದರಿಂದ ನೀವು ಮತ್ತೆ ಈ ಪರಿಸ್ಥಿತಿಯನ್ನು  ಎದುರಿಸಬಾರದು. ವಿಷಯಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಗೆ ಮತ ನೀಡಿದರೆ ಉತ್ತಮ. ಹೀಗಾಗಿ ನಿಮ್ಮ ನಿರ್ಧಾರಗಳನ್ನು ಸರಿಯಾಗಿ ಮಾಡಿ’ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: B.Ed ಪದವೀಧರರು ‘ಪ್ರಾಥಮಿಕ ಶಾಲಾ ಶಿಕ್ಷಕ’ರ ಹುದ್ದೆಗೆ ಅರ್ಹರಲ್ಲ: ‘ಸುಪ್ರೀಂ’ ಮಹತ್ವದ ತೀರ್ಪು

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಪರ-ವಿರೋಧ ವ್ಯಕ್ತವಾಗಿದೆ. BALA ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರ ವಿವಿಧ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ.

‘ಅನಾಕಾಡೆಮಿಯ ಈ ಶಿಕ್ಷಕ ಸಂಬಳ ಪಡೆಯುವ ಕೆಲಸವನ್ನು ಮಾಡಬೇಕಾಗಿರುವುದರಿಂದ ಹತಾಶರಾಗಿದ್ದಾರೆ. ಹೀಗಾಗಿ ಹೊಸ ಬದಲಾವಣೆ ತರುವ ಸರ್ಕಾರಕ್ಕೆ ಅಂದರೆ ಬಿಜೆಪಿಗೆ ಮತ ಹಾಕಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ನಿಮ್ಮ ಪೇಚೆಕ್ ಬೋಧನೆಯ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಟಿಪ್ಪಣಿ ಮಾಡುವಲ್ಲಿ ನಿಮಗೆ ಸಮಸ್ಯೆ ಇದೆಯೇ? ಶಿಕ್ಷಕರ ಕೆಲಸವು ತಮ್ಮ ವಿದ್ಯಾರ್ಥಿಗಳಿಗೆ ಸತ್ಯಗಳನ್ನು ಕಲಿಸುವುದು, ಪ್ರಚಾರವಲ್ಲ ಎಂದು ಉತ್ತಮ ಹಳೆಯ ದಿನಗಳನ್ನು ಕಳೆದುಕೊಳ್ಳುತ್ತಿದೆ’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

ಇದನ್ನೂ ಓದಿ: NCERT ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್ ಮಹಾದೇವನ್

ಇನ್ನು ಕೆಲವರು ‘ಅನಾಕಾಡೆಮಿಯಿಂದ ಪ್ರಧಾನಿ ಮೋದಿ ವಿರೋಧಿ ಅಜೆಂಡಾ ದ್ವೇಷವನ್ನು ಶಿಕ್ಷಣದ ಹೆಸರಿನಲ್ಲಿ ನೀಡಲಾಗುತ್ತಿದೆ. ಅನಾಕಾಡೆಮಿಯ ಶಿಕ್ಷಕ ಕರಣ್ ಸಾಂಗ್ವಾನ್ ಅವರು ಪ್ರಧಾನಿ ಮೋದಿಯನ್ನು ಅನಕ್ಷರಸ್ಥರೆಂದು ಪರೋಕ್ಷವಾಗಿ ಕರೆದಿದ್ದು, ಅವರಿಗೆ ಮತ ಚಲಾಯಿಸಬೇಡಿ ಎಂದು ಹೇಳಿದ್ದಾರೆ. ನಿಮಗೆ ಪ್ರಧಾನಿ ಮೋದಿ ಇಷ್ಟವಿಲ್ಲದಿದ್ದರೆ ಅವರನ್ನು ವಿರೋಧಿಸಿ. ಆದರೆ ಶಿಕ್ಷಣದ ನೆಪದಲ್ಲಿ ನಿಮ್ಮ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಬೇಡಿ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News