ಪಾಕಿಸ್ತಾನದಲ್ಲೊಂದು ವಿಚಿತ್ರ ಕ್ರಿಕೆಟ್ ಪಂದ್ಯ, ಪರಸ್ಪರ ಹೊಡೆದಾಡಿಕೊಂಡ ಬ್ಯಾರ್ಟ್ಸ್ಮನ್ ಗಳು... ವಿಡಿಯೋ ನೋಡಿ!

Viral Video: ಪಾಕಿಸ್ತಾನದಲ್ಲಿ ನಡೆದ ಒಂದು ಕ್ರಿಕೆಟ್ ಪಂದ್ಯದ ತಮಾಷೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾನಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಒಂದೇ ತಂಡದ ಇಬ್ಬರು ಆಟಗಾರರು, ರನೌಟ್ ಆದ ನಂತರ, ಕೋಲು ಬೀಸಿದಂತೆ ಪರಸ್ಪರ ಬ್ಯಾಟ್‌ಗಳನ್ನು ಬೀಸಲು ಆರಂಭಿಸಿದ್ದಾರೆ. (Viral News In Kannada)  

Written by - Nitin Tabib | Last Updated : Nov 12, 2023, 04:39 PM IST
  • ವಾಸ್ತವದಲ್ಲಿ ರನ್ ಔಟ್ ಆದ ನಂತರ, ಆಟಗಾರನು ತನ್ನ ಸಹ ಆಟಗಾರನ ಮೇಲೆ ಕೋಪಗೊಳ್ಳುತ್ತಾನೆ.
  • ಕೋಪದಲ್ಲಿ ಅವನು ಆತನ ಬೈಯಲು ಆರಂಭಿಸುತ್ತಾನೆ. ಬೌಲರ್ ಚೆಂಡನ್ನು ಎಸೆಯುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು
  • ಮತ್ತು ಬ್ಯಾಟ್ಸ್‌ಮನ್ ಶಾಟ್ ಮಾಡಿದ ತಕ್ಷಣ, ಇನ್ನೊಂದು ತುದಿಯಲ್ಲಿ ನಿಂತಿರುವ ಬ್ಯಾಟ್ಸ್‌ಮನ್ ರನ್ ತೆಗೆದುಕೊಳ್ಳಲು ವೇಗವಾಗಿ ಓಡುತ್ತಾನೆ,
ಪಾಕಿಸ್ತಾನದಲ್ಲೊಂದು ವಿಚಿತ್ರ ಕ್ರಿಕೆಟ್ ಪಂದ್ಯ, ಪರಸ್ಪರ ಹೊಡೆದಾಡಿಕೊಂಡ ಬ್ಯಾರ್ಟ್ಸ್ಮನ್ ಗಳು... ವಿಡಿಯೋ ನೋಡಿ! title=

ನವದೆಹಲಿ: ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಸತತ ಸೋಲು ಹಾಗೂ ಕಳಪೆ ಪ್ರದರ್ಶನದ ಪರಿಣಾಮ ಈ ತಂಡ ಇದೀಗ ವಿಶ್ವಕಪ್ ನಿಂದ ಹೊರಬೀಳುವ ಹಂತದಲ್ಲಿದೆ. ಅಲ್ಲದೇ, ಪಾಕಿಸ್ತಾನ ತಂಡ ಚೆನ್ನಾಗಿ ಆಡಿದೆಯೋ ಇಲ್ಲವೋ ಅದೇನೇ ಇರಲಿ ಆದರೆ, ಪಾಕಿಸ್ತಾನದಲ್ಲಿ ನಡೆದ ಒಂದು ಕ್ರಿಕೆಟ್ ಪಂದ್ಯದ ತಮಾಷೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಭಾರಿ ವೈರಲ್ ಆಗುತ್ತಿದೆ. ಇಂತಹ ಪಂದ್ಯವನ್ನು ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ. ಸಾಮಾನ್ಯವಾಗಿ ಪಂದ್ಯದ ಸಮಯದಲ್ಲಿ, ಎರಡು ತಂಡಗಳ ಆಟಗಾರರು ಪರಸ್ಪರ ಯಾವುದೋ ವಿಷಯಕ್ಕೆ ಜಗಳವಾಡುತ್ತಾರೆ, ಆದರೆ ಒಂದೇ ತಂಡದ ಆಟಗಾರರು ಪರಸ್ಪರ ಜಗಳವಾಡುವುದನ್ನು ನೀವೆಲ್ಲಾದರೂ ನೋಡಿದ್ದೀರಾ? ಈ ಕುರಿತಾದ ವಿಡಿಯೋ ಭಾರೀ ವೈರಲ್ ಆಗುತ್ತಿದೆ.(Viral News In Kannada)

ವಾಸ್ತವದಲ್ಲಿ ರನ್ ಔಟ್ ಆದ ನಂತರ, ಆಟಗಾರನು ತನ್ನ ಸಹ ಆಟಗಾರನ ಮೇಲೆ ಕೋಪಗೊಳ್ಳುತ್ತಾನೆ. ಕೋಪದಲ್ಲಿ ಅವನು ಆತನ ಬೈಯಲು ಆರಂಭಿಸುತ್ತಾನೆ. ಬೌಲರ್ ಚೆಂಡನ್ನು ಎಸೆಯುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು ಮತ್ತು ಬ್ಯಾಟ್ಸ್‌ಮನ್ ಶಾಟ್ ಮಾಡಿದ ತಕ್ಷಣ, ಇನ್ನೊಂದು ತುದಿಯಲ್ಲಿ ನಿಂತಿರುವ ಬ್ಯಾಟ್ಸ್‌ಮನ್ ರನ್ ತೆಗೆದುಕೊಳ್ಳಲು ವೇಗವಾಗಿ ಓಡುತ್ತಾನೆ, ಆದರೆ ನಂತರ ಶಾಟ್ ಹೊಡೆದ ಬ್ಯಾಟ್ಸ್‌ಮನ್ ಆತನಿಗೆ  ನಿಲ್ಲಲು ಕೇಳುತ್ತಾನೆ, ಆದರೆ ಅಷ್ಟೊತ್ತಿಗೆ ಮತ್ತೊಂದು ತುದಿಯಲ್ಲಿರುವ ಬ್ಯಾಟ್ಸ್‌ಮನ್ ಆತನ ಕ್ರೀಸ್ ಗೆ ಬಂದು ತಲುಪುತ್ತಾನೆ ಮತ್ತು ಅವನು ರನ್ ಔಟ್ ಆಗುತ್ತಾನೆ.

ಇದನ್ನೂ ಓದಿ-Viral Video: ಹಸುವನ್ನು ಮುಂದೆ ಕೂರಿಸಿಕೊಂಡು ಹೋಗುತ್ತಿರುವ ಈ ಭೂಪನ ಪರಿ ನೋಡಿ ತಲೆ ಗಿರ್ರ್ ಅನ್ನುತ್ತೆ!

ಇದರಿಂದ ಕೋಪಗೊಂಡ ಆಟ ತನ್ನ ಸಹ ಬ್ಯಾಟ್ಸ್‌ಮನ್‌ನ ಮೇಲೆ ಬ್ಯಾಟ್ ನಿಂದ ದಾಳಿ ಇಡುತ್ತಾನೆ. ಈ ಸಮಯದಲ್ಲಿ, ಬ್ಯಾಟ್ಸ್‌ಮನ್ ಕೂಡ ಕೋಪಗೊಂಡು ಅವನನ್ನು ಹೊಡೆಯಲು ಓಡುತ್ತಾನೆ. ಆದರೆ, ಅಲ್ಲಿದ್ದ ಜನ ಈ ಜಗಳವನ್ನು ತಡೆದಿದ್ದಾರೆ, ಇಲ್ಲದಿದ್ದರೆ,  ಅಲ್ಲಿ ಮತ್ತೊಂದು ದೊಡ್ಡ 'ಗೇಮ್' ನಡೆದುಹೋಗುತ್ತಿತ್ತು  

ಇದನ್ನೂ ಓದಿ-ಅಬ್ಬಾ...! ದಾಹ ತೀರಿಸಿಕೊಳ್ಳಲು ಹೂಜಿಗೆ ಕಲ್ಲು ಹಾಕಿ ನೀರು ಕುಡಿಯೋ ಕಾಗೆ ಕೊನೆಗೆ ಸಿಕ್ಕೆ ಬೀಟ್ತು ... ವಿಡಿಯೋ ನೋಡಿ

ವಿಡಿಯೋ ನೋಡಿ 

ಈ ತಮಾಷೆಯ ವೀಡಿಯೊವನ್ನು @gharkekalesh ಹೆಸರಿನ ID ಯೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X  ಹಂಚಿಕೊಳ್ಳಲಾಗಿದೆ. ಕೇವಲ 56 ಸೆಕೆಂಡ್ ಗಳ ಈ ವೀಡಿಯೋವನ್ನು ಇದುವರೆಗೆ 6 ಲಕ್ಷ 40 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಸಾವಿರಾರು ಮಂದಿ ವಿಡಿಯೋವನ್ನು ಲೈಕ್ ಮಾಡಿ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News