Viral Video: ತುಮಕೂರಿನಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ..!

Common Cat Snake: ಹಿಂಬದಿ ಕೋರೆಹಲ್ಲುಗಳನ್ನು ಹೊಂದಿರೋ ಜಾತಿಗೆ ಸೇರಿದ ಹಾವು ಇದಾಗಿದೆ. ಸೆರೆ ಸಿಕ್ಕ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ತುಮಕೂರಿನ ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಉರಗ ತಜ್ಞ ದಿಲೀಪ್ ಹೇಳಿದ್ದಾರೆ.

Written by - Puttaraj K Alur | Last Updated : Dec 3, 2022, 02:11 PM IST
  • ತುಮಕೂರು ತಾಲೂಕಿನ ತನ್ನೆನಹಳ್ಳಿಯಲ್ಲಿ ಪತ್ತೆಯಾಯ್ತು ಅಪರೂಪದ ಬೆಕ್ಕಿನ ಕಣ್ಣಿನ ಹಾವು
  • ಭಾರತೀಯ ಕ್ಯಾಟ್ ಸ್ನೇಕ್ ಎಂದು ಕರೆಯಲ್ಪಡುವ ಹಾವನ್ನು ರಕ್ಷಿಸಿದ ಉರಗ ತಜ್ಞ ದಿಲೀಪ್
  • ಬೆಕ್ಕಿನ ಕಣ್ಣಿನ ಹಾವು ರಕ್ಷಿಸಿ ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ
Viral Video: ತುಮಕೂರಿನಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ..! title=
ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ!

ತುಮಕೂರು: ಭಾರತವೂ ಸೇರಿದಂತೆ ಇಡೀ ಪ್ರಪಂಚದಲ್ಲಿ ಅನೇಕ ಜಾತಿಯ ಹಾವುಗಳು ಕಾಣಸಿಗುತ್ತವೆ. ಒಂದು ಅಂದಾಜಿನ ಪ್ರಕಾರ ಸುಮಾರು 15 ಕುಟುಂಬಕ್ಕೆ ಸೇರಿದ 2900ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ ಎಂದು ಹೇಳಲಾಗಿದೆ. ಹಾವುಗಳ ಪೈಕಿ ಕೆಲವು ಅತ್ಯಂತ ವಿಷಪೂರಿತವಾಗಿದ್ದರೆ, ಇನ್ನೂ ಕೆಲವು ಹಾವುಗಳು ವಿಷರಹಿತವಾಗಿರುತ್ತವೆ

ಭಾರತದಲ್ಲಿ ನಾಗರಹಾವುಗಳನ್ನು ದೇವರಸ್ವರೂಪವೆಂದು ಪೂಜಿಸಲಾಗುತ್ತದೆ. ಕಾಳಿಂಗ ಸರ್ಪ, ಹೆಬ್ಬಾವು, ಕೆರೆ ಹಾವು, ಮಣ್ಣುಮುಕ್ಕುವ ಹಾವು ಸೇರಿದಂತೆ ಅನೇಕ ಜಾತಿಯ ಹಾವುಗಳು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ತುಮಕೂರಿನಲ್ಲಿ ಅಪರೂಪದಲ್ಲಿಯೇ ಅಪರೂಪವಾಗಿರುವ ಬೆಕ್ಕಿನ ಕಣ್ಣಿನ ಹಾವು ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಪಾರಿವಾಳ ಹಿಡಿಯಲೋದ ಮಕ್ಕಳಿಗೆ ಕರೆಂಟ್‌ ಶಾಕ್‌ - ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕ

ಹೌದು, ತುಮಕೂರು ತಾಲೂಕಿನ ತನ್ನೆನಹಳ್ಳಿ ಗ್ರಾಮದ ಗೆಸ್ಟ್ ಹೌಸ್‍ನಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆಯಾಗಿದೆ. ಬೆಂಗಳೂರು ನಿವಾಸಿ ಮುರಳಿಧರ್ ಅವರ ಗೆಸ್ಟ್ ಹೌಸ್‍ನ ಕಾಟನ್ ಬಾಕ್ಸ್ ಒಳಗಡೆ ಹಾವು ಕಾಣಿಸಿಕೊಂಡಿದೆ. ಕೂಡಲೇ ಅವರು ವಾರಂಗಲ್ ಫೌಂಡೇಶನ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣೆ ಸಂಸ್ಥೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ದಿಲೀಪ್ ಪರಿಶೀಲನೆ ನಡೆಸಿ ಕಾಟನ್ ಬಾಕ್ಸ್ ಒಳಗೆ ಇದ್ದ ಅಪರೂಪದ ಬೆಕ್ಕಿನ ಕಣ್ಣಿನ ಹಾವನ್ನು ರಕ್ಷಿಸಿದ್ದಾರೆ. ಈ ಅಪರೂಪದ ಹಾವನ್ನು ಸಾಮಾನ್ಯವಾಗಿ ಭಾರತೀಯ ಕ್ಯಾಟ್ ಸ್ನೇಕ್ ಎಂದು ಕರೆಯಲಾಗುತ್ತೆ. ಇವು ದಕ್ಷಿಣ ಏಷ್ಯಾಕ್ಕೆ ಸೀಮಿತವಾಗಿವೆ. ಹಿಂಬದಿ ಕೋರೆಹಲ್ಲುಗಳನ್ನು ಹೊಂದಿರೋ ಜಾತಿಗೆ ಸೇರಿದ ಹಾವು ಇದಾಗಿದೆ. ಸೆರೆ ಸಿಕ್ಕ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ತುಮಕೂರಿನ ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಉರಗ ತಜ್ಞ ದಿಲೀಪ್ ಹೇಳಿದ್ದಾರೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ತಗ್ಗಿದ ಟ್ರಾಫಿಕ್: ಸಂಚಾರ ಪೊಲೀಸರಿಗೆ ಹರಿದು ಬಂತು ಧನ್ಯವಾದಗಳ ಮಹಾಪೂರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News