ಬಂಡೀಪುರದಲ್ಲಿ ಎಲ್ಲರ ಫೇವರೇಟ್ ಆಗಿದ್ದ 'ಪ್ರಿನ್ಸ್'ನಂತೆ ಪ್ರವಾಸಿಗರ ಮನಗೆದ್ದ ಭೀಮನ ವೈರಲ್ ವಿಡಿಯೋ

Today Trending Video: ಬಂಡೀಪುರದ ಸಫಾರಿಯ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ಕೊಡುತ್ತಿದೆ. ಜೊತೆಗೆ, ಪ್ರವಾಸಿಗರನ್ನು ಕಂಡರೇ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಇಡುತ್ತಿದೆ. 

Written by - Yashaswini V | Last Updated : Jan 27, 2025, 12:25 PM IST
  • ಬಂಡೀಪುರ ಅಂದರೆ ಸಾಕು ವನ್ಯಪ್ರೇಮಿಗಳಿಗೆ ನೆನಪಾಗುವುದು ಪ್ರಿನ್ಸ್ ಹೆಸರಿನ ಹುಲಿ.
  • ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡರೇ ಮರೆಯಾಗುವುದೇ ಹೆಚ್ಚು.
  • ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೇ ದೂರ ಓಡದೆ ಹತ್ತಿರಕ್ಕೆ ಬರುತ್ತಿದ್ದ. ಗಂಟೆಗಟ್ಟಲೆ ದರ್ಶನ ಕೊಡುತ್ತಿದ್ದ, ಸಫಾರಿ ಜೀಪ್ ಹತ್ತಿರವೇ ಸುಳಿದಾಡುತ್ತಿದ್ದ.
ಬಂಡೀಪುರದಲ್ಲಿ ಎಲ್ಲರ ಫೇವರೇಟ್ ಆಗಿದ್ದ 'ಪ್ರಿನ್ಸ್'ನಂತೆ ಪ್ರವಾಸಿಗರ ಮನಗೆದ್ದ ಭೀಮನ ವೈರಲ್ ವಿಡಿಯೋ  title=

Tiger Viral Video: ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈಗ ಭೀಮನದ್ದೇ ದರ್ಬಾರ್. ಒಂದು ಕಾಲದಲ್ಲಿ ಪ್ರವಾಸಿಗರ ಫೇವರೇಟ್ ಆಗಿದ್ದ ಪ್ರಿನ್ಸ್ ನಂತೆ ಈಗ ಭೀಮ ಕೂಡ ಎಲ್ಲರ ನೆಚ್ಚಿನ ಹುಲಿರಾಯ. ಈ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್.
 
ಬಂಡೀಪುರ ಅಂದರೆ ಸಾಕು ವನ್ಯಪ್ರೇಮಿಗಳಿಗೆ ನೆನಪಾಗುವುದು ಪ್ರಿನ್ಸ್ ಹೆಸರಿನ ಹುಲಿ. ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡರೇ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೇ ದೂರ ಓಡದೆ ಹತ್ತಿರಕ್ಕೆ ಬರುತ್ತಿದ್ದ. ಗಂಟೆಗಟ್ಟಲೆ ದರ್ಶನ ಕೊಡುತ್ತಿದ್ದ, ಸಫಾರಿ ಜೀಪ್ ಹತ್ತಿರವೇ ಸುಳಿದಾಡುತ್ತಿದ್ದ. ಈಗ ಪ್ರಿನ್ಸ್ ನಂತೆ ಭೀಮ ಎಂಬ ಹುಲಿಯು ಪ್ರವಾಸಿಗರನ್ನು ಸೆಳೆಯುತ್ತಿದೆ.

ಇದನ್ನೂ ಓದಿ- ವಾಹನಗಳ ಮೇಲೆ ಆನೆ ದಾಳಿ: ಬೈಕ್ ಬಿಟ್ಟು ಓಡಿದ ಸವಾರರು ವಿಡಿಯೋ ವೈರಲ್

ಬಂಡೀಪುರದ ಸಫಾರಿಯ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ಕೊಡುತ್ತಿದೆ. ಜೊತೆಗೆ, ಪ್ರವಾಸಿಗರನ್ನು ಕಂಡರೇ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಇಡುತ್ತಿದೆ. ಸಫಾರಿ ವಾಹನ ಬಂದರೂ ಹೆದರದೇ ರಸ್ತೆ ದಾಟಿ, ರಗಡ್ ಲುಕ್ ಕೊಡಲಿದ್ದು ಭೀಮನ ಧೈರ್ಯಕ್ಕೆ ಪ್ರವಾಸಿಗರು ಫಿಧಾ ಆಗುತ್ತಿದ್ದಾರೆ.

ಭೀಮ ಹುಲಿಯು ಪ್ರಿನ್ಸ್ ನಂತೆ ಸ್ವಭಾವ ಹೊಂದಿದ್ದು ಪ್ರಿನ್ಸ್ ರೀತಿಯೇ ಮುಖಭಾವ ಪ್ರದರ್ಶನ ಮಾಡುತ್ತದೆ. ಅಂದಾಜು 5 ವರ್ಷದ ಗಂಡು ಹುಲಿಯಾಗಿರುವ ಭೀಮ ಅತಿ ದೊಡ್ಡದಾದ ಸರಹದ್ದನೇ ಹೊಂದಿದೆ, ಪ್ರವಾಸಿಗರಿಗೆ ರಾಜ ಗಾಂಭೀರ್ಯದಲ್ಲೇ ಫೋಸ್ ಕೊಡುತ್ತಾನೆ‌. ಪ್ರಿನ್ಸ್ 2018 ರಲ್ಲಿ ವಯೋಸಹಜವಾಗಿ ಅಸುನೀಗಿತ್ತು  ಬಳಿಕ ಈಗ  ಭೀಮ ಪ್ರವಾಸಿಗರ ಫೇವರೇಟ್ ಆಗಿದೆ ಎನ್ನುತ್ತಾರೆ ಬಂಡೀಪುರ ಎಸಿಎಫ್ ನವೀನ್ ಕುಮಾರ್.

ಇದನ್ನೂ ಓದಿ- ರಸ್ತೆಯಲ್ಲಿ ಚೆಲ್ಲಿದ್ದ ಅಕ್ಕಿ ತಿನ್ನುತ್ತಾ ನಿಂತ "ಕಾಡಾನೆಗಳು": ಅರ್ಧ ತಾಸು ಟ್ರಾಫಿಕ್ ಜಾಮ್

ಒಟ್ಟಿನಲ್ಲಿ ಬಂಡೀಪುರದಲ್ಲಿ ರಾಜನಂತೆ ಮೆರೆದಿದ್ದ ಪ್ರಿನ್ಸ್ ಬಳಿಕ ಈಗ ಭೀಮನ ದರ್ಬಾರ್ ಶುರುವಾಗಿದೆ, ಪ್ರವಾಸಿಗರ ಫೇವರೇಟ್ ಆಗಿ ಭೀಮ‌ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News