Viral Video: ಹಸುವನ್ನು ಮುಂದೆ ಕೂರಿಸಿಕೊಂಡು ಹೋಗುತ್ತಿರುವ ಈ ಭೂಪನ ಪರಿ ನೋಡಿ ತಲೆ ಗಿರ್ರ್ ಅನ್ನುತ್ತೆ!

Trending Video: ನಾಯಿ, ಬೆಕ್ಕುಗಳನ್ನು ಜನರು ಬೈಕ್ ಮೇಲೆ ಕೂರಿಸಿಕೊಂಡು ಹೋಗುವ ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಹಸು ಅಥವಾ ಎತ್ತನ್ನು  ಬೈಕ್ ಮೇಲೆ ಕೂರಿಸಿಕೊಂಡು ಬೈಕ್ ಓಡಿಸುವುದನ್ನು ನೋಡಿದ್ದೀರಾ? ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ತಮಾಷೆಯ ವೀಡಿಯೋ ಜನರನ್ನು ನಗೆಗಡಲಲ್ಲಿ ತೇಲಿಸಿದೆ. (Viral News In Kannada)  

Written by - Nitin Tabib | Last Updated : Nov 11, 2023, 04:59 PM IST
  • ಪ್ರಸ್ತುತ, ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ @nareshbahrain ಹೆಸರಿನ ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು
  • ಷೇರು ಮಾರುಕಟ್ಟೆ ಶೈಲಿಯಲ್ಲಿ 'ರ್ಯಾಲಿಯಲ್ಲಿ ಬುಲ್ ಅನ್ನು ಸವಾರಿ ಮಾಡುವುದು ಅಂದರೆ ಇದೆ ನೋಡಿ' ಎಂಬ ತಮಾಷೆಯ ಶೀರ್ಷಿಕೆ ಬರೆಯಲಾಗಿದೆ.
  • ಕೇವಲ 12 ಸೆಕೆಂಡ್ ಗಳ ಈ ವೀಡಿಯೋ ಇದುವರೆಗೆ 1 ಲಕ್ಷ 93 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದ್ದು, ನೂರಾರು ಮಂದಿ ಲೈಕ್ ಕೂಡ ಮಾಡಿದ್ದಾರೆ.
Viral Video: ಹಸುವನ್ನು ಮುಂದೆ ಕೂರಿಸಿಕೊಂಡು ಹೋಗುತ್ತಿರುವ ಈ ಭೂಪನ ಪರಿ ನೋಡಿ ತಲೆ ಗಿರ್ರ್ ಅನ್ನುತ್ತೆ! title=

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ಬೈಕ್ ಅಥವಾ ಕಾರಿನಲ್ಲಿ ಕೂರಿಸಿಕೊಂಡು ಹೋಗುವುದು ಒಂದು ಸಾಮಾನ್ಯ ವಿಷಯವಾಗಿದೆ.  ನಾಯಿ, ಬೆಕ್ಕುಗಳಂತಹ ಸಾಕುಪ್ರಾಣಿಗಳನ್ನು ಹೊಂದಿರುವ ಯಾರಾದರೂ ಬೈಕ್ ಅಥವಾ ಕಾರಿನಲ್ಲಿ ಎಲ್ಲಿಗೆ ಹೋದರೂ ಈ ಸಾಕುಪ್ರಾಣಿಗಳನ್ನು ಕರೆದುಕೊಂಡು ಹೋಗಲು ಮರೆಯುವುದಿಲ್ಲ. ಕೆಲವರು ತಮ್ಮ ನಾಯಿಗಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ, ಇನ್ನು ಕೆಲವರು ಬೈಕ್‌ನಲ್ಲಿ ಕೂರಿಸಿಕೊಂಡು ಬೀದಿಗಿಳಿಯುತ್ತಾರೆ, ಆದರೆ ಹಸು  ಬೈಕ್‌ನಲ್ಲಿ ತಿರುಗಾಡುವುದನ್ನು ನೀವು ನೋಡಿದ್ದೀರಾ? ಹೌದು, ಇತ್ತೀಚಿನ ದಿನಗಳಲ್ಲಿ ಅಂತಹ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹಲ್ಚಲ್ ಸೃಷ್ಟಿಸಿದೆ, ಇದನ್ನು ನೋಡಿ ಜನರು ಆಶ್ಚರ್ಯಪಡುತ್ತಿದ್ದಾರೆ ಮತ್ತು ನಗುತ್ತಿದ್ದಾರೆ. (Viral News In Kannada)

ಭಾರಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ತನ್ನ ಬೈಕ್‌ ಮೇಲೆ ಹಸುವನ್ನು ಕೂರಿಸಿಕೊಂಡು ಸವಾರಿ ಮಾಡುತ್ತಿರುವುದನ್ನು ನೀವು ನೋಡಬಹುದು. ಇಂತಹ ವಿಶಿಷ್ಟವಾದ ಸವಾರಿ ನೀವು ಬಹುಶಃ ಹಿಂದೆಂದೂ ನೋಡಿರಲಿಕ್ಕಿಲ್ಲ. ವ್ಯಕ್ತಿಯೊಬ್ಬ ಹಸುವನ್ನು ಬೈಕ್ ನಲ್ಲಿ ತನ್ನ ಮುಂದೆ ಕೂರಿಸಿ ಹಸುವಿನ ಹಿಂಬದಿಗೆ ಕುಳಿತು ಬೈಕ್ ಸವಾರಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ದೊಡ್ಡ ಕೊಂಬುಗಳನ್ನು ಹೊಂದಿರುವ ಹಸು ಕೂಡ ಬಹಳ ಖುಷಿಯಿಂದ ಬೈಕ್ ಸವಾರಿಯನ್ನು ಆನಂದಿಸುತ್ತಿದೆ. ಈ ತಮಾಷೆಯ ದೃಶ್ಯವನ್ನು ಕಾರ್ ಸವಾರನೊಬ್ಬ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿದೆ. ಕೆಲವರು ಈ ವೀಡಿಯೋವನ್ನು ನೈಜೀರಿಯಾದ ವಿಡಿಯೋ ಆಗಿದ್ದು, ಅಲ್ಲಿನ ಜನರು ಆಗಾಗ್ಗೆ ಇಂತಹ ವಿಚಿತ್ರ ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ-ಅಬ್ಬಾ...! ದಾಹ ತೀರಿಸಿಕೊಳ್ಳಲು ಹೂಜಿಗೆ ಕಲ್ಲು ಹಾಕಿ ನೀರು ಕುಡಿಯೋ ಕಾಗೆ ಕೊನೆಗೆ ಸಿಕ್ಕೆ ಬೀಟ್ತು ... ವಿಡಿಯೋ ನೋಡಿ

ಇಲ್ಲಿದೆ ಆ ವಿಡಿಯೋ

ಪ್ರಸ್ತುತ, ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ @nareshbahrain ಹೆಸರಿನ ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಷೇರು ಮಾರುಕಟ್ಟೆ ಶೈಲಿಯಲ್ಲಿ 'ರ್ಯಾಲಿಯಲ್ಲಿ ಬುಲ್ ಅನ್ನು ಸವಾರಿ ಮಾಡುವುದು ಅಂದರೆ ಇದೆ ನೋಡಿ' ಎಂಬ ತಮಾಷೆಯ ಶೀರ್ಷಿಕೆ ಬರೆಯಲಾಗಿದೆ. ಕೇವಲ 12 ಸೆಕೆಂಡ್ ಗಳ ಈ ವೀಡಿಯೋ ಇದುವರೆಗೆ 1 ಲಕ್ಷ 93 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದ್ದು, ನೂರಾರು ಮಂದಿ ಲೈಕ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ-Rashmika Mandanna Deepfake ವಿಡಿಯೋ ತಯಾರಿಸಿದವರಿಗೆ ಶಿಕ್ಷೆ-ದಂಡ ಪ್ರಕಟಿಸಿದ ಸರ್ಕಾರ, ಇಲ್ಲಿದೆ ಡೀಟೈಲ್ಸ್!

ಇದೇ ವೇಳೆ, ವೀಡಿಯೊವನ್ನು ನೋಡಿದ ನಂತರ, ಜನರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 'ಇದನ್ನು ಬುಲ್ ರನ್ ಎಂದು ಕರೆಯಲಾಗುತ್ತದೆ' ಎಂದು ಯಾರೋ ಹೇಳುತ್ತಿದ್ದರೆ, 'ಜಗತ್ತು ತುಂಬಾ ವಿಭಿನ್ನವಾಗಿದೆ ಮತ್ತು ಯಾರೂ ಊಹಿಸಲೂ ಸಾಧ್ಯವಾಗದ ಕೌಶಲ್ಯಗಳಿಂದ ತುಂಬಿದೆ' ಎಂದು ಕೆಲವರು ಹೇಳುತ್ತಿದ್ದಾರೆ, ಆದರೆ ಕೆಲ ಬಳಕೆದಾರರು 'ಆತ ಹಸುವನ್ನು ಬೈಕ್ ಮೇಲೆ ಕೂರಿಸಿದ್ದಾನೆಯೇ? ಎಂದು ಆಶ್ಚರ್ಯವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News