Viral News: ನನಗೆ ‘ಎಣ್ಣೆ ಬೇಕು ಅಣ್ಣಾ’ ಎನ್ನುತ್ತಿರುವ ಹುಂಜ..!

ಮಹಾರಾಷ್ಟ್ರದ ಭಂಡಾರದಲ್ಲಿರುವ ಹುಂಜವೊಂದು ಬೆಳಗಾದ್ರೆ ಸಾಕು ಮದ್ಯ ಸೇವನೆ ಮಾಡುತ್ತೆ. ಎಣ್ಣೆ ಹೊಡೆದ ನಂತರವೇ ಅದು ಕಾಳು ತಿನ್ನಲು ಶುರು ಮಾಡುತ್ತಂತೆ.

Written by - Puttaraj K Alur | Last Updated : Jun 5, 2022, 01:40 PM IST
  • ಮದ್ಯ ನೀಡದಿದ್ದರೆ ನೀರು-ಆಹಾರವನ್ನೇ ಮುಟ್ಟುವುದಿಲ್ಲ ಈ ಕಿಲಾಡಿ ಹುಂಜ
  • ನಿತ್ಯ ಬೆಳಗಾದ್ರೆ ಸಾಕು ‘ಎಲ್ಲಿ ಎಣ್ಣೆ ಅಣ್ಣಾ’ ಅಂತಾ ಮಾಲೀಕರನ್ನೇ ಕೇಳುತ್ತೆ
  • ಹುಂಜದ ‘ಎಣ್ಣೆ’ ಚಟಕ್ಕೆ ಪ್ರತಿತಿಂಗಳು 2 ಸಾವಿರ ರೂ. ಖರ್ಚು ಮಾಡುವ ಮಾಲೀಕರು
Viral News: ನನಗೆ ‘ಎಣ್ಣೆ ಬೇಕು ಅಣ್ಣಾ’ ಎನ್ನುತ್ತಿರುವ ಹುಂಜ..! title=
ನಿತ್ಯವೂ ಮದ್ಯಪಾನ ಮಾಡುವ ಹುಂಜ!

ಭಂಡಾರ: ಬೆಳಗ್ಗೆ ಆದ್ರೆ ಸಾಕು ಎಣ್ಣೆ ಹೊಡೆದು ತೇಲಾಡುವ ಅನೇಕ ಜನರಿದ್ದಾರೆ. ಊಟಕ್ಕಿಂತಲೂ ಮದ್ಯಪಾನವೇ ಶ್ರೇಷ್ಠ ಅನ್ನೋ ಕುಡುಕರೂ ಇದ್ದಾರೆ. ಕುಡಿತವಿಲ್ಲದೆ ನಾನು ಬದುಕುವುದೇ ಇಲ್ಲ ಅಂತಾ ಅನ್ನೋರು ಇದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದನ್ನು ಕೇಳಿದ್ರೆ ನೀವೂ ಸಹ ಅಚ್ಚರಿಗೊಳಗಾಗುತ್ತೀರಿ.

ಹೌದು, ಮಹಾರಾಷ್ಟ್ರದ ಭಂಡಾರದಲ್ಲಿರುವ ಹುಂಜವೊಂದು ಬೆಳಗಾದ್ರೆ ಸಾಕು ಮದ್ಯ ಸೇವನೆ ಮಾಡುತ್ತೆ. ಎಣ್ಣೆ ಹೊಡೆದ ನಂತರವೇ ಅದು ಕಾಳು ತಿನ್ನಲು ಶುರು ಮಾಡುತ್ತಂತೆ. ಒಂದು ವೇಳೆ ಮದ್ಯ ನೀಡದಿದ್ದರೆ ಹಠ ಮಾಡುವ ಹುಂಜ ನೀರು-ಅಹಾರವನ್ನೇ ಮುಟ್ಟುವುದಿಲ್ಲವಂತೆ. ಇದನ್ನು ಕೇಳಿದ್ರೆ ನಿಮಗೆ ನಂಬಲು ತುಸು ಕಷ್ಟವಾಗಬಹುದು. ಆದರೆ ಇದು ಸತ್ಯ ಸಂಗತಿ ಅಂತಾ ಆ ಹುಂಜದ ಮಾಲೀಕರೇ ಹೇಳಿದ್ದಾರೆ.

ಇದನ್ನೂ ಓದಿ: Viral Video : ತನ್ನ ಪಾಡಿಗೆ ತಾನಿದ್ದ ನಾಯಿಯ ಮುಂದೆ ಮಂಗನ ದಾದಾಗಿರಿ..!

ನಿತ್ಯವೂ ಮದ್ಯಪಾನ ಮಾಡುವ ಹುಂಜ!

ಭಂಡಾರದ ಪುನರ್ವಸತಿ ಗ್ರಾಮವಾಗಿರುವ ಪಿಂಪ್ರಿಯಲ್ಲಿ ಭಾವು ಕಾಟೋರೆ ಎಂಬುವರು ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ವಿವಿಧ ತಳಿಯ ಕೋಳಿ, ಹುಂಜಗಳು ಇವರ ಫಾರ್ಮ್‍ನಲ್ಲಿವೆ. ಇವುಗಳ ಪೈಕಿ ಚಾಲಾಕಿ ಹುಂಜವೊಂದು ಇದೆ. ಇದು ಪ್ರತಿದಿನವೂ ತಪ್ಪದೇ ಮದ್ಯಪಾನ ಮಾಡುತ್ತದಂತೆ. ಆರಂಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸದ ಇಡೀ ಕುಟುಂಬಕ್ಕೆ ಹುಂಜ ದೊಡ್ಡ ತಲೆನೋವು ತಂದಿದೆ.

ಅಂದಹಾಗೆ ಈ ಹುಂಜ ಅದ್ಹೇಗೆ ಮದ್ಯಪಾನ ಮಾಡಲು ಕಲಿಯಿತು ಎಂದು ನೀವು ಆಲೋಚಿಸಿರಬಹುದು. ಕಳೆದ ವರ್ಷ ಈ ಹುಂಜ ರೋಗಕ್ಕೆ ತುತ್ತಾಗಿತ್ತಂತೆ. ಈ ವೇಳೆ ಅದು ಆಹಾರ ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಹುಂಜದ ಆರೋಗ್ಯ ಪರಿಶೀಲಿಸಿದ್ದ ಗ್ರಾಮದ ವ್ಯಕ್ತಿಯೊಬ್ಬ ಅದಕ್ಕೆ ಎಣ್ಣೆ ಕುಡಿಸುವಂತೆ ಸಲಹೆ ನೀಡಿದ್ದನಂತೆ. ಕೆಲವು ದಿನಗಳ ಕಾಲ ಅದಕ್ಕೆ ಮದ್ಯ ನೀಡಿದ್ದಾರೆ. ರೋಗದಿಂದ ಗುಣಮುಖವಾದ ಹುಂಜವು ಕುಡಿತದ ಚಟ ಅಂಟಿಸಿಕೊಂಡುಬಿಟ್ಟಿದೆ.

ಇದನ್ನೂ ಓದಿ: Lions Fight Video: ಸಿಂಹಿಣಿಗಾಗಿ ಎರಡು ಸಿಂಹಗಳ ಕಾದಾಟ..! ಕೊನೆಗೂ ಗೆದ್ದವರ್ಯಾರು ?

ನಿತ್ಯ ಬೆಳಗಾದ್ರೆ ಸಾಕು ‘ಎಲ್ಲಿ ಎಣ್ಣೆ ಅಣ್ಣಾ’ ಅಂತಾ ಮಾಲೀಕರನ್ನೇ ಹುಂಜ ಕೇಳುತ್ತದಂತೆ. ಆಲ್ಕೋಹಾಲ್ ಇಲ್ಲದೆ ಈ ಹುಂಜವು ತೊಟ್ಟು ನೀರು ಕುಡಿಯುವುದಿಲ್ಲವಂತೆ. ಹೀಗಾಗಿ ವಿಧಿಯಿಲ್ಲದೆ ಮಾಲೀಕರು ಅದಕ್ಕೆ ನಿತ್ಯವೂ ಎಣ್ಣೆ ಸೇವೆ ಮಾಡುತ್ತಿದ್ದಾರೆ. ಇದರಿಂದ ಪ್ರತಿತಿಂಗಳಿಗೆ 2 ಸಾವಿರ ರೂ. ಖರ್ಚಾಗುತ್ತಿದೆಯಂತೆ. ಹೇಗಾದರೂ ಮಾಡಿ ಹುಂಜಕ್ಕೆ ಅಂಟಿಕೊಂಡಿರುವ ಚಟಕ್ಕೆ ಮುಕ್ತಿ ನೀಡಬೇಕೆಂದು ಮಾಲೀಕರು ಪ್ರಯತ್ನಿಸುತ್ತಿದ್ದಾರಂತೆ. ಆದರೆ, ಹುಂಜ ಮಾತ್ರ ‘ಎಣ್ಣೆ ಬೇಕು ಅಣ್ಣಾ’ ಅಂತಾ ಹೇಳುತ್ತದಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News