Viral Video: ಚಲಿಸುತ್ತಿದ್ದ ಕಾರಿನ ಹಿಂಭಾಗದಿಂದಲೇ ಪಟಾಕಿ ಸಿಡಿಸಿದ ಭೂಪ..!

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಲಕ್ಷಾಂತರ ಜನರು ವೀಕ್ಷಿಸಿರುವ ಈ ವಿಡಿಯೋಗೆ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

Written by - Puttaraj K Alur | Last Updated : Oct 29, 2022, 07:08 AM IST
  • ನಿಷೇಧದ ನಡುವೆ ದೆಹಲಿ-ಹರಿಯಾಣದಲ್ಲಿ ಮನಬಂದಂತೆ ಪಟಾಕಿ ಹಾರಿಸಿದ ಜನರು
  • ಚಲಿಸುತ್ತಿದ್ದ ಕಾರಿನ ಹಿಂಭಾಗವೇ ಪಟಾಕಿ ಹಾರಿಸಿಕೊಂಡು ಹೋಗಿರುವ ಭೂಪ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಚಲಿಸುತ್ತಿದ್ದ ಕಾರಿನ ಹಿಂಭಾಗದಿಂದಲೇ ಪಟಾಕಿ ಸಿಡಿಸಿದ ಭೂಪ..!    title=
ವೈರಲ್ ಆಗಿರುವ ವಿಡಿಯೋ ನೋಡಿ

ನವದೆಹಲಿ: ದೆಹಲಿ ಮತ್ತು ಹರಿಯಾಣದಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ಪಟಾಕಿ ನಿಷೇಧದ ಆದೇಶ ಹೊರಡಿಸಿದ್ದರೂ, ಅನೇಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ದೀಪಾವಳಿ ದಿನದಂದು ಜನರು ತಮ್ಮ ಮನೆಗಳಲ್ಲಿ ಮತ್ತು ಹೊರಗೆ ದೀಪಗಳು, ಮೇಣದಬತ್ತಿ ಬೆಳಗಿಸಿದ್ದಾರೆ. ಇದೇ ವೇಳೆ ಹಲವಾರು ಅಗ್ನಿ ಅವಘಡಗಳು ಸಹ ಸಂಭವಿಸಿದ್ದು, ಅಗ್ನಿಶಾಮಕ ಠಾಣೆಗಳಿಗೆ ಹೆಚ್ಚಿನ ಕರೆಗಳು ಬಂದಿವೆ. ಜನರು ಸ್ಕೈಶಾಟ್‌ಗಳು ಮತ್ತು ರಾಕೆಟ್‌ಗಳಂತಹ ಪಟಾಕಿಗಳನ್ನು ಸಿಡಿಸಿದ್ದಾರೆ. ಸುರಕ್ಷಿತ ರೀತಿಯಲ್ಲಿ ಈ ಪಟಾಕಿಗಳನ್ನು ಹಾರಿಸದ ಕಾರಣ ಬೆಂಕಿಯ ಅನಾಹುತಗಳು ಸಂಭವಿಸಿವೆ.

ಕಾರುಗಳ ಬಳಿ ಪಟಾಕಿ ಸಿಡಿಸುವುದು ಸಹ ಅಪಾಯಕಾರಿ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಕಾರಿನ ಹಿಂಭಾಗವೇ ಪಟಾಕಿ ಹಾರಿಸಲಾಗಿದೆ. ಹರಿಯಾಣದ ಗುರ್ಗಾಂವ್‌ನ ಸೈಬರ್‌ಹಬ್‌ನಲ್ಲಿ ಜನನಿಬಿಡ ರಸ್ತೆಯಲ್ಲಿಯೇ ಚಾಲಕನೊಬ್ಬ ಅಜಾಗರೂಕತೆ ತೋರಿದ್ದು, ತನ್ನ ಕಾರಿನ ಹಿಂಭಾಗ ಇರಿಸಿದ್ದ ಬಾಕ್ಸ್‌ನಿಂದ ಪಟಾಕಿಗಳನ್ನು ಉಡಾಯಿಸಿದ್ದಾನೆ. DLF 3ನೇ ಹಂತದ ಪ್ರದೇಶದ ಕಡೆಗೆ ಚಲಿಸುತ್ತಿದ್ದ ಕಪ್ಪು ಸೆಡಾನ್‌ನ ಹಿಂಭಾಗವೇ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕಾರಿನಿಂದ ಈ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ.

ಇದನ್ನೂ ಓದಿ: ʼಭಾನುವಾರ ಬಾರ್‌ ಬಂದ್‌ʼ : ವಿಶೇಷ ಅಧಿಕಾರ ಬಳಸಿ ʼಡ್ರೈ ಡೇʼ ಘೋಷಿಸಿದ ರಾಜ್ಯಪಾಲರು..!

ವಿಡಿಯೋದಲ್ಲಿ ಚಲಿಸುವ ಕಾರಿನ ಹಿಂಬದಿಯಿಂದ ಪಟಾಕಿಗಳು ಹಾರುವುದನ್ನು ನೀವು ಕಾಣಬಹುದು. ಆತನ ಪಟಾಕಿ ಹಾರಿ ಇತರ ಕಾರುಗಳ ಮೇಲೆ ಕಿಡಿಗಳು ಬೀಳುತ್ತಿವೆ. ಸುಮಾರು ದೂರದವರೆಗೂ ಪಟಾಕಿ ಹಾರಿಸಿಕೊಂಡು ಮ್ಯೂಸಿಕ್ ಹಾಕಿಕೊಂಡು ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಇದರ ಸಿಸಿಟಿವಿ ದೃಶ್ಯಾವಳಿ ಮತ್ತು ವಿಡಿಯೋ ಸಹಾಯದಿಂದ ಪೊಲೀಸರು ಕಾರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಗುರುಗ್ರಾಮ ಪೊಲೀಸರು ಕಾರಿನ ಮಾಲೀಕರನ್ನು ಗುರುತಿಸಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಇತ್ತೀಚೆಗಷ್ಟೆ ತನ್ನ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿರುವುದಾಗಿ ಮಾಲೀಕರು ಹೇಳಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಲಕ್ಷಾಂತರ ಜನರು ವೀಕ್ಷಿಸಿರುವ ಈ ವಿಡಿಯೋಗೆ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ಬೆಂಕಿ, ದೆಹಲಿ ಏರ್ಫೋರ್ಟ್ ನಲ್ಲಿ ತುರ್ತುಪರಿಸ್ಥಿತಿ ಘೋಷಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News