Viral Video: ಎಟಿಎಂನಲ್ಲಿ ಮೂತ್ರ ಮಾಡಿ ಅಡ್ಡ ಮಲಗಿದ ಹಸು: ವಿಧಿಯಿಲ್ಲದೆ ಮೂಗು ಮುಚ್ಚಿಕೊಂಡೇ ಹಣ ಡ್ರಾ ಮಾಡ್ಬೇಕು

ಹಸುವೊಂದು ಎಟಿಎಂ ಬೂತ್ ಅನ್ನು ಗೋಶಾಲೆ ಎಂದು ತಪ್ಪಾಗಿ ಗ್ರಹಿಸಿದೆ. ಹಸುವು ಇತರ ಹಸುಗಳೊಂದಿಗೆ ಇರುವುದು ಬಿಟ್ಟು ಎಟಿಎಂನಲ್ಲಿ ಮಲಗಿಕೊಂಡಿದೆ. ಅಷ್ಟೇ ಅಲ್ಲದೆ, ಸಗಣಿ-ಮೂತ್ರ ಅಲ್ಲೇ ಮಾಡಿದ್ದು, ಎಟಿಎಂ ಪೂರ್ತಿ ಗಬ್ಬು ನಾರುತ್ತಿದೆ.

Written by - Bhavishya Shetty | Last Updated : Sep 24, 2022, 09:06 PM IST
    • ಹಸುವೊಂದು ಎಟಿಎಂ ಬೂತ್ ಅನ್ನು ಗೋಶಾಲೆ ಎಂದು ತಪ್ಪಾಗಿ ಗ್ರಹಿಸಿದೆ
    • ಹಸುವು ಇತರ ಹಸುಗಳೊಂದಿಗೆ ಇರುವುದು ಬಿಟ್ಟು ಎಟಿಎಂನಲ್ಲಿ ಮಲಗಿಕೊಂಡಿದೆ
    • ಈ ಘಟನೆ ಮಧ್ಯಪ್ರದೇಶದ ರೇವಾ ಗ್ರಾಮದಲ್ಲಿ ನಡೆದಿದೆ
Viral Video: ಎಟಿಎಂನಲ್ಲಿ ಮೂತ್ರ ಮಾಡಿ ಅಡ್ಡ ಮಲಗಿದ ಹಸು: ವಿಧಿಯಿಲ್ಲದೆ ಮೂಗು ಮುಚ್ಚಿಕೊಂಡೇ ಹಣ ಡ್ರಾ ಮಾಡ್ಬೇಕು title=
Cow in ATM

ಜಗತ್ತಿನಲ್ಲಿ ಏನಾದರೂ ಸಂಭವಿಸಿದರೆ, ಅದು ಸೆಕೆಂಡುಗಳಲ್ಲಿ ಸಾಮಾಜಿಕ ಮಾಧ್ಯಮ ಅಥವಾ ಸುದ್ದಿ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಲಕ್ಷಣ ಏನಾದರೂ ಸಂಭವಿಸಿದರೆ, ಅದು ಖಂಡಿತವಾಗಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗುತ್ತದೆ. ಇಂತಹ ಘಟನೆಯೊಂದು ನಡೆದಿದ್ದು ಎಲ್ಲರಿಗೂ ನಗು ತರಿಸುವಂತಿದೆ. 

ಇದನ್ನೂ ಓದಿ: 5G in India: ಈ ತಿಂಗಳಿನಿಂದ ದೇಶದಲ್ಲಿ ಪ್ರಾರಂಭವಾಗಲಿದೆ 5G ಸೇವೆ: ಚಾಲನೆ ನೀಡಲಿದ್ದಾರೆ ಪ್ರಧಾನಿ

ಹಸುವೊಂದು ಎಟಿಎಂ ಬೂತ್ ಅನ್ನು ಗೋಶಾಲೆ ಎಂದು ತಪ್ಪಾಗಿ ಗ್ರಹಿಸಿದೆ. ಹಸುವು ಇತರ ಹಸುಗಳೊಂದಿಗೆ ಇರುವುದು ಬಿಟ್ಟು ಎಟಿಎಂನಲ್ಲಿ ಮಲಗಿಕೊಂಡಿದೆ. ಅಷ್ಟೇ ಅಲ್ಲದೆ, ಸಗಣಿ-ಮೂತ್ರ ಅಲ್ಲೇ ಮಾಡಿದ್ದು, ಎಟಿಎಂ ಪೂರ್ತಿ ಗಬ್ಬು ನಾರುತ್ತಿದೆ.

ಈ ಘಟನೆ ಮಧ್ಯಪ್ರದೇಶದ ರೇವಾ ಗ್ರಾಮದಲ್ಲಿ ನಡೆದಿದೆ. ಪತ್ರಕರ್ತರೊಬ್ಬರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಎಟಿಎಂ ಯಂತ್ರದಿಂದ ಹಣವನ್ನು ಪಡೆಯಲು ತೊಂದರೆ ಅನುಭವಿಸುತ್ತಿರುವುದನ್ನು ಕಾಣಬಹುದು. ನೆಲದ ಮೇಲೂ ದನದ ಸಗಣಿ ಆವರಿಸಿದ್ದು, ಎಟಿಎಂ ಯಂತ್ರದ ಮುಂದೆ ದನ ಕೂತಿದ್ದು, ಅದರೊಳಗಿನ ಹಣವನ್ನೆಲ್ಲ ತನ್ನದಾಗಿಸಿಕೊಂಡಂತೆ ಕುಳಿತಿದೆ.

 

ಮನುಷ್ಯ ತನ್ನ ಟಿ-ಶರ್ಟ್‌ನಿಂದ ಮೂಗನ್ನು ಮುಚ್ಚಿಕೊಳ್ಳುತ್ತಿರುವುದನ್ನು ಕಾಣಬಹುದು. ಯಂತ್ರದಿಂದ ಹಣವನ್ನು ಪಡೆಯಲು ಚಿಕ್ಕ ಕ್ಲೀನ್ ಸ್ಪಾಟ್‌ನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾನೆ. ಈ ವಿಡಿಯೋವನ್ನು ವ್ಯಕ್ತಿಯ ಸೋದರಳಿಯ ಚಿತ್ರೀಕರಿಸಿದ್ದಾರೆ ಎಂದು ಪತ್ರಕರ್ತರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ವೀಡಿಯೊ 36 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ನೆಟಿಜನ್ಸ್ ಇದನ್ನು ಕಂಡು ನಕ್ಕು ನಕ್ಕು ಸುಸ್ತಾಗಿದ್ದಾರೆ.

ಇನ್ನೂ ಕೆಲವರು ಹಸುವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅನಾರೋಗ್ಯದ ಕಾರಣದಿಂದ ಅತಿಸಾರವಾಗಿರಬಹುದು ಮತ್ತು ಅದನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಬೇಕು ಎಂದು ಹೇಳಿದ್ದಾರೆ.   

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದ ವ್ಯಕ್ತಿಯನ್ನ ದೇವರಂತೆ ಬಂದು ಕಾಪಾಡಿದ: ವಿಡಿಯೋ ನೋಡಿದ್ರೆ ಮೈಜುಂ ಎನ್ನುತ್ತೆ!

ಇತರ ಟ್ವಿಟ್ಟರ್ ಬಳಕೆದಾರರು ವೀಡಿಯೊವನ್ನು ನೋಡಿದ ಮೇಲೆ ಅಸಹ್ಯ ಮತ್ತು ಗಾಬರಿಗೊಂಡಂತೆ ಕಮೆಂಟ್ಗಳನ್ನು ಮಾಡಿದ್ದಾರೆ. "ಹಸುಗಿಂತ ಹೆಚ್ಚಾಗಿ ಎಟಿಎಂ ಸಿಬ್ಬಂದಿ ಎಲ್ಲಿದ್ದಾರೆ ಎಂಬ ಅಂಶವನ್ನು ಗಮನಿಸುವುದು ಮುಖ್ಯ" ಎಂದು ಪ್ರತಿಕ್ರಿಯಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News