Viral Video : ಹುಲಿಯೊಂದಿಗೆ ಕಾದಾಡುತ್ತಿರುವ ಮಂಗ..ಮುಂದೇನಾಯ್ತು ನೀವೇ ನೋಡಿ!

Monkey Viral Video : ಇಂಟರ್‌ನೆಟ್‌ನಲ್ಲಿ ಪ್ರತಿದಿನ ಅಚ್ಚರಿ ಎನ್ನಿಸುವಂತಹ ವಿಡಿಯೋಗಳು ಶೇರ್‌ ಆಗುತ್ತಲೇ ಇರುತ್ತವೆ. ಆದರೆ ಅದರಲ್ಲಿ ಪ್ರಾಣಿಗಳ ವಿಡಿಯೋಗಳು ಮಾತ್ರ ಹೆಚ್ಚು ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತದ್ದೇ ಓಮದು ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.   

Written by - Savita M B | Last Updated : Aug 31, 2023, 02:05 PM IST
  • ಇಂಟರ್ನೆಟ್ ಜಗತ್ತು ವಿಭಿನ್ನ ಜಗತ್ತು ಅದರಲ್ಲಿ ಹಲವಾರು ಅದ್ಭುತಗಳನ್ನು ನಾವು ಕಾಣಬಹುದು
  • ಸೋಷಿಯಲ್‌ ಮಿಡಿಯಾಗಳಲ್ಲಿ ಮಂಗಗಳ ವಿಡಿಯೋಗಳು ಹೆಚ್ಚು ವೀಕ್ಷಣೆ ಪಡೆಯುತ್ತವೆ
  • ಆದರೆ ಈ ವಿಡಯೋ ಕೊಂಚ ವಿಭಿನ್ನವೇ ಎಂದು ಹೇಳಬಹುದು.
Viral Video : ಹುಲಿಯೊಂದಿಗೆ ಕಾದಾಡುತ್ತಿರುವ ಮಂಗ..ಮುಂದೇನಾಯ್ತು ನೀವೇ ನೋಡಿ! title=

Monkey Video : ಇಂಟರ್ನೆಟ್ ಜಗತ್ತು ವಿಭಿನ್ನ ಜಗತ್ತು ಅದರಲ್ಲಿ ಹಲವಾರು ಅದ್ಭುತಗಳನ್ನು ನಾವು ಕಾಣಬಹುದು. ಇಲ್ಲಿ ನಾವು ಅನೇಕ ವಿಭಿನ್ನ ವಿಷಯಗಳನ್ನು ಕಲಿಯುತ್ತೇವೆ. ಹೌದು ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನು ನೀಡುತ್ತವೆ. 

ಸೋಷಿಯಲ್‌ ಮಿಡಿಯಾಗಳಲ್ಲಿ ಮಂಗಗಳ ವಿಡಿಯೋಗಳು ಹೆಚ್ಚು ವೀಕ್ಷಣೆ ಪಡೆಯುತ್ತವೆ. ಮತ್ತು ಜನ ಅವುಗಳನ್ನು ನೋಡಿ ಆನಂದಿಸುತ್ತಾರೆ. ಕೋತಿಗಳು ಚೇಷ್ಟೆಗೆ ಮಿತಿಯೇ ಇಲ್ಲ.  ರಸ್ತೆಯಲ್ಲಿ ನಡೆಯುವವರಿಂದ ವಸ್ತುಗಳನ್ನು ಕಸಿದುಕೊಳ್ಳುವುದು, ದಾರಿಹೋಕರ ಹೆಗಲ ಮೇಲೆ ಕೂರಿಸುವುದು, ಕೂದಲು ಎಳೆಯುವುದು ಹೀಗೆ ಹಲವು ರೀತಿಯಲ್ಲಿ ಜನರಿಗೆ ತೊಂದರೆ ನೀಡುತ್ತವೆ. 

ಇದನ್ನೂ ಓದಿ-Bengaluru: ಇಸ್ರೋ ಯುವವಿಜ್ಞಾನಿಯ ಕಾರಿಗೆ ಕಲ್ಲೆಸೆತ; ಹಿಂಭಾಗದ ಗಾಜು ಪುಡಿ ಪುಡಿ!

ಆದರೆ ಈ ವಿಡಯೋ ಕೊಂಚ ವಿಭಿನ್ನವೇ ಎಂದು ಹೇಳಬಹುದು. ಈ ವಿಡಿಯೋದಲ್ಲಿ ಮಂಗವೊಂದು ಮೊದಲು ನೆಲದ ಮೇಲೆ ಕುಳಿತಿರುವ ಹುಲಿಗಳ ಕಿವಿಗಳನ್ನು ಎಳೆಯುತ್ತದೆ ನಂತರ ಎರಡು ಹುಲಿಗಳನ್ನು ಅಟ್ಟಿಸಿಕೊಂಡು ಬರುತ್ತದೆ. ನಂತರ ಬಾಲವನ್ನು ಎಳೆಯುತ್ತದೆ. ಇದರಿಂದ ಕೋಪಗೊಂಡ ಹುಲಿ ಮಂಗವನ್ನು ಹಿಡಿಯಲು ಹೋದಾಗ ಕೋತಿ ಮರ ಏರತ್ತದೆ. ಇದರಿಂದ ಹುಲಿ ಕೋತಿಯನ್ನು ಹಿಡಿಯಲಾಗುವುದಿಲ್ಲ. 

ಇನ್ನು ಈ ವಿಡಿಯೋವನ್ನು ಇದುವರೆಗೆ 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನೂ ಮಾಡುತ್ತಿದ್ದಾರೆ. 

ಇದನ್ನೂ ಓದಿ-ಶಂಕಿತ ಉಗ್ರ ಜುನೈದ್ ಸಹಚರ ಬಂಧನ: ಅರೆಸ್ಟ್ ಮಾಡಲು ಹೋದಾಗ ಕತ್ತು ಕೊಯ್ದುಕೊಂಡ ಆರೋಪಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News