ರೀಲ್ ಅಲ್ಲ… ರಿಯಲ್! ನಿಂತಿದ್ದ ಟ್ರಕ್’ಗೆ ಕಾರು ಡಿಕ್ಕಿ..! ಇಲ್ಲಿದೆ ರೋಮಾಂಚನಕಾರಿ ಆಕ್ಷನ್ ವಿಡಿಯೋ

Live Accident Video Caught on Bodycam: ರಸ್ತೆ ಅಪಘಾತಗಳ ಮೇಲೆ ನಡೆಸಿದ ಅನೇಕ ಅಧ್ಯಯನಗಳ ಪ್ರಕಾರ, ಈ ಎಲ್ಲಾ ಘಟನೆಯ ಹಿಂದಿನ ಸಾಮಾನ್ಯ ಕಾರಣವೆಂದರೆ ಅತಿಯಾದ ವೇಗ. ಅದಕ್ಕಾಗಿಯೇ ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸಿರುತ್ತಾರೆ.

Written by - Bhavishya Shetty | Last Updated : Jun 4, 2023, 12:16 PM IST
    • ರಸ್ತೆ ಅಪಘಾತಗಳ ಹಿಂದಿನ ಸಾಮಾನ್ಯ ಕಾರಣವೆಂದರೆ ಅತಿಯಾದ ವೇಗ
    • ಅದಕ್ಕಾಗಿಯೇ ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸಿರುತ್ತಾರೆ.
    • ಇತ್ತೀಚೆಗೆ ಕಾರು ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.
ರೀಲ್ ಅಲ್ಲ… ರಿಯಲ್! ನಿಂತಿದ್ದ ಟ್ರಕ್’ಗೆ ಕಾರು ಡಿಕ್ಕಿ..! ಇಲ್ಲಿದೆ ರೋಮಾಂಚನಕಾರಿ ಆಕ್ಷನ್ ವಿಡಿಯೋ title=
Accident Viral Video

Live Accident Video Caught on Bodycam: ಆಟೋಮೊಬೈಲ್‌ ಗಳ ಬಳಕೆ ಪ್ರಪಂಚದಾದ್ಯಂತ ಅಪಾರವಾಗಿ ಹೆಚ್ಚಾಗಿದೆ. ಇದರ ಜೊತೆಗೆ ರಸ್ತೆ ಅಪಘಾತಗಳೂ ಹೆಚ್ಚಾಗುತ್ತಿದೆ. ಪ್ರತಿದಿನ ಸಾವಿರಾರು ಜನರು ರಸ್ತೆ ಅಪಘಾತಗಳಲ್ಲಿ ಸಾಯುತ್ತಿದ್ದಾರೆ. ಈ ರಸ್ತೆ ಅಪಘಾತಗಳಿಗೆ ಹಲವು ಕಾರಣಗಳಿವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಕಂಡುಬರುವ ಒಂದೇ ಒಂದು ಕಾರಣವಿದ್ದರೆ ಅದು ಅತಿ ವೇಗ.

ಇದನ್ನೂ ಓದಿ: ಗ್ರಹ ಗೋಚರದಿಂದ ಈ ರಾಶಿಯವರ ಲೈಫೇ ಚೇಂಜ್! ಐಷಾರಾಮಿ ಜೀವನ- ಎರಡೂ ಕೈಗಳಿಂದ ಬಾಚುವಷ್ಟು ಧನಪ್ರಾಪ್ತಿ!

ರಸ್ತೆ ಅಪಘಾತಗಳ ಮೇಲೆ ನಡೆಸಿದ ಅನೇಕ ಅಧ್ಯಯನಗಳ ಪ್ರಕಾರ, ಈ ಎಲ್ಲಾ ಘಟನೆಯ ಹಿಂದಿನ ಸಾಮಾನ್ಯ ಕಾರಣವೆಂದರೆ ಅತಿಯಾದ ವೇಗ. ಅದಕ್ಕಾಗಿಯೇ ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸಿರುತ್ತಾರೆ.

ಇತ್ತೀಚೆಗೆ ಕಾರು ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಸ್ತೆ ಅಪಘಾತದ ಘಟನೆಯ ತನಿಖೆಗೆ ಪೊಲೀಸರು ಆಗಮಿಸಿದ್ದು, ಟೋಯಿಂಗ್ ವಾಹನವನ್ನು ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಿ ಘಟನಾ ಸ್ಥಳವನ್ನು ಪರಿಶೀಲಿಸುವಾಗ ಟ್ರಾಫಿಕ್ ಜಾಮ್ ಆಗದಂತೆ ಕ್ರಮಕೈಗೊಂಡಿದ್ದಾರೆ. ಆದರೆ ಅದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಅತಿವೇಗದಲ್ಲಿ ನುಗ್ಗಿದ ಕಾರು ನಿಂತಿದ್ದ ಟೋಯಿಂಗ್ ವಾಹನ ರ್ಯಾಂಪ್ ಹತ್ತಿ ಗಾಳಿಗೆ ಹಾರಿದೆ.

 ಹಾಲಿವುಡ್ ಆ್ಯಕ್ಷನ್ ಸಿನಿಮಾ ಫಾಸ್ಟ್ ಆಂಡ್ ಫ್ಯೂರಿಯಸ್ ನ ಸಾಹಸ ದೃಶ್ಯದಂತೆ ಗಾಳಿಗೆ ಕಾರು ಹೋಗುತ್ತಿರುವ ದೃಶ್ಯ ಕಂಡಿದೆ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯ ಬಾಡಿಕ್ಯಾಮ್ ನಲ್ಲಿ ಈ ವಿಡಿಯೋ ದಾಖಲಾಗಿದೆ. ಗಾಳಿಗೆ ಹಾರಿದ ಕಾರು ಅಷ್ಟು ಎತ್ತರದಿಂದ ಏಕಾಏಕಿ ನೆಲಕ್ಕೆ ಅಪ್ಪಳಿಸಿದೆ. ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 

ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರ್ತಿಯನ್ನೇ ಗುಟ್ಟಾಗಿ ಮದುವೆಯಾದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್’ಮನ್! ಫೋಟೋಸ್ ನೋಡಿ

ಇದು ವಿದೇಶದಲ್ಲಿ ನಡೆದ ಘಟನೆ. ಆದರೆ, ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಿದ ವಾಹನಗಳಿಗೆ ಹಿಂಬದಿಯಿಂದ ಬರುವ ಇತರ ವಾಹನಗಳು ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಅನೇಕ ಘಟನೆಗಳು ಭಾರತದಲ್ಲಿ ನಡೆಯುತ್ತವೆ. ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವುದು ಅವರಿಗಷ್ಟೇ ಅಲ್ಲ, ಹಿಂದಿನಿಂದ ಬರುವ ವಾಹನಗಳಿಗೂ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಇಂತಹ ವೀಡಿಯೋಗಳನ್ನು ನೋಡಿದಾಗಲೆಲ್ಲ ಜನ ಪಾಠ ಕಲಿಯುವುದು ಅನೇಕ ಇದೆ ಎಂದನಿಸುತ್ತದೆ. ಶೋಕಿಗಾಗಿ ವೇಗವಾಗಿ ಕಾರು ಅಥವಾ ವಾಹನ ಚಲಾವಣೆ ಮಾಡುವ ಜನರು ಇಂತಹ ಅಪಘಾತಗಳಾದಾಗ ಜೀವನದಲ್ಲಿ ಕಲಿಯುವ ಪಾಠಗಳು ಸಾಮಾನ್ಯವಾಗಿರುವುದಿಲ್ಲ. ಕೊಂಚ ಭೀಕರವಾಗಿಯೇ ಇರುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News