ಕಬ್ಬು ಕಟಾವು ಮಾಡುತ್ತಿದ್ದಾಗ 2 ಚಿರತೆ ಮರಿ ಪತ್ತೆ: ಅಮ್ಮನಿಗಾಗಿ ಕಾದ ಅರಣ್ಯ ಇಲಾಖೆ

Leopard Cubs Found: ರೈತ ಮಹೇಶ್ ಎಂಬುವರ ಜಮೀನಿನಲ್ಲಿ ಚಿರತೆ ಮರಿಗಳು ಪತ್ತೆ. ಕಬ್ಬು ಕಟಾವು ಮಾಡುವಾಗ ತಾಯಿಗಾಗಿ ಮರಿಗಳ ಚೀರಾಟ. 

Written by - Yashaswini V | Last Updated : Aug 23, 2024, 12:41 PM IST
  • ಕಬ್ಬು ಕಟಾವು ಮಾಡುವಾಗ ಅನಿರೀಕ್ಷಿತ ಅತಿಥಿಗಳು ಪ್ರತ್ಯಕ್ಷ
  • ಎರಡು ಚಿರತೆ ಮರಿಗಳನ್ನು ಕಂಡು ಅವಕ್ಕಾದ ಕಾರ್ಮಿಕರು
  • ಗುಂಡ್ಲುಪೇಟೆ ತಾಲೂಕಿನ ಹಂಗಳಪುರ ಎಂಬಲ್ಲಿ ಕಾರ್ಮಿಕರಿಗೆ ಸಿಕ್ಕ ಚಿರತೆ ಮರಿಗಳು
ಕಬ್ಬು ಕಟಾವು ಮಾಡುತ್ತಿದ್ದಾಗ 2 ಚಿರತೆ ಮರಿ ಪತ್ತೆ: ಅಮ್ಮನಿಗಾಗಿ ಕಾದ ಅರಣ್ಯ ಇಲಾಖೆ title=

Leopard Cubs Found: ಕಬ್ಬು ಕಟಾವು ಮಾಡುವ ವೇಳೆ ಎರಡು ಚಿರತೆ ಮರಿಗಳು ಪತ್ತೆಯಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳಾಪುರ ಗ್ರಾಮದಲ್ಲಿ ನಡೆದಿದೆ. 

ಹಂಗಳ ಗ್ರಾಮದ ರೈತ ಮಹೇಶ್ ಎಂಬುವರ ಜಮೀನಿನಲ್ಲಿ ಚಿರತೆ ಮರಿಗಳು (Leopard Cubs) ಸಿಕ್ಕಿವೆ. ಮರಿಗಳಲ್ಲಿ ಒಂದು ಹೆಣ್ಣು ಮತ್ತೊಂದು ಗಂಡಾಗಿದೆ. ಕಬ್ಬು ಕಟಾವು ಮಾಡುವ ವೇಳೆ ಚೀರಾಟದ ಶಬ್ದ ಕೇಳಿಸಿದೆ. ಗೂಡಿನಂತೆ ಮಾಡಿಕೊಂಡಿದ್ದ ಪ್ರದೇಶದ ಸುತ್ತಲೂ ಕಬ್ಬು ಕಟಾವು ಮಾಡಿ ಸುರಕ್ಷಿತವಾಗಿ ಮರಿಗಳನ್ನು ಹೊರಕ್ಕೆ ತೆಗೆದುಕೊಂಡ ಕಾರ್ಮಿಕರು ಮರಿಗಳನ್ನು ಸುರಕ್ಷಿತವಾಗಿ ಟೊಮೆಟೋ ಟ್ರೇನಲ್ಲಿ ಇಟ್ಟು ಬಳಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ- Viral Video: ಶಿವಲಿಂಗಕ್ಕೆ ಸುತ್ತಿಕೊಂಡ ನಾಗರಹಾವು; ಇದು ಪವಾಡ ಎಂದ ಭಕ್ತರು!

ಚಿರತೆ ಮರಿಗಳಿಗೆ ಎರಡು ತಿಂಗಳಾಗಿರುವ ಅಂದಾಜು ಮಾಡಲಾಗಿದ್ದು ರೈತನ ಜಮೀನಿನಲ್ಲೇ ಚಿರತೆ ಮರಿಗಳನ್ನು ಬೋನಿನಲ್ಲಿಟ್ಟು ತಾಯಿ ಚಿರತೆ ಜೊತೆ ಸೇರಿಸಲು ಅರಣ್ಯ ಇಲಾಖೆ (Forest Department) ಕಾರ್ಯಾಚರಣೆ ನಡೆಸುತ್ತಿದೆ.

ಇದನ್ನೂ ಓದಿ- Viral Video: ರೈಲು ಹಳಿಗಳ ಮೇಲೆ ತಂದೆ-ಮಗ ಆತ್ಮಹತ್ಯೆ, CCTVಯಲ್ಲಿ ಭಯಾನಕ ವಿಡಿಯೋ!

ಚಿರತೆ ನಿಗಾಕ್ಕಾಗಿ ಕ್ಯಾಮರಾ ಕೂಡ ಅಳವಡಿಸಿದ್ದು ರಾತ್ರಿ ತಾಯಿ ಚಿರತೆ ಬರುವ ನಿರೀಕ್ಷೆ ಇದೆ ಎಂದು ಆರ್ ಎಫ್ಒ ಸತೀಶ್ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News