ನೆಮ್ಮದಿಯ ನಿದ್ರೆ ಬೇಕಿದ್ರೆ ಇಂದೇ ಈ ಫುಡ್ ತಿನ್ನೋದು ನಿಲ್ಸಿ..! ಇಲ್ಲವಾದ್ರೆ ಗಂಭೀರ ಸಮಸ್ಯೆ ಎದುರಾಗಬಹುದು ಹುಷಾರ್!!

Foods to Avoid for a Good Sleep: ನಾವು ಸೇವಿಸುವ ಆಹಾರ ಸಹ ನಮ್ಮ ನಿದ್ರೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ನಾವು ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಲಗುವ ಕೆಲವು ಗಂಟೆಗಳ ಮೊದಲು ನೀವು ಆಹಾರ ಮತ್ತು ನೀರು ಸೇವಿಸುವುದನ್ನು ನಿಲ್ಲಿಸಬೇಕು. ​

Top Foods to Avoid for a Good Night's Sleep: ರಾತ್ರಿ ಏನೇ ಸರ್ಕಸ್‌ ಮಾಡಿದ್ರೂ ನಮಗೆ ನಿದ್ದೆನೇ ಬರೋಲ್ಲ ಅಂತಾ ಅನೇಕರು ಹೇಳುವುದನ್ನು ನೀವು ಕೇಳಿರುತ್ತೀರಿ. ಇಂತಹ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತದೆ. ಅತಿಯಾದ ಆಲೋಚನೆ, ಕೆಲಸದ ಒತ್ತಡ ಹಾಗೂ ಮಾನಸಿಕ ಸಮಸ್ಯೆಯಿಂದಾಗಿ ಕೆಲವು ಸಲ ಎಷ್ಟೇ ಪ್ರಯತ್ನಿಸಿದರೂ ನಮಗೆ ನಿದ್ರೆ ಬರೋದಿಲ್ಲ. ಹೀಗಾಗಿ ಚಡಪಡಿಕೆಯಿಂದಲೇ ರಾತ್ರಿ ಕಳೆಯಬೇಕಾಗುತ್ತದೆ. ರಾತ್ರಿ ನಿದ್ರೆ ಬರದಿರಲು ಈ ಅಂಶಗಳಷ್ಟೇ ಕಾರಣವಲ್ಲ, ನಾವು ಸೇವಿಸುವ ಆಹಾರ ಸಹ ನಮ್ಮ ನಿದ್ರೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ನಾವು ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಲಗುವ ಕೆಲವು ಗಂಟೆಗಳ ಮೊದಲು ನೀವು ಆಹಾರ ಮತ್ತು ನೀರು ಸೇವಿಸುವುದನ್ನು ನಿಲ್ಲಿಸಬೇಕು. ಮಲಗುವ ಮುನ್ನ ಕೆಲವು ಆಹಾರಗಳನ್ನ ಸೇವಿಸಿದರೆ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ. ಆದ್ದರಿಂದ ಮಲಗುವ ಮೊದಲು ಯಾವ ಆಹಾರಗಳನ್ನು ತಪ್ಪಿಸಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ವರದಿಯ ಪ್ರಕಾರ, ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇರುತ್ತದೆ. ರಾತ್ರಿ ಕಾಫಿ ಸೇವಿಸಿದರೆ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ. ಕೆಫೀನ್‌ನ ಪರಿಣಾಮವು ಆರರಿಂದ ಎಂಟು ಗಂಟೆಗಳವರೆಗೆ ಇರುತ್ತದೆ. ಆದ್ದರಿಂದ ಸಂಜೆ ಮೇಲೆ ಕಾಫಿ ಕುಡಿಯುವುದನ್ನು ನೀವು ತಪ್ಪಿಸಬೇಕು

2 /6

ರಾತ್ರಿ ವೇಳೆ ಬರ್ಗರ್, ಫ್ರೆಂಚ್ ಫ್ರೈಸ್ ಮುಂತಾದವುಗಳನ್ನು ತಿನ್ನುವುದರಿಂದ ಹೊಟ್ಟೆ ಭಾರವಾಗುತ್ತದೆ. ನಿಮಗೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಇವುಗಳನ್ನು ಅರಗಿಸಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಕೆಲಸ ಮಾಡಬೇಕು. ಇದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

3 /6

ಚಾಕೊಲೇಟ್‌ನಲ್ಲಿ ಥಿಯೋಬ್ರೊಮಿನ್ ಎಂಬ ಉತ್ತೇಜಕವಿರುತ್ತದೆ. ಇದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ವಿಶ್ರಾಂತಿ ಪಡೆಯುವುದನ್ನು ತಡೆಯುತ್ತದೆ. ಹೀಗಾಗಿ ರಾತ್ರಿ ವೇಳೆ ಯಾವುದೇ ಕಾರಣಕ್ಕೂ ಚಾಕೊಲೇಟ್ ತಿನ್ನಬಾರದು. ನಿಮಗೆ ತಿನ್ನಬೇಕು ಅಂತಾ ಅನಿಸಿದರೂ ಸಹ ಅದನ್ನು ತಪ್ಪಿಸುವುದು ಉತ್ತಮ.

4 /6

ಸಂಜೆಯ ಊಟದಲ್ಲಿ ಮಸಾಲೆಯುಕ್ತ ಅಥವಾ ಕರಿದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲವು ಹೆಚ್ಚಾಗುತ್ತದೆ. ರಾತ್ರಿ ಊಟದ ಹೊರತಾಗಿ ಮಲಗುವ ಮುನ್ನ ಮಸಾಲೆಯುಕ್ತ ಆಹಾರ ಸೇವಿಸಿದರೆ ಆಸಿಡ್ ರಿಫ್ಲಕ್ಸ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ರಾತ್ರಿಯಿಡೀ ಚಡಪಡಿಕೆ ಇರುತ್ತದೆ. ಹೀಗಾಗಿ ರಾತ್ರಿ ಮಲಗುವ ಮೂರರಿಂದ ನಾಲ್ಕು ಗಂಟೆಗಳ ಮೊದಲು ಹುರಿದ ಮತ್ತು ಮಸಾಲೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಬೇಕು.

5 /6

ನಿಂಬೆ ಅಥವಾ ಇತರ ಸಿಟ್ರಸ್ ಹಣ್ಣುಗಳು ಆಮ್ಲೀಯವಾಗಿರುತ್ತವೆ. ಇಂತಹ ಹಣ್ಣುಗಳನ್ನು ರಾತ್ರಿ ತಿಂದರೆ ಅಸಿಡಿಟಿ ಹೆಚ್ಚುತ್ತದೆ. ಹೀಗಾಗಿ ರಾತ್ರಿ ಮಲಗುವ ಮೊದಲು ಹುಳಿ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು.

6 /6

ರಾತ್ರಿಯಲ್ಲಿ ಸೋಡಾ ಅಥವಾ ಇತರ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ. ಇಂತಹ ಪಾನೀಯಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕೆಫೀನ್ ಇರುತ್ತದೆ. ಮಲಗುವ ಮುನ್ನ ಇವುಗಳನ್ನು ಕುಡಿದರೆ ನಿಮಗೆ ನಿದ್ರಾಭಂಗ ಉಂಟಾಗುತ್ತದೆ.