Wedding News : ವಧು - ವರರು ವೇದಿಕೆಯ ಮೇಲೆ ಮಾಡಿದ ಕೆಲಸ ನೋಡಿ ಬೆಚ್ಚಿಬಿದ್ದ ಅತಿಥಿಗಳು

Wedding News : ಭಾರತದೆಲ್ಲೆಡೆ ಫಿಫಾ ವಿಶ್ವಕಪ್ ಕ್ರೇಜ್ ಜೋರಾಗಿದ್ದು, ಫೈನಲ್ ಪಂದ್ಯದ ಬಗ್ಗೆ ಎಲ್ಲೆಡೆ ಚರ್ಚೆ ಜೋರಾಗಿದೆ. ಫುಟ್ಬಾಲ್ ಆಡುವವರಷ್ಟೇ ಅಲ್ಲ, ಅಭಿಮಾನಿಗಳು ಕೂಡ ಫೈನಲ್ ಪಂದ್ಯ ವೀಕ್ಷಿಸಲು ಮಧ್ಯರಾತ್ರಿಯವರೆಗೂ ಜಾಗರಣೆ ಮಾಡಿದರು.

Written by - Chetana Devarmani | Last Updated : Dec 21, 2022, 11:21 AM IST
  • ಭಾರತದೆಲ್ಲೆಡೆ ಜೋರಾಗಿತ್ತು ಫಿಫಾ ವಿಶ್ವಕಪ್ ಕ್ರೇಜ್
  • ವಧು - ವರರು ವೇದಿಕೆಯ ಮೇಲೆ ಮಾಡಿದ ಕೆಲಸ ನೋಡಿ ಬೆಚ್ಚಿಬಿದ್ದ ಅತಿಥಿಗಳು
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ವಿಡಿಯೋ
Wedding News : ವಧು - ವರರು ವೇದಿಕೆಯ ಮೇಲೆ ಮಾಡಿದ ಕೆಲಸ ನೋಡಿ ಬೆಚ್ಚಿಬಿದ್ದ ಅತಿಥಿಗಳು  title=
ವಧು - ವರ

Wedding Video : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಧು ಮತ್ತು ವರರ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಪ್ರತಿನಿತ್ಯ ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ನಿಮ್ಮನ್ನು ಅಚ್ಚರಿಗೊಳಿಸಬಹುದು. ಭಾರತದೆಲ್ಲೆಡೆ ಫಿಫಾ ವಿಶ್ವಕಪ್ ಕ್ರೇಜ್ ಜೋರಾಗಿದ್ದು, ಫೈನಲ್ ಪಂದ್ಯದ ಬಗ್ಗೆ ಎಲ್ಲೆಡೆ ಚರ್ಚೆ ಜೋರಾಗಿತ್ತು. ಫುಟ್ಬಾಲ್ ಆಡುವವರಷ್ಟೇ ಅಲ್ಲ, ಅಭಿಮಾನಿಗಳು ಕೂಡ ಫೈನಲ್ ಪಂದ್ಯ ವೀಕ್ಷಿಸಲು ಮಧ್ಯರಾತ್ರಿಯವರೆಗೂ ಜಾಗರಣೆ ಮಾಡಿದರು. ಕೆಲವರು ಅರ್ಜೆಂಟೀನಾವನ್ನು ಬೆಂಬಲಿಸಿ ರಸ್ತೆಯ ಮೇಲೆ ಧ್ವಜಗಳನ್ನು ಹಾರಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ವೀಡಿಯೊಗಳು ಕಾಣಿಸಿಕೊಂಡವು, ಅದರಲ್ಲಿ ಜನರು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ : ಕಾಂಗ್ರೆಸ್ ಟಿಕೆಟ್ ಘೋಷಣೆ ವಿಚಾರ: ಕಾಂಗ್ರೆಸ್ ಹೈಕಮಾಂಡ್ ಗೆ ಪೀಕಲಾಟ

ಈ ವೀಡಿಯೊವು ಜನರನ್ನು ಆಶ್ಚರ್ಯಗೊಳಿಸಿದೆ. ಮದುವೆಯ ದಿನದಂದು ವಧು ವರ ಅರ್ಜೆಂಟೀನಾ ಮತ್ತು ಫ್ರಾನ್ಸ್‌ನ ಟೀ ಶರ್ಟ್‌ ಧರಿಸಿ ಫುಟ್ಬಾಲ್‌ ಮೇಲಿನ ಅಭಿಮಾನ ಮೆರೆದಿದ್ದಾರೆ. ಈ ವೀಡಿಯೊ ಇಂಟರ್‌ನೆಟ್‌ಗೆ ಬಂದ ತಕ್ಷಣ ಜನರು ಆಶ್ಚರ್ಯಚಕಿತರಾದರು. ಮದುವೆಯ ವೇದಿಕೆಯಲ್ಲಿ ವಧು-ವರರನ್ನು ಈ ರೀತಿ ನೋಡಿದ ಅತಿಥಿಗಳು ಅಚ್ಚರಿಗೊಂಡರು. 2022ರ ಪಂದ್ಯಾವಳಿಯಲ್ಲಿ ವಧು-ವರರಿಬ್ಬರೂ ತಾವು ಬೆಂಬಲಿಸುತ್ತಿದ್ದ ತಂಡಗಳ ಜರ್ಸಿಯನ್ನು ಧರಿಸಿದ್ದರು. ನಂತರ ಅವರು ತಮ್ಮ ಮದುವೆಯ ದಿರಿಸುಗಳ ಮೇಲೆ ಆ ಜೆರ್ಸಿಗಳನ್ನು ಧರಿಸಿ ಮದುವೆಯಾದರು. ವಧು ಮತ್ತು ವರರಿಬ್ಬರೂ ಫುಟ್ಬಾಲ್ ಅಭಿಮಾನಿಗಳು ಮತ್ತು ವಿವಿಧ ತಂಡಗಳನ್ನು ಬೆಂಬಲಿಸುತ್ತಾರೆ ಎಂದು ತಿಳಿದಿದೆ.

Bride Groom

ವಧು ಅಥಿರಾ ಫ್ರಾನ್ಸ್ ತಂಡವನ್ನು ಬೆಂಬಲಿಸಿದ್ದರು. ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಅವರ ಜರ್ಸಿಯನ್ನು ತನ್ನ ಮದುವೆಯ ಉಡುಪಿನ ಮೇಲೆ ಧರಿಸಿದ್ದರು. ಮತ್ತೊಂದೆಡೆ, ವರ ಸಚಿನ್ ಅರ್ಜೆಂಟೀನಾದ ದೊಡ್ಡ ಅಭಿಮಾನಿಯಾಗಿದ್ದು, ಲಿಯೋನೆಲ್ ಮೆಸ್ಸಿ ಅವರ ಜರ್ಸಿ ಅನ್ನು ಶೆರ್ವಾನಿಯ ಮೇಲೆ ಧರಿಸಿದ್ದರು. ಫಿಫಾ ವಿಶ್ವಕಪ್‌ನಲ್ಲಿ ಎರಡು ತಂಡಗಳು ಮುಖಾಮುಖಿಯಾಗುವ ಕೆಲವೇ ಗಂಟೆಗಳ ಮೊದಲು ಕೊಚ್ಚಿ ನಗರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ದಂಪತಿಗಳು ವಿವಾಹವಾದರು.

ಇದನ್ನೂ ಓದಿ : "ಅವರ ಮನೆಯಲ್ಲಿ ದೇಶಕ್ಕಾಗಿ ನಾಯಿಯಾದರೂ ಸತ್ತಿದೆಯೇ?" : ಬಿಜೆಪಿ ವಿರುದ್ಧ ಖರ್ಗೆ ಕಿಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News