Viral Video : ಹಾವನ್ನು ಬೇಟೆಯಾಡಿದ ಜೇಡ! ರೋಮಾಂಚಕ ವಿಡಿಯೋ ವೈರಲ್‌

Snake caught in Spider Web: ಆದರೆ ಜೇಡವು ಹಾವನ್ನು ಬೇಟೆಯಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ?ಜೇಡರ ಬಲೆಯಲ್ಲಿ ಸಿಕ್ಕಿಬಿದ್ದ ಹಾವಿಗೆ ದಾಳಿ ಮಾಡುವ ಅವಕಾಶ ಸಿಗದೇ ಸುಮ್ಮನಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. 

Written by - Chetana Devarmani | Last Updated : Dec 18, 2022, 12:31 PM IST
  • ಜೇಡರ ಬಲೆಯಲ್ಲಿ ಸಿಕ್ಕಿಬಿದ್ದ ಹಾವು
  • ವಿಡಿಯೋ ನೋಡಿ ಆಶ್ಚರ್ಯಚಕಿತರಾದ ಜನ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video : ಹಾವನ್ನು ಬೇಟೆಯಾಡಿದ ಜೇಡ! ರೋಮಾಂಚಕ ವಿಡಿಯೋ ವೈರಲ್‌   title=
ಜೇಡರ ಬಲೆಯಲ್ಲಿ ಹಾವು

Spider fight with Snake: ಕಾಡು ಪ್ರಾಣಿಗಳ ವಿಡಿಯೋಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಆದರೆ ಜೇಡವು ಹಾವನ್ನು ಬೇಟೆಯಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹಾವು ಮತ್ತು ಜೇಡ ನಡುವಿನ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದುವರೆಗೆ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ಹಳೆಯದಾದರೂ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಟೆಕ್ಸಾಸ್‌ನಿಂದ ಬಂದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Avatar 2 Box Office Collection: ಬಾಕ್ಸ್ ಆಫೀಸ್‌ನಲ್ಲಿ ಅವತಾರ್ 2 ಅಬ್ಬರ

ಜೇಡವೊಂದು ಕಾರಿನ ಟೈರ್‌ನಲ್ಲಿ ಬಲೆ ನೇಯ್ದಿದ್ದು, ಅದರಲ್ಲಿ ಹಾವು ಸಿಕ್ಕಿಬಿದ್ದು ಬಲೆಯಿಂದ ಹೊರಬರಲು ಸಾಧ್ಯವಾಗದೇ ಇರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರ ನಂತರ ಜೇಡವು ಹಾವಿನ ಕಡೆಗೆ ಚಲಿಸುತ್ತದೆ ಮತ್ತು ನಂತರ ಇಬ್ಬರ ನಡುವೆ ಕಾಳಗ ನಡೆಯುತ್ತದೆ. ಜೇಡನ ಬಲೆಯಲ್ಲಿ ಸಿಕ್ಕಿಬಿದ್ದ ನಂತರ, ಹಾವು ಆಕ್ರಮಣ ಮಾಡಲು ಅವಕಾಶವನ್ನು ಪಡೆಯುವುದಿಲ್ಲ ಮತ್ತು ಅದು ಶಾಂತವಾಗುತ್ತದೆ. ಇದನ್ನು ನೋಡಿದ ಜನರು ಜೇಡರ ಬಲೆಯಲ್ಲಿ ಸಿಲುಕಿ ಹಾವು ಸತ್ತಿದೆ ಎಂದು ಊಹಿಸುತ್ತಾರೆ.

 

 

ಸ್ಪೈಡರ್ ಮತ್ತು ಸ್ನೇಕ್ ಫೈಟ್ ವಿಡಿಯೋ ನೋಡಿ ಜನ ಸಖತ್ತಾಗಿ ಕಮೆಂಟ್ ಮಾಡುತ್ತಿದ್ದು, ಎಂಜಾಯ್‌ ಮಾಡುತ್ತಿದ್ದಾರೆ. ಜನರು ಹಾವುಗಳನ್ನು ತುಂಬಾ ಅಪಾಯಕಾರಿ ಮತ್ತು ವಿಷಕಾರಿ ಎಂದು ಪರಿಗಣಿಸುತ್ತಾರೆ, ಆದರೆ ಈ ವಿಡಿಯೋವನ್ನು ನೋಡಿದ ಜನರ ದೃಷ್ಟಿಕೋನವು ಬದಲಾಗಿದೆ ಮತ್ತು ಜನರು ಇದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ : IMDb Top 10 Indian Movies: ಐಎಂಡಿಬಿ ಟಾಪ್​ 10 ಚಿತ್ರಗಳಲ್ಲಿ ಕನ್ನಡ ಸಿನಿಮಾಗಳದ್ದೇ ಮೇಲುಗೈ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News