Flying Snake : ಗಾಳಿಯಲ್ಲಿ ಹಾರಾಡುವ ಹಾವು! ಮೈನವಿರೇಳಿಸುವ ವಿಡಿಯೋ ವೈರಲ್‌

Snake Viral Video: ಇಲ್ಲಿ ಹಾವೊಂದು ಸ್ಟಂಟ್ ಮಾಡಿದ್ದು ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದರೆ ಹಾವು ಗಾಳಿಯಲ್ಲಿ ಹಾರುತ್ತಿದೆ ಎಂದು ತೋರುತ್ತದೆ. ಈ ಘಟನೆಯ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.   

Written by - Chetana Devarmani | Last Updated : Mar 27, 2023, 11:15 AM IST
  • ಸ್ಟಂಟ್ ಮಾಡಿದ ಹಾವು
  • ಗಾಳಿಯಲ್ಲಿ ಹಾರಾಡುವ ಹಾವು!
  • ಮೈನವಿರೇಳಿಸುವ ವಿಡಿಯೋ ವೈರಲ್‌
Flying Snake : ಗಾಳಿಯಲ್ಲಿ ಹಾರಾಡುವ ಹಾವು! ಮೈನವಿರೇಳಿಸುವ ವಿಡಿಯೋ ವೈರಲ್‌  title=
Flying Snake

Snake Viral Video: ನೆಲದ ಮೇಲೆ ಹಾವು ಹರಿದಾಡುವುದನ್ನು ನೀವು ಆಗಾಗ ನೋಡಿರಬೇಕು, ಆದರೆ ಗಾಳಿಯಲ್ಲಿ ಹಾವು ಹಾರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲಿ ಹಾವೊಂದು ಸ್ಟಂಟ್ ಮಾಡಿದ್ದು ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಹಾವುಗಳು ನೀರಿನಲ್ಲಿ ತೆವಳುವುದನ್ನು ಅಥವಾ ಈಜುವುದನ್ನು ಜನರು ಯಾವಾಗಲೂ ನೋಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದರೆ ಹಾವು ಗಾಳಿಯಲ್ಲಿ ಹಾರುತ್ತಿದೆ ಎಂದು ತೋರುತ್ತದೆ. ವಾಸ್ತವವಾಗಿ, ಕೆಲವು ಹಾವುಗಳು ಗಾಳಿಯಲ್ಲಿ ಜಿಗಿಯುವುದರಲ್ಲಿ ಪರಿಣಿತವಾಗಿವೆ. ಈ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಜನಪ್ರಿಯವಾಗಿದೆ.

ಇದನ್ನೂ ಓದಿ : ಆ ಕಡೆ ಮೈದುನ… ಈ ಕಡೆ ಅತ್ತಿಗೆ: ಮಧ್ಯರಾತ್ರಿ ರಸ್ತೆಯಲ್ಲಿ ಯಾರು ಇಲ್ಲದಿದ್ದಾಗ ಇವರಿಬ್ಬರು…!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮನೆಯ ಛಾವಣಿಯ ಮೇಲೆ ಹಾವು ಕುಳಿತಿರುವುದನ್ನು ನೀವು ನೋಡುತ್ತೀರಿ. ನಂತರ ಅದು ಸ್ಟಂಟ್‌ ಮಾಡಿದೆ. ಇದನ್ನು ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಹಾವು ಗಾಳಿಯಲ್ಲಿ ಹಾರುವ ಈ ವಿಡಿಯೋ ಕಂಡು ಜನರು ಅಚ್ಚರಿಪಡುತ್ತಿದ್ದಾರೆ. ಏಕೆಂದರೆ ಹಾವು ಈ ರೀತಿಯ ಸಾಹಸವನ್ನು ಮಾಡುವುದು ಅಪರೂಪ. ಈ ವಿಡಿಯೋವನ್ನು H0W_THlNGS_W0RK ಎಂಬ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

 

 

ವಿಡಿಯೋ ನೋಡಿದ ಜನರು ಕೂಡ ಅಚ್ಚರಿಗೊಂಡಿದ್ದಾರೆ. ಆದರೆ, ಈ ವಿಡಿಯೋ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಿಂದ ಇರಬಹುದು ಎಂದು ಕೆಲವರು ಹೇಳಿದ್ದಾರೆ. ಈ ವಿಡಿಯೋವನ್ನು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವಿಡಿಯೋ ನೋಡಿ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇಂಟರ್‌ನೆಟ್‌ ಜಗತ್ತಿನಲ್ಲಿ ಸದ್ಯ ಈ ಹಾರುವ ಹಾವಿನ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ : ದೇಶದಲ್ಲಿ ಆರಂಭವಾಯ್ತು ಮಂಗಳ ಮುಖಿಯರ ಮೊದಲ ಹೇರ್ ಸಲೂನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News