Modi Cabinet 2024 : ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಭಾವಿ ಸಚಿವರಿಗೆ ಮೋದಿ ಹೇಳಿದ ಮಾತೇನು ಗೊತ್ತೆ..? 

Modi Cabinet 2024: ಇನ್ನೇನು ಕೆಲವೇ ಗಂಟೆಗಳಲ್ಲಿ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅದಕ್ಕೂ ಮುನ್ನ ಅವರು, ಮಾಜಿ ಮತ್ತು ಭಾವಿ ಸಚಿವರ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಅವರು ನೂತನ ಸಚಿವರಿಗೆ ಕೆಲವು ಮಹತ್ವದ ಮಾತುಗಳನ್ನು ಹೇಳಿದ್ದಾರೆ.

Written by - Krishna N K | Last Updated : Jun 9, 2024, 04:06 PM IST
    • ಕೆಲವೇ ಗಂಟೆಗಳಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ.
    • ಭಾವಿ ಸಚಿವರನ್ನು ಭೇಟಿ ಮಾಡಿ ದೊಡ್ಡ ಸಂದೇಶ ನೀಡಿದ ಮೋದಿ.
    • ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಡಬೇಕಾದ ಮೊದಲ ಕೆಲಸ ಏನು..?
Modi Cabinet 2024 : ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಭಾವಿ ಸಚಿವರಿಗೆ ಮೋದಿ ಹೇಳಿದ ಮಾತೇನು ಗೊತ್ತೆ..?  title=

Modi 3.0 Cabinet: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಮ್ಮ ಎಲ್ಲಾ ಭಾವಿ ಸಚಿವರನ್ನು ಭೇಟಿ ಮಾಡಿ ದೊಡ್ಡ ಸಂದೇಶವನ್ನು ನೀಡಿದರು. ಚಹಾ ಕೂಟದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರದ ಕಾರ್ಯಸೂಚಿಯನ್ನು ಎಲ್ಲಾ ಸಂಭಾವ್ಯ ಮಂತ್ರಿಗಳಿಗೆ ವಿವರಿಸಿದರು. ಈ ಮೂಲಕ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಡಬೇಕಾದ ಮೊದಲ ಕೆಲಸ ಏನು..? ಎಂದು ಎಲ್ಲರಿಗೂ ಹೇಳಿದ್ದಾರೆ. 

ನರೇಂದ್ರ ಮೋದಿ ಅವರು ಭವಿಷ್ಯದ ಎಲ್ಲಾ ಮಂತ್ರಿಗಳಿಗೆ 100 ದಿನಗಳ ಕ್ರಿಯಾ ಯೋಜನೆಯ ಕಲ್ಪನೆಯನ್ನು ನೀಡಿದ್ದಾರೆ, ಅದನ್ನು ಅವರು ಕಾರ್ಯಗತಗೊಳಿಸಬೇಕು. ಇದರಲ್ಲಿ ಬಾಕಿ ಇರುವ ಯೋಜನೆಗಳನ್ನು ಇತ್ಯರ್ಥಪಡಿಸುವ ಜತೆಗೆ ಯಾರಿಗೆ ಯಾವ ಇಲಾಖೆ ಸಿಗುತ್ತೋ ಆ ಇಲಾಖೆಗೆ ಅವರು ತಕ್ಕ ರೂಪ ಕೊಡಬೇಕು, ಇದರಿಂದ ಎನ್‌ಡಿಎ ಮೇಲೆ ಜನರಿಗಿರುವ ನಂಬಿಕೆ ಮತ್ತಷ್ಟು ಗಟ್ಟಿಯಾಗಬಹುದು ಎಂದು ಕಿವಿ ಮಾತು ಹೇಳಿದ್ದಾರೆ.

ಇದನ್ನೂ ಓದಿ:ರಿಯಲ್‌ ಲೈಫ್‌ನಲ್ಲಿ ಜೋಡಿಯಾಗ್ತಾರಾ ರೀಲ್‌ ಜೋಡಿ..? ರಕ್ಸ್‌-ರುಕ್ಸ್‌ ಮದುವೆಯಾಗಿ ಎಂದ ಫ್ಯಾನ್ಸ್‌.

‘ಜನರ ವಿಶ್ವಾಸ ಗೆಲ್ಲಬೇಕು’ : ಪ್ರಮಾಣ ವಚನಕ್ಕೂ ಮುನ್ನ ತಮ್ಮ ಸಂಭಾವ್ಯ ಸಚಿವರ ಜತೆಗಿನ ಚರ್ಚೆಯಲ್ಲಿ ಪ್ರಧಾನಿ ಮೋದಿ ತಮ್ಮ ಸರ್ಕಾರದ ಕಾರ್ಯಸೂಚಿಯನ್ನು ಎಲ್ಲರ ಮುಂದೆ ಇಟ್ಟಿದ್ದಾರೆ. ನೀವೆಲ್ಲರೂ ಯಾವುದೇ ಬೆಲೆ ತೆತ್ತಾದರೂ ಸಾರ್ವಜನಿಕರ ವಿಶ್ವಾಸ ಗಳಿಸಬೇಕು, ಇದಕ್ಕಾಗಿ ನೀವೆಲ್ಲರೂ ಶ್ರಮಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ಇನ್ನು ನೂತನ ಮೋದಿ ಕ್ಯಾಬಿನೆಟ್‌ನಲ್ಲಿ ಅನುಭವಿ ನಾಯಕರಿಂದ ಹಿಡಿದು ಹೊಸಬರಿಗೂ ಅವಕಾಶ ನೀಡಲಾಗುತ್ತಿದೆ. ಹೊಸ ಮತ್ತು ಹಳೆಯ ಮುಖಗಳನ್ನು ಸಮತೋಲನಗೊಳಿಸುವುದರೊಂದಿಗೆ, ಜಾತಿ ಸಮೀಕರಣಗಳನ್ನು ನೋಡಿಕೊಳ್ಳಲಾಗಿದೆ. ಈ ಕ್ಯಾಬಿನೆಟ್‌ನಲ್ಲಿ, ಪಿಎಂ ಮೋದಿ ತಮ್ಮ ವಿಶೇಷ ಮತ್ತು ಉತ್ತಮ ಕೆಲಸದ ವರದಿಯೊಂದಿಗೆ ನಾಯಕರಿಗೆ ಅವಕಾಶ ನೀಡಿದ್ದಾರೆ. 

ಇದನ್ನೂ ಓದಿ:ಹಿರಿಯ ರಾಜಕಾರಣಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ‘ಕೆಂಗಲ್ ಹನುಮಂತಯ್ಯ’ ಪ್ರಶಸ್ತಿ

ಪ್ರಮಾಣ ವಚನ ಸ್ವೀಕರಿಸಿದ ನಂತರ ಎಲ್ಲರೂ 24 ಗಂಟೆಗಳ ಕಾಲ ದೆಹಲಿಯಲ್ಲೇ ಇರಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಗತ್ಯವಿದ್ದರೆ ಇತರ ಸಭೆಗಳಲ್ಲಿಯೂ ಭಾಗವಹಿಸಬೇಕಾಗುತ್ತದೆ. ಒಟ್ಟಾರೆಯಾಗಿ ಮುಂದಿನ 5 ವರ್ಷಗಳಲ್ಲಿ ಬಾಕಿ ಇರುವ ಕೆಲಸಗಳ ಜೊತೆ ಮುಂಬರುವ ಅಭಿವೃದ್ಧಿ ಕಾರ್ಯಗಳನ್ನು ಅತ್ಯಂತ ಕ್ರಿಯಾಶೀಲತೆಯಿಂದ ಮಾಡುವಂತೆ ಭಾವಿ ಸಚಿವರಿಗೆ ಮೋದಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News