WATCH : ಹನುಮಾನ್ ಚಾಲೀಸಾ ಪಠಿಸುವ ರಷ್ಯನ್ ಬಾಲಕಿ, ವಿಡಿಯೋ ವೈರಲ್

Russian Girl Chanting Hanuman Chalisa : ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ, 7 ವರ್ಷದ ಕ್ರಿಸ್ಟಿನಾ ಹಿಂದಿ ಮಾತನಾಡುವುದನ್ನು ನೋಡಬಹುದು. 

Written by - Chetana Devarmani | Last Updated : Oct 19, 2022, 04:04 PM IST
  • ಹನುಮಾನ್ ಚಾಲೀಸಾ ಪಠಿಸುವ ರಷ್ಯನ್ ಬಾಲಕಿ
  • ನಿರರ್ಗಳವಾಗಿ ಹಿಂದಿ ಮಾತನಾಡುವ ಹುಡುಗಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
WATCH : ಹನುಮಾನ್ ಚಾಲೀಸಾ ಪಠಿಸುವ ರಷ್ಯನ್ ಬಾಲಕಿ, ವಿಡಿಯೋ ವೈರಲ್ title=
ವಿಡಿಯೋ ವೈರಲ್‌ 

Russian Girl Chanting Hanuman Chalisa : ಬೇರೆ ಯಾವುದೇ ದೇಶದ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವುದು ಸುಲಭದ ಕೆಲಸವಲ್ಲ. ನೀವು ರಷ್ಯನ್ ಭಾಷೆಯಲ್ಲಿ ಮಾತನಾಡಲು ಬಯಸಿದರೆ, ನೀವು ಮೊದಲು ಕಲಿಯಬೇಕು ಮತ್ತು ನಂತರ ನೀವು ಆ ಭಾಷೆಯಲ್ಲಿ ಮಾತನಾಡಲು ಸಾಧ್ಯವಾಗುತ್ತದೆ, ಆದರೆ ರಷ್ಯಾದ ಒಬ್ಬ ಪುಟ್ಟ ಹುಡುಗಿ ನಿರರ್ಗಳವಾಗಿ ಹಿಂದಿ ಮಾತನಾಡುತ್ತಾಳೆ. ಅಷ್ಟೇ ಅಲ್ಲ ಆ ಹುಡುಗಿ ಹನುಮಾನ್ ಚಾಲೀಸಾವನ್ನೂ ಓದುತ್ತಾಳೆ. ಈ ವಿಡಿಯೋ ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ, 7 ವರ್ಷದ ಕ್ರಿಸ್ಟಿನಾ ಹಿಂದಿ ಮಾತನಾಡುವುದನ್ನು ನೋಡಬಹುದು. ಇದು ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ : Actresses Cheated in Love: ಪ್ರೀತಿಯಲ್ಲಿ ಮೋಸ ಹೋದ ನಟಿಮಣಿಗಳಿವರು.!

ಯೂಟ್ಯೂಬರ್ ಗೌತಮ್ ಖಟ್ಟರ್ ಇತ್ತೀಚೆಗೆ ಕ್ರಿಸ್ಟಿನಾ ಅವರ ಸಂದರ್ಶನ ಮಾಡಿದ್ದಾರೆ. ಅವರು ತಮ್ಮ ಹಿಂದಿಯ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ವಾಸ್ತವವಾಗಿ ಅವಳು ದೇಸಿ ಉಚ್ಚಾರಣೆಯಲ್ಲಿ ಮಾತನಾಡುತ್ತಿದ್ದಳು. ಖಟ್ಟರ್ ಚಿಕ್ಕ ಹುಡುಗಿಯನ್ನು ಭಾರತದಲ್ಲಿ ಆಕೆಯ ಸಾಹಸಗಳ ಬಗ್ಗೆ ಕೇಳುತ್ತಾರೆ. ಕ್ರಿಸ್ಟಿನಾ ಅವರು ದೇಶಕ್ಕೆ ಬಂದ ನಂತರ ಹಿಂದಿಯನ್ನು ಕಲಿತಿದ್ದು ಮಾತ್ರವಲ್ಲದೆ ಹಾರ್ಮೋನಿಯಂ ಕೂಡ ಅಭ್ಯಾಸ ಮಾಡಿದ್ದಾರೆ ಎಂದು ಬಹಿರಂಗಪಡಿಸಿದರು. ಭಾಷೆ ಮತ್ತು ಕಲೆಯ ಜ್ಞಾನವನ್ನು ಹೊರತುಪಡಿಸಿ, ಧರ್ಮದ ಬಗ್ಗೆ ಉತ್ತಮ ಹಿಡಿತ ಮತ್ತು ಮಂತ್ರಗಳನ್ನು ಕಲಿತಿರುವುದಾಗಿ ಎಂದು ರಷ್ಯಾದ ಹುಡುಗಿ ಹೇಳುತ್ತಾರೆ..

 

 

ಭಾರತೀಯ ಗುರುಕುಲದಲ್ಲಿ ಕಲಿಯುವ ಉದ್ದೇಶದಿಂದ ಈ ವಿದೇಶಿ ಹುಡುಗಿ ತನ್ನ ದೇಶವಾದ ರಷ್ಯಾವನ್ನು ತೊರೆದಳು. ಸಂದರ್ಶಕರು, ಕ್ರಿಸ್ಟಿನಾಗೆ ನೋಟ್‌ಬುಕ್ ಏಕೆ ಇಟ್ಟುಕೊಂಡಿದ್ದೀಯಾ ಎಂದು ಕೇಳಿದರು. ಅದಕ್ಕೆ ಹುಡುಗಿ ಮಂತ್ರಗಳನ್ನು ಬರೆಯಲು ಬಳಸಿದ್ದೇನೆ ಎಂದು ಹೇಳಿದ್ದಾಳೆ. ಬಳಿಕ ಹನುಮಾನ್‌ ಚಾಲಿಸಾ ಏಳುವಂತೆ ಕೇಳಿದಾಗ, ಅವರು ಸರಿಯಾದ ಶಿಷ್ಟಾಚಾರವನ್ನು ಅನುಸರಿಸಿ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಿದರು, ಅವರು ಕಣ್ಣು ಮುಚ್ಚಿ ಕೈ ಮುಗಿದು ಹನುಮಾನ್‌ ಚಾಲೀಸಾ ಪಠಿಸಿದ ರೀತಿ ಎಲ್ಲರ ಗಮನಸೆಳೆಯುತ್ತಿದೆ. 

ಇದನ್ನೂ ಓದಿ : ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂಬ ಹೇಳಿಕೆಗೆ ನಟ ಚೇತನ್‌ ಸ್ಪಷ್ಟನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News