Rat Viral Video: ಎಣ್ಣೆ ಹೊಡೆದ ಇಲಿ.. ಬೆಕ್ಕಿನ ಸ್ಥಿತಿ ಅಧೋಗತಿ

Viral Video : ಈ ವಿಡಿಯೋದಲ್ಲಿ ಇಲಿ ಆಕಸ್ಮಿಕವಾಗಿ ಮದ್ಯ ಸೇವಿಸಿರುವುದನ್ನು ಕಾಣಬಹುದು. ತದನಂತರ ಎದುರಿಗೆ ಬಂದ ಬೆಕ್ಕನ್ನು ಅಟ್ಟಾಡಿಸಿಕೊಂಡು ಓಡಾಡಿಸಿದೆ. 

Written by - Chetana Devarmani | Last Updated : Aug 3, 2022, 05:46 PM IST
  • ಇಂಟರ್ನೆಟ್ ಜಗತ್ತಿನಲ್ಲಿ ಹಲವು ವಿಡಿಯೋಗಳು ವೈರಲ್‌ ಆಗುತ್ತಿವೆ
  • ಸಾಮಾಜಿಕ ಜಾಲತಾಣಗಳಲ್ಲಿ ಇಲಿ ಮತ್ತು ಬೆಕ್ಕಿನ ವಿಡಿಯೋ ವೈರಲ್‌
  • ಎಣ್ಣೆ ಹೊಡೆದ ಇಲಿ.. ಬೆಕ್ಕಿನ ಸ್ಥಿತಿ ಅಧೋಗತಿ
Rat Viral Video: ಎಣ್ಣೆ ಹೊಡೆದ ಇಲಿ.. ಬೆಕ್ಕಿನ ಸ್ಥಿತಿ ಅಧೋಗತಿ  title=
ವಿಡಿಯೋ ವೈರಲ್‌

Rat Viral Video : ಇಂಟರ್ನೆಟ್ ಜಗತ್ತಿನಲ್ಲಿ ಹಲವು ವಿಡಿಯೋಗಳು ವೈರಲ್‌ ಆಗುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ನಂಬಲೂ ಸಾಧ್ಯವಾಗದಂತಹ ಕೆಲವು ದೃಶ್ಯಗಳೂ ಕಾಣಸಿಗುತ್ತವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಇಲಿ ಮತ್ತು ಬೆಕ್ಕಿಗೆ ಸಂಬಂಧಿಸಿದ್ದು. ಇಲಿ-ಬೆಕ್ಕು ವೈರತ್ವ ಜಗತ್ಪ್ರಸಿದ್ಧ. ಬೆಕ್ಕುಗಳು ಯಾವಾಗಲೂ ಇಲಿಗಳಿಗಿಂತ ಬಲವಾಗಿರುತ್ತವೆ. ಆದರೆ ಇಲಿಯ ಭಯದಿಂದ ಬೆಕ್ಕು ಎಂದಾದರೂ ಓಡಿ ಹೋಗುವುದನ್ನು ನೋಡಿದ್ದೀರಾ? ಇತ್ತೀಚಿಗೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇದೇ ರೀತಿಯ ದೃಶ್ಯ ಕಂಡು ಬರುತ್ತಿದೆ.

ಇದನ್ನೂ ಓದಿ: Cold Water ಕುಡಿಯುವುದರಿಂದ ಈ ಆರೋಗ್ಯ ಸಮಸ್ಯೆ ಫಿಕ್ಸ್‌!!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಇಲಿ ವೈನ್ ಗ್ಲಾಸ್ ಬಳಿ ಹೋಗುವುದನ್ನು ಕಾಣಬಹುದು. ನಂತರ ಇಲಿ ವೈನ್‌ ಕುಡಿದು ರುಚಿ ನೋಡುತ್ತದೆ. ಸ್ವಲ್ಪ ಸಮಯದ ನಂತರ ಇಲಿ ನಶೆಯಲ್ಲಿ ಬೆಕ್ಕಿನೊಂದಿಗೆ ಜಗಳವಾಡುತ್ತದೆ. ಇಲಿಯ ಹಠಾತ್ ದಾಳಿಯನ್ನು ನೋಡಿದ ಬೆಕ್ಕು ಅಲ್ಲಿಂದ ಓಡಿಹೋಗಲು ಕಾಲ್ಕಿತ್ತುತ್ತದೆ. ಇಲಿ ಮತ್ತು ಬೆಕ್ಕಿಗೆ ಸಂಬಂಧಿಸಿದ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗ್ತಿದೆ.

 

 

ಈ ವಿಡಿಯೋದಲ್ಲಿ, ಇಲಿಯ ಉಗ್ರ ರೂಪವನ್ನು ನೋಡಿದ ಬೆಕ್ಕು ಓಡಿಹೋಗುವುದನ್ನು ನೀವು ನೋಡುತ್ತೀರಿ. ಈ ದೃಶ್ಯಗಳನ್ನು ನೋಡಿದರೆ ಯಾರಿಗಾದರೂ ನಂಬುವುದು ಕಷ್ಟ. ಈ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ವಿಡಿಯೋವನ್ನು 18plusguyy ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಖತ್‌ ಫನ್ನಿ ವಿಡಿಯೋ ನೋಡಿದ ಜನ ಬಿದ್ದು ಬಿದ್ದು ನಗುತ್ತಿದ್ದಾರೆ. 

ಇದನ್ನೂ ಓದಿ: Ranbir Kapoor : ಹೊಸ ಲುಕ್‌ನಿಂದ ಯರ‍್ರಾಬಿರ‍್ರಿ ಟ್ರೋಲ್‌ ಆದ ರಣಬೀರ್ ಕಪೂರ್!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News