Viral Video: ಗೋಮಾತೆಯ ಎದುರು ಗರಿಬಿಚ್ಚಿ ಕುಣಿದ ನವಿಲು! ನವಿಲಿನ ನಾಟ್ಯಕ್ಕೆ ಮನಸೋತ ಕಾಮದೇನು

Viral video today: ಮನುಷ್ಯನಿಗೆ ತಂತ್ರಜ್ಞಾನ ಎಷ್ಟೇ ನಶೆ ಏರಿಸಿದರೂ ಪ್ರಕೃತಿಯ ಸೊಬಗಿಗೆ ದಾಸನಾಗಬೇಕಾಗುತ್ತದೆ. ಏಕೆಂದರೆ ಪ್ರಕೃತಿ ನೀಡುವಷ್ಟು ಆನಂದವನ್ನು ತಾಂತ್ರಿಕ ಸಾಧನಗಳು ನೀಡಲಾರವು. ಹಸಿರು ನಿಸರ್ಗದಲ್ಲಿ ಹಸು, ಎಮ್ಮೆಗಳ ನಡುವೆ ಇರುವುದು ಒಂದು ಮಧುರ ಅನುಭವ. ಮುಸ್ಸಂಜೆ, ಸಂಜೆ, ಸುಂದರ ಪಕ್ಷಿಗಳು ಕಣ್ಣಿಗೆ ಆಹ್ಲಾದಕರವಾಗಿರುತ್ತದೆ. ಅವರ ಚಿಲಿಪಿಲಿ ಶಬ್ದಗಳು ಕೇಳಲು ಆನಂದದಾಯಕವಾಗಿವೆ. ಇವೆಲ್ಲವುಗಳ ಸೌಂದರ್ಯ ಹೆಚ್ಚಿಸುವಂತೆ ನವಿಲೊಂದು ಪ್ರಕೃತಿಯ ಮಧ್ಯೆ ಗರಿ ಬಿಚ್ಚಿ ಕುಣಿಯುತ್ತಿದೆ

Written by - Zee Kannada News Desk | Last Updated : Aug 28, 2024, 02:34 PM IST
  • ಮನುಷ್ಯನಿಗೆ ತಂತ್ರಜ್ಞಾನ ಎಷ್ಟೇ ನಶೆ ಏರಿಸಿದರೂ ಪ್ರಕೃತಿಯ ಸೊಬಗಿಗೆ ದಾಸನಾಗಬೇಕಾಗುತ್ತದೆ.
  • ಮುಸ್ಸಂಜೆ, ಸಂಜೆ, ಸುಂದರ ಪಕ್ಷಿಗಳು ಕಣ್ಣಿಗೆ ಆಹ್ಲಾದಕರವಾಗಿರುತ್ತದೆ. ಅವರ ಚಿಲಿಪಿಲಿ ಶಬ್ದಗಳು ಕೇಳಲು ಆನಂದದಾಯಕವಾಗಿವೆ.
Viral Video: ಗೋಮಾತೆಯ ಎದುರು ಗರಿಬಿಚ್ಚಿ ಕುಣಿದ ನವಿಲು! ನವಿಲಿನ ನಾಟ್ಯಕ್ಕೆ ಮನಸೋತ ಕಾಮದೇನು title=

Viral video today: ಮನುಷ್ಯನಿಗೆ ತಂತ್ರಜ್ಞಾನ ಎಷ್ಟೇ ನಶೆ ಏರಿಸಿದರೂ ಪ್ರಕೃತಿಯ ಸೊಬಗಿಗೆ ದಾಸನಾಗಬೇಕಾಗುತ್ತದೆ. ಏಕೆಂದರೆ ಪ್ರಕೃತಿ ನೀಡುವಷ್ಟು ಆನಂದವನ್ನು ತಾಂತ್ರಿಕ ಸಾಧನಗಳು ನೀಡಲಾರವು. ಹಸಿರು ನಿಸರ್ಗದಲ್ಲಿ ಹಸು, ಎಮ್ಮೆಗಳ ನಡುವೆ ಇರುವುದು ಒಂದು ಮಧುರ ಅನುಭವ. ಮುಸ್ಸಂಜೆ, ಸಂಜೆ, ಸುಂದರ ಪಕ್ಷಿಗಳು ಕಣ್ಣಿಗೆ ಆಹ್ಲಾದಕರವಾಗಿರುತ್ತದೆ. ಅವರ ಚಿಲಿಪಿಲಿ ಶಬ್ದಗಳು ಕೇಳಲು ಆನಂದದಾಯಕವಾಗಿವೆ. ಇವೆಲ್ಲವುಗಳ ಸೌಂದರ್ಯ ಹೆಚ್ಚಿಸುವಂತೆ ನವಿಲೊಂದು ಪ್ರಕೃತಿಯ ಮಧ್ಯೆ ಗರಿ ಬಿಚ್ಚಿ ಕುಣಿಯುತ್ತಿದೆ.

ಗೋವುಗಳೊಡನೆ ವನಿಲೊಂದು ಗರಿಬಿಚ್ಚಿ ಕುಣಿದಾಡಿದೆ. ಸದ್ಯ ಈ ಸುಂದರ ವಿಡಿಯೋ ಮನಸ್ಸಿಗೆ ಮುದ ನೀಡುತ್ತಾ, ನೋಡುಗರ ಕಣ್ಣುಗಳಿಗೆ ಆನಂದ ನೀಡುತ್ತಿದೆ.

ಹಳ್ಳಿಗಳ ಕಡೆ ಹೆಜ್ಜೆ ಹೆಜ್ಜೆಗೂ ಕಾಣಿಸಿಕೊಳ್ಳುತ್ತಿದ್ದ ಇಂತಹ ದೃಷ್ಯಗಳು ಈಗ ನೋಡೋಕು ಕೂಡ ಸಿಗದಂತಾಗಿದೆ. 
ಬೆಳೆಗಳಿಗೆ ಕ್ರಿಮಿನಾಶಕಗಳ ಬಳಕೆ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ, ಗ್ರಾಮಾಂತರ ಪ್ರದೇಶದಲ್ಲಿ ಸಾಗುವಳಿ ಪ್ರದೇಶ ಹೆಚ್ಚಳ, ಗಿಡಗಂಟಿಗಳನ್ನು ತೆಗೆಯುವುದರಿಂದ ಈಗಾಗಲೇ ಹಲವು ಸುಂದರ ಪಕ್ಷಿ ಪ್ರಬೇಧಗಳು ನಶಿಸಿ ಹೋಗಿವೆ. ಅಂತಹ ದಿನಗಳಲ್ಲಿಯೂ ಒಂದು ಸುಂದರ ದೃಶ್ಯ ತೆರೆದುಕೊಳ್ಳುತ್ತದೆ. ಹಸುಗಳ ಮುಂದೆ ನವಿಲು ಕುಣಿಯುತ್ತಿರುವ ವಿಡಿಯೋ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Viral Video: ಮಾದುವೆಯ ದಿನ ವಧುವಿನ ಎದುರೆ ಮತ್ತೊಬ್ಬಳಿಗೆ ಲಿಪ್‌**ಸ್‌ ಕೊಟ್ಟ ವರ! ನಂತರ ಆಗಿದ್ದೇನು ಗೊತ್ತಾ?

ಕೌಸ್‌ಬ್ಲೈಕ್ ಎಂಬ ಇನ್‌ಸ್ಟಾ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಎರಡು ಹಸುಗಳು ಹೊಲದಲ್ಲಿ ಮೇಯುತ್ತಿವೆ. ಅವರ ಮುಂದೆ ನವಿಲು ನೃತ್ಯ ಮಾಡುತ್ತಿದೆ.  ಹಸುಗಳಲ್ಲಿ ಒಂದು ಹಸು ನವಿಲಿಗೆ ದೂರ ಹೋಗುವಂತೆ ಎದುರಿಸುತ್ತದೆ ಆದರೂ ಎದರದ ನವಿಲು, ಕುಣಿಯುವುದನ್ನು ನಿಲ್ಲಿಸದೆ ನೃತ್ಯದಲ್ಲಿ ಮೈಮರೆಯುತ್ತದೆ.

ಈ ಅಪರೂಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್‌ಗಳಿಗೆ ಖುಷಿ ನೀಡುತ್ತಿದೆ, ಸದ್ಯ ಈ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಪ್ರಕೃತಿಯ ಸೌದರ್ಯಕ್ಕೆ ಮನಸೋತಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ.

 
 
 
 

 
 
 
 
 
 
 
 
 
 
 

A post shared by Cowsblike (@cowsblike)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News