Monkey Video : ಮಂಗನಿಗೆ ಮಾಲೀಕನ ಶಿಕ್ಷೆ! ಶರವೇಗದಲ್ಲಿ ರಾಶಿ ಪಾತ್ರೆ ತೊಳೆದ ಬಡಪಾಯಿ ಕೋತಿ.!

Monkey Dish washing video : ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ. ಪ್ರತಿ ಸಂದರ್ಭದಲ್ಲೂ ಕಿಡಿಗೇಡಿತನ ಮಾಡಲು ಕೋತಿಗಳು ಒಂದಲ್ಲಾ ಒಂದು ಮಾರ್ಗ ಕಂಡುಕೊಳ್ಳುತ್ತವೆ. ಬೇರೆ ಪ್ರಾಣಿಗೆ ತೊಂದರೆ ಕೊಡುವುದು, ಯಾರಿಗಾದರೂ ಕಪಾಳಮೋಕ್ಷ ಮಾಡುವುದು, ಕೋತಿಗಳು ಇಂತಹ ಚೇಷ್ಟೆಯ ಕೆಲಸಗಳನ್ನು ಮಾಡುತ್ತವೆ. 

Written by - Chetana Devarmani | Last Updated : Feb 10, 2023, 03:12 PM IST
  • ಮಂಗನಿಗೆ ಮಾಲೀಕ ಕೊಟ್ಟಿರುವ ಶಿಕ್ಷೆ
  • ಒಂದು ರಾಶಿ ಪಾತ್ರೆ ತೊಳೆದ ಬಡಪಾಯಿ ಕೋತಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Monkey Video : ಮಂಗನಿಗೆ ಮಾಲೀಕನ ಶಿಕ್ಷೆ! ಶರವೇಗದಲ್ಲಿ ರಾಶಿ ಪಾತ್ರೆ ತೊಳೆದ ಬಡಪಾಯಿ ಕೋತಿ.! title=
Monkey Dish washing

Monkey Video : ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ. ಪ್ರತಿ ಸಂದರ್ಭದಲ್ಲೂ ಕಿಡಿಗೇಡಿತನ ಮಾಡಲು ಕೋತಿಗಳು ಒಂದಲ್ಲಾ ಒಂದು ಮಾರ್ಗ ಕಂಡುಕೊಳ್ಳುತ್ತವೆ. ಬೇರೆ ಪ್ರಾಣಿಗೆ ತೊಂದರೆ ಕೊಡುವುದು, ಯಾರಿಗಾದರೂ ಕಪಾಳಮೋಕ್ಷ ಮಾಡುವುದು, ಕೋತಿಗಳು ಇಂತಹ ಚೇಷ್ಟೆಯ ಕೆಲಸಗಳನ್ನು ಮಾಡುತ್ತವೆ. ಕೋತಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಕೋತಿ ಪಾತ್ರ ತೊಳೆಯುತ್ತಿರುವುದನ್ನು ಕಾಣಬಹುದು. ಒಬ್ಬ ಮಹಿಳೆ ಬಂದು ಕೋತಿ ಮತ್ತಷ್ಟು ಪಾತ್ರೆಗಳನ್ನು ತೊಳೆಯಲು ನೀಡುತ್ತಾಳೆ. ಮಂಗ ಕೂಡ ಸುಮ್ಮನೆ ಈ ಕೆಲಸ ಮಾಡುತ್ತಿದೆ.

ಇದನ್ನೂ ಓದಿ : Viral Video : ಮೆರವಣಿಗೆಗೂ ಮುನ್ನವೇ ವರನನ್ನು ಹೊತ್ತು ಓಡಿ ಹೋದ ಕುದುರೆ! ಮುಂದೇನಾಯ್ತು ನೋಡಿ

ವೈರಲ್ ಆದ ವಿಡಿಯೋ ನೋಡಿದರೆ ಕೋತಿಯನ್ನು ಇವರು ಸಾಕಿದಂತಿದೆ. ಕೋತಿ ಮಾಡಿದ ಯಾವುದೋ ತಪ್ಪಿಗೆ ಅದು ಶಿಕ್ಷೆಗೆ ಗುರಿಯಾಗಿದೆ ಎಂದು ತಿಳಿದುಬಂದಿದೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ಕೋತಿಗೆ ಪಾತ್ರ ತೊಳೆಯುವ ಶಿಕ್ಷೆ ನೀಡಲಾಗಿದೆ. ಮಂಗ ಕೂಡ ಮೌನವಾಗಿ ಪಾತ್ರೆಗಳನ್ನು ಒಂದರ ನಂತರ ಒಂದರಂತೆ ತೊಳೆಯಲು ಪ್ರಾರಂಭಿಸುತ್ತದೆ. ಈ ವಿಡಿಯೋದಲ್ಲಿ, ಕೋತಿಗೆ ತೊಳೆಯಲು ಅನೇಕ ಪಾತ್ರೆಗಳಿದ್ದು, ಒಂದರ ನಂತರ ಒಂದನ್ನು ಅದು ತೊಳೆಯುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ.

ಪಾತ್ರೆ ತೊಳೆದ ಬಡಪಾಯಿ ಕೋತಿಯ ವಿಡಿಯೋ : 

 

 

ಈ ವಿಡಿಯೋದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಕೋತಿಯ ಈ ವೀಡಿಯೊವನ್ನು  ____arun____520 ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರನ್ನು ಸಖತ್‌ ರಂಜಿಸುತ್ತಿದೆ. 

ಇದನ್ನೂ ಓದಿ : Viral Video: “ನಾನೇ ನೋಡಿ ಈ ಕಾರಿನ ಯಜಮಾನ..” ಎನ್ನುತ್ತಾ ಟಾಪ್ ಮೇಲೆ ಕುಳಿತು ಊರು ಸುತ್ತಿದ ನಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News