ದೇವಸ್ಥಾನದ ಉತ್ಸವದ ಬ್ಯಾನರ್‌ನಲ್ಲಿ ʼಮಿಯಾ ಖಲೀಫಾʼ..! ಫೋಟೋ ನೋಡಿ ಬೆಚ್ಚಿಬಿದ್ದ ಭಕ್ತರು

Mia Khalifa photo in Banner : ಪಡ್ಡೆ ಹುಡುಗರು ಮಾಡುವ ಕೆಲವೊಂದಿಷ್ಟು ಕೆಲಸಗಳು ಆಘಾತಕಾರಿಯಾಗಿರುತ್ತವೆ. ಅದರಂತೆ ಇಲ್ಲೋಂದಿಷ್ಟು ಜನ ಕಿಡಿಗೇಡಿಗಳು ದೇವಸ್ಥಾನದ ಉತ್ಸವದ ಬ್ಯಾನರ್‌ನಲ್ಲಿ ದೇವರ ಪಕ್ಕದಲ್ಲಿ ಪೋರ್ನ್‌ ತಾರೆ ಮಿಯಾ ಖಲೀಫಾ ಫೋಟೋ ಹಾಕಿ ಶಾಕ್‌ ನೀಡಿದ್ದಾರೆ... ಭಕ್ತರು ಈ ಚಿತ್ರವನ್ನು ನೋಡಿ ದಂಗಾಗಿದ್ದಾರೆ.. ಅಷ್ಟಕ್ಕೂ ಈ ಘಟನೆ ನಡೆದದ್ದು ಎಲ್ಲಿ..? ಬನ್ನಿ ತಿಳಿಯೋಣ..

Written by - Krishna N K | Last Updated : Aug 9, 2024, 04:33 PM IST
    • ಜಾತ್ರೆಗಳಲ್ಲಿ ಬ್ಯಾನರ್‌ ಹಾಕಿ ಭಕ್ತರಿಗೆ ಸ್ವಾಗತ ಕೋರುವುದು ಸಾಮನ್ಯ.
    • ಬ್ಯಾನರ್‌ನಲ್ಲಿ ಪೋರ್ನ್ ನಟಿ ಮಿಯಾ ಖಲೀಫಾ ಹಾಕಲಾಗಿದೆ..
    • ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..
ದೇವಸ್ಥಾನದ ಉತ್ಸವದ ಬ್ಯಾನರ್‌ನಲ್ಲಿ ʼಮಿಯಾ ಖಲೀಫಾʼ..! ಫೋಟೋ ನೋಡಿ ಬೆಚ್ಚಿಬಿದ್ದ ಭಕ್ತರು  title=

Mia Khalifa : ದೇವಸ್ಥಾನದ ಉತ್ಸವ, ಜಾತ್ರೆಗಳಲ್ಲಿ ಬ್ಯಾನರ್‌ ಹಾಕಿ ಭಕ್ತರಿಗೆ ಸ್ವಾಗತ ಕೋರುವುದು ಸಾಮನ್ಯ. ಆದರೆ ಕಾಂಚೀಪುರಂನಲ್ಲಿ ಏಕಾಎಕಿ ಬ್ಯಾನರ್‌ನಲ್ಲಿ ಪೋರ್ನ್ ನಟಿ ಮಿಯಾ ಖಲೀಫಾ ಅವರ ಫೋಟೋ ಕೆಲವು ಕಿಡಿಗೇಡಿಗಳು ಭಕ್ತರಿಗೆ ಶಾಕ್‌ ನೀಡಿದ್ದಾರೆ.. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. 

ಕಾಂಚಿಪುರಂ ಜಿಲ್ಲೆಯ ಕುರುವಿಮಲೈ ಪ್ರದೇಶದಲ್ಲಿ ಶ್ರೀ ನಾಗತಮ್ಮನ್ ಮತ್ತು ಶ್ರೀ ಚೆಲ್ಲಿಯಮ್ಮನ್ ಮತ್ತು ಶ್ರೀ ಮಾಪಿಳ್ಳೈ ವಿನಾಯಕರ್ ದೇವಾಲಯಗಳಿವೆ. ನಾಗತಮ್ಮನ್ ಮತ್ತು ಚೆಲ್ಲಿಯಮ್ಮನ್ ದೇವಸ್ಥಾನದಲ್ಲಿ ಕಳೆದ 12 ವರ್ಷಗಳಿಂದ ಗ್ರಾಮಸ್ಥರು ಆದಿ ಮಾಸ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ..

ಇದನ್ನೂ ಓದಿ: ಲವರ್‌ ಹುಟ್ಟುಹಬ್ಬಕ್ಕೆ Iphone ಗಿಫ್ಟ್‌ ನೀಡಲು, ತಾಯಿಯ..! ದೇಶವನ್ನೇ ಬೆಚ್ಚಿ ಬಿಳಿಸುತ್ತಿದೆ 9ನೇ ತರಗತಿ ವಿದ್ಯಾರ್ಥಿಯ ಕೃತ್ಯ 

ಅದರಂತೆ ಈ ಆದಿ ಮಾಸದ ಶುಕ್ರವಾರದಂದು ನಾಗತಮ್ಮನ್ ಮತ್ತು ಚೆಲ್ಲಿಯಮ್ಮನ್ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮೋತ್ಸವ ತಂಡ ಇದಕ್ಕಾಗಿ ವ್ಯವಸ್ಥೆ ಮಾಡುತ್ತಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಕೆಲ ಯುವಕರು ಹಬ್ಬದ ನಿಮಿತ್ತ ವಿಭಿನ್ನವಾಗಿ ಬ್ಯಾನರ್ ಹಾಕಿದ್ದರು. 

ಈ ಪೈಕಿ ‘ಎಂಗ ಬಾಸಂ ಊರೇ ಪೆಸುಂ’ ಎಂಬ ಬ್ಯಾನರ್ ಕಟ್ಟಲಾಗಿತ್ತು. ಅದರಲ್ಲಿ ದೇವರ ಫೋಟೋ ಪಕ್ಕದಲ್ಲಿ ಖ್ಯಾತ ನೀಲಿ ತಾರೆ ಮಿಯಾ ಖಲೀಫಾ ಫೊಟೋ ಹಾಕಲಾಗಿತ್ತು.. ಅಷ್ಟೇ ಅಲ್ಲದೆ, ಆಕೆಯ ತಲೆಮೇಲೆ ಕಳಸವನ್ನೂ ಸಹ ಇಡಲಾಯಿತು.. ಇದನ್ನು ನೋಡಿದ ಭಕ್ತರು ದಂಗಾಗಿದ್ದರು..

ಇದನ್ನೂ ಓದಿ:Daily GK Quiz: ಪೆನ್ಸಿಲಿನ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು?

ಹಬ್ಬ ಹರಿದಿನಗಳಲ್ಲಿ ಸಿನಿಮಾ ನಟರ ಫೋಟೋ ಹಾಕುವುದು ಸಾಮಾನ್ಯ. ಆದರೆ ಮಿಯಾ ಖಲೀಫಾ ಫೋಟೋ ಹಾಕಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಯುವಕರಿಗೆ ಮಿಯಾ ಖಲೀಫಾ ಬಗ್ಗೆ ತಿಳಿದಿರಬಹುದು, ಆದರೆ ಗ್ರಾಮದ ಹಿರಿಯರಿಗೆ ಅದರ ಬಗ್ಗೆ ತಿಳಿದಿರುವ ಸಾಧ್ಯತೆ ಕಡಿಮೆ, ಆದ್ದರಿಂದ ಗ್ರಾಮದ ಹಿರಿಯರೂ ಇದನ್ನು ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News