ನಾಗರಹಾವಿನ ತಲೆಯಿಂದ ನಾಗಮಣಿ ತೆಗೆಯುವ ವ್ಯಕ್ತಿ ! ಇಲ್ಲಿದೆ ವಿಡಿಯೋ

Snake Nagamani Video :ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಾಗರ ಹಾವಿನ ಹೆಡೆಯ ಸಮೀಪ ಸೀಳಿ ಮಣಿಯೊಂದನ್ನು ಹೊರತೆಗೆಯುತ್ತಾನೆ. ಈ ಮಣಿ ಕಡು ನೀಲಿ ಬಣ್ಣವನ್ನು ಹೊಂದಿದೆ. 

Written by - Ranjitha R K | Last Updated : Jul 27, 2023, 03:10 PM IST
  • ಹಾವಿನ ತಲೆಯಿಂದ ನಾಗಮಣಿ ಹೊರಕ್ಕೆ
  • ಮಣಿ ಹೊರತೆಗೆದ ವ್ಯಕ್ತಿ
  • ವೈರಲ್ ಆಗುತ್ತಿದೆ ವಿಡಿಯೋ
ನಾಗರಹಾವಿನ ತಲೆಯಿಂದ ನಾಗಮಣಿ ತೆಗೆಯುವ ವ್ಯಕ್ತಿ ! ಇಲ್ಲಿದೆ ವಿಡಿಯೋ title=

Snake Nagamani Video : ನಾಗಮಣಿ ಎನ್ನುವುದನ್ನು ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ. ನಾಗಮಣಿ ಕೈಯ್ಯಲ್ಲಿದ್ದರೆ ವಿಶೇಷ ಶಕ್ತಿ ಬರುತ್ತದೆ. ಅಂದುಕೊಂಡದ್ದೆಲ್ಲಾ ನಡೆಯುತ್ತದೆ ಎನ್ನುವ ಕಾರಣಕ್ಕೆ ನಾಗಮಣಿ ಕದಿಯುವುದು ಈ ರೀತಿಯ ಕತೆಗಳನು ಸಿನಿಮಾ ಧಾರಾವಾಹಿಗಳಲ್ಲಿ ನೋಡಿರುತ್ತೇವೆ. ನಾಗ - ನಾಗ ರಾಣಿ - ನಾಗ ಮಣಿಗೆ ಸಂಬಂಧಪಟ್ಟ ಬಹಳಷ್ಟು ಸಿನಿಮಾಗಳು ಬಂದು ಹೋಗಿವೆ.  ಇನ್ನು ಧಾರಾವಾಹಿಗಳು ಈಗಲೂ ಚಾಲ್ತಿಯಲ್ಲಿವೆ. ಆದರೆ ಇವೆಲ್ಲಾ ಬರೀ ಸಿನಿಮಾ, ಧಾರಾವಾಹಿಗಳಿಗಷ್ಟೇ ಸೀಮಿತವಾಗಿತ್ತು.  

ಆದರೆ ಈಗ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಾಗರ ಹಾವಿನ ಹೆಡೆಯ ಸಮೀಪ ಸೀಳಿ ಮಣಿಯೊಂದನ್ನು ಹೊರತೆಗೆಯುತ್ತಾನೆ. ಈ ಮಣಿ ಕಡು ನೀಲಿ ಬಣ್ಣವನ್ನು ಹೊಂದಿದೆ. 

ಇದನ್ನೂ ಓದಿ Viral News: ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಮಗಳು..!

ವಿಡಿಯೋದಲ್ಲಿ ಸರಸರನೆ ಹರಿದಾಡುವ ನಾಗರಹಾವನ್ನು ಕಾಣಬಹುದು. ಆ ಹಾವಿನ ಹಿಂದೆಯೇ ಓಡಿ ಬರುವ ವ್ಯಕ್ತಿ ಹಾವನ್ನು ಹಿಡಿಯಲು ಯತ್ನಿಸುತ್ತಾನೆ. ಆದರೆ ಹಾವು ಸುಲಭವಾಗಿ ಆ ವ್ಯಕ್ತಿ ಕೈಗೆ ಸಿಗುವುದಿಲ್ಲ. ಬಹಳಷ್ಟು ಆರಿ ಅಪಾಯವನ್ನರಿತ ನಾಗರ ಆ ವ್ಯಕ್ತಿಗೆ ಕಚ್ಚಲು ಮುಂದಾಗುತ್ತದೆ. 

ಆದರೆ ಆ  ವ್ಯಕ್ತಿ ಕೂಡಾ ಹಟಕ್ಕೆ ಬಿದ್ದವರಂತೆ ನಾಗರ ಹಾವನ್ನು ಹಿಡಿಯಲು ಯತ್ನಿಸುತ್ತಾನೆ. ಕೊನೆಗೂ ಪಾಪ ನಾಗರ ಆ ವ್ಯಕ್ತಿಯ ಕೈಗೆ ಸಿಕ್ಕಿ ಬೀಳುತ್ತದೆ. ಹಾವು ಕೈಗೆ ಬರುತ್ತಿದ್ದಂತೆಯೇ ವ್ಯಕ್ತಿ ತನ್ನ ಬಳಿಯಿದ್ದ ಚಾಕು ತೆಗೆದುಕೊಂಡು ಆ ಹಾವಿನ ಹೆಡೆಯ ಬಳಿ ಸೀಳು ಹಾಕುತ್ತಾನೆ. ನಂತರ ಅಲ್ಲಿಂದ ಮಣಿಯನ್ನು ಹೊರ ತೆಗೆಯುತ್ತಾನೆ. 

ನಾಗಮಣಿ ಹೊರ ತೆಗೆಯುವ ವಿಡಿಯೋ ಇಲ್ಲಿದೆ : 

ಇದನ್ನೂ ಓದಿ : ಪಾರ್ಕ್‌ ಬಿಟ್ಟು ಮೆಟ್ರೋದಲ್ಲಿ ರೋಮ್ಯಾನ್ಸ್ ಶುರು ಮಾಡಿದ ಲವ್‌ ಬರ್ಡ್ಸ್‌..! ವಿಡಿಯೋ ವೈರಲ್..

ಈ ವಿಡಿಯೋವನ್ನು New Best Stories ಎನ್ನುವ ಯುಟ್ಯೂಬ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಇದು ಹಳೆಯ ವಿಡಿಯೋ ಆಗಿದ್ದರೂ ಸಾಮಾಜಿಕ್ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ವ್ಯಕ್ತಿ ಹೊರ ತೆಗೆದ ಮಣಿ ನಿಜವಾಗಿಯೂ ನಾಗಮಣಿಯೋ ಅಥವಾ ಅಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News