"ನಾನು ಯಾವಾಗಲೂ ಪ್ರಧಾನಿ ಮೋದಿ ಜೊತೆ ಇರುತ್ತೇನೆ"-ನಿತೀಶ್ ಕುಮಾರ್

ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಜೆಡಿಯುನ ನಿತೀಶ್ ಕುಮಾರ್ ಅವರು ಎಲ್ಲಾ ಸಮಯದಲ್ಲಿಯೂ ನರೇಂದ್ರ ಮೋದಿ ಜೊತೆ ಇರುವುದಾಗಿ ಹೇಳಿದ್ದಾರೆ.

Written by - Manjunath N | Last Updated : Jun 7, 2024, 03:57 PM IST
  • ಇದೆ ವೇಳೆ ಮಾತನಾಡಿದ ನಿತೀಶ್ ಕುಮಾರ್ "ನಾನು ಎಲ್ಲಾ ಸಮಯದಲ್ಲೂ ಪ್ರಧಾನಿಯೊಂದಿಗೆ ಇರುತ್ತೇನೆ' ಎಂದು ಅವರು ಹೇಳಿದರು.
  • ಆ ಮೂಲಕ ತಮ್ಮ ನಡೆಯನ್ನು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
  • ಈಗ ಎನ್ದಿಎ ಬಣವು 272 ಸ್ಥಾನಗಳ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ಟಿಡಿಪಿ ಹಾಗೂ ಜೆಡಿಯು ನಂತಹ ಪಕ್ಷಗಳ ನೆರವಿನ ಆಗತ್ಯವಿದೆ ಈ ಹಿನ್ನೆಲೆಯಲ್ಲಿ ಈಗ ನಿತೀಶ್ ಕುಮಾರ್ ಅವರ ಪ್ರತಿಕ್ರಿಯೆ ಬಂದಿದೆ.
"ನಾನು ಯಾವಾಗಲೂ ಪ್ರಧಾನಿ ಮೋದಿ ಜೊತೆ ಇರುತ್ತೇನೆ"-ನಿತೀಶ್ ಕುಮಾರ್ title=

ನವದೆಹಲಿ: ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಜೆಡಿಯುನ ನಿತೀಶ್ ಕುಮಾರ್ ಅವರು ಎಲ್ಲಾ ಸಮಯದಲ್ಲಿಯೂ ನರೇಂದ್ರ ಮೋದಿ ಜೊತೆ ಇರುವುದಾಗಿ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್‌ನ ಹೊಸದಾಗಿ ಚುನಾಯಿತ ಸಂಸದರ ಸಭೆಯಲ್ಲಿ ನಿತೀಶ್ ಕುಮಾರ್ ಶುಕ್ರವಾರ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮೂರನೇ ಅವಧಿಗೆ ಅನುಮೋದಿಸುವ ಔಪಚಾರಿಕತೆಯನ್ನು ಪೂರ್ಣಗೊಳಿಸಿದ ನಂತರ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ರಾಜೀನಾಮೆ ಪಡೆಯಲು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ: ಬಿವೈ ವಿಜಯೇಂದ್ರ

ಇದೆ ವೇಳೆ ಮಾತನಾಡಿದ ನಿತೀಶ್ ಕುಮಾರ್ "ನಾನು ಎಲ್ಲಾ ಸಮಯದಲ್ಲೂ ಪ್ರಧಾನಿಯೊಂದಿಗೆ ಇರುತ್ತೇನೆ' ಎಂದು ಅವರು ಹೇಳಿದರು.ಆ ಮೂಲಕ ತಮ್ಮ ನಡೆಯನ್ನು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ಈಗ ಎನ್ದಿಎ ಬಣವು 272 ಸ್ಥಾನಗಳ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ಟಿಡಿಪಿ ಹಾಗೂ ಜೆಡಿಯು ನಂತಹ ಪಕ್ಷಗಳ ನೆರವಿನ ಆಗತ್ಯವಿದೆ ಈ ಹಿನ್ನೆಲೆಯಲ್ಲಿ ಈಗ ನಿತೀಶ್ ಕುಮಾರ್ ಅವರ ಪ್ರತಿಕ್ರಿಯೆ ಬಂದಿದೆ.

ಇದನ್ನೂ ಓದಿ: ಲೋಕ ಸಮರ ಫಲಿತಾಂಶ ಎಫೆಕ್ಟ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಲಿತ-ಲಿಂಗಾಯತ ನಾಯಕರ ಒತ್ತಡ?!

ಸದ್ಯ ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗಳಿಸಿದ್ದರೆ ಜೆಡಿಯು 12 ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿಯ 16 ಸಂಸದರ ನೆರವಿನಿಂದ ಪೂರ್ಣ ಬಹುಮತದ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಬಹುದಾಗಿದೆ.ಇನ್ನೊಂದೆಡೆಗೆ ಅವರು ಇಂಡಿಯಾ ಬ್ಲಾಕ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯದಲ್ಲಿ ತಮ್ಮ ನೆಲೆಯನ್ನು ಬದಲಾಯಿಸುವುದರಲ್ಲಿ ಮುಂದಿರುವ ನಿತೀಶ್ ಕುಮಾರ್ ಅವರ ಈಗ ಪ್ರಧಾನಿ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News