ಸಫಾರಿ ವೇಳೆ ಬಸ್ ಕಿಟಕಿ ಮೇಲೆಗರಿದ ಚಿರತೆ, ಹೌಹಾರಿದ ಪ್ರವಾಸಿಗಳು: ವಿಡಿಯೋ ವೈರಲ್

Leopard: ಇದ್ದಕ್ಕಿದ್ದಂತೆ ಪ್ರವಾಸಿಗರಿದ್ದ ಬಸ್ ಮೇಲೆ ಎಗರಿದ ಚಿರತೆ ಕಿಟಕಿ ಮೂಲಕ ಬಸ್ ಒಳಗೆ ಪ್ರವೇಶಿಸಲು ಯತ್ನಿಸಿರುವ ಘಟನೆ ಹೆಸರಾಂತ ಜೈವಿಕ ಉದ್ಯಾನವನದಲ್ಲಿ ನಡೆದಿದೆ. 

Written by - Yashaswini V | Last Updated : Oct 7, 2024, 03:11 PM IST
  • ಪ್ರವಾಸಿಗರಿದ್ದ ಬಸ್ ಮೇಲೆಯೇ ಎಗರಿದ ಚಿರತೆ
  • ಚಿರತೆ ಕಂಡು ಕಿರುಚಾಡಿದ ಬಸ್ ನಲ್ಲಿದ್ದ ಪ್ರವಾಸಿಗರು.
  • ಆತಂಕದ ಜೊತೆ ತೀರ ಹತ್ತಿರದಲ್ಲಿ ಚಿರತೆ ಕಂಡು ಪ್ರವಾಸಿಗರಲ್ಲಿ ಖುಷಿ.
ಸಫಾರಿ ವೇಳೆ ಬಸ್ ಕಿಟಕಿ ಮೇಲೆಗರಿದ ಚಿರತೆ, ಹೌಹಾರಿದ ಪ್ರವಾಸಿಗಳು: ವಿಡಿಯೋ ವೈರಲ್  title=

Leopard Viral Video: ಸಫಾರಿ ವೇಳೆ ಪ್ರವಾಸಿಗರಿದ್ದ ಬಸ್ ಮೇಲೆ ಚಿರತೆ ಎರಗಿದ್ದು ಪ್ರವಾಸಿಗಳು ಹೌಹಾರಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ತೊಂದರೆಗಳಾಗದಿದ್ದರೂ ಪ್ರಸಿದ್ಧ ಉದ್ಯಾನವನದಲ್ಲಿ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಉದ್ಬವಿಸಿವೆ. 

ನಾಲ್ಕೈದು ದಿನಗಳ ಹಿಂದೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿರುವ ಈ ಘಟನೆಯನ್ನು ಆ ಬಸ್ಸಿನಲ್ಲೇ ಇದ್ದ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. 

ಇದನ್ನೂ ಓದಿ- Snake Viral Video: ಚಲಿಸುತ್ತಿದ್ದ ರೈಲಿನ ಎಸಿ ಕೋಚ್‌ನಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ 5 ಅಡಿ ಉದ್ದದ ಹಾವು, ಮುಂದೆ...

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರಿದ್ದ ಬಸ್ ಮೇಲೆ ಎಗರುವ ದೃಶ್ಯದ ವಿಡಿಯೋದಲ್ಲಿ, ಚಿರತೆ ಬಸ್ ಮೇಲೆ ಏರುತ್ತಿದ್ದಂತೆ  ಪ್ರವಾಸಿಗರು ಕಿರುಚಾಡಿದ್ದಾರೆ. ಕೆಲವರು, ತೀರಾ ಹತ್ತಿರದಲ್ಲಿ ಚಿರತೆ ಕಂಡು ಖುಷಿ ಪಟ್ಟಿರುವುದೂ ಉಂಟು. 

ಚಿರತೆ ಪ್ರವಾಸಿಗರ ಬಸ್ ಮೇಲೆಗರಿದ ವಿಡಿಯೋವನ್ನು ಇಲ್ಲಿ ವೀಕ್ಷಿಸಿ...

 

ಇದನ್ನೂ ಓದಿ- Viral video: ಇಲಿಯ ಕರಾಟೆ ಕಲೆಗೆ ಬೇಟೆ ಆಡಲು ಬಂದ ಹಾವು ಫುಲ್ ಸುಸ್ತು

ಇತ್ತೀಚಿನ ದಿನಗಳಲ್ಲಿ ಚಿರತೆಗಳು ಬಸ್ , ಜೀಪ್ ಗಳ ಮೇಲೆ ಹತ್ತುವ ವಾಡಿಕೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕಬ್ಬಿಣದ ಜಾಲರಿ ಅಳವಡಿಸಲಾಗಿದೆ. ಹೀಗಾಗಿಯೇ, ಬಸ್ ಮೇಲೆ ಏರಿ ಕಿಟಕಿಯಲ್ಲಿ ಪ್ರವಾಸಿಗರನ್ನು ನೋಡಿ ಗುರ್ ಎಂದ ಚಿರತೆ ಒಳನುಗ್ಗಲು ಪ್ರಯತ್ನಿಸಿದಾಗ್ಯೂ, ಅದು ಸಾಧ್ಯವಾಗಿಲ್ಲ. ಇನ್ನೂ ಚಾಲಕ ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆ ಚಿರತೆ ಬಸ್ ನಿಂದ ಕೆಳಕ್ಕೆ ಹಾರಿದೆ ಎಂದು ಬನ್ನೇರುಘಟ್ಟ ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News