ಹಾವನ್ನು ಹಾವೇ ನುಂಗಿತ್ತಾ! ಮೈ ಜುಂ ಎನಿಸುವಂತಿದೆ ಈ ವಿಡಿಯೋ

ವಿಡಿಯೊದಲ್ಲಿ, ಕಾಳಿಂಗ ಸರ್ಪವನ್ನು ಕಿಂಗ್‌ ಸ್ನೇಕ್‌ ನುಂಗುತ್ತಿರುವುದನ್ನು ಕಾಣಬಹುದು. ಕ್ಲಿಪ್ ಅನ್ನು ಜಾರ್ಜಿಯಾ ಡಿಪಾರ್ಟ್ಮೆಂಟ್ ಆಫ್ ನ್ಯಾಚುರಲ್ ರಿಸೋರ್ಸಸ್ (DNR) ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ.

Written by - Bhavishya Shetty | Last Updated : Jun 15, 2022, 10:36 AM IST
  • ಕಾಳಿಂಗ ಸರ್ಪವನ್ನು ನುಂಗಿದ ಕಿಂಗ್‌ ಸ್ನೇಕ್‌
  • ವೀಡಿಯೊವನ್ನು ಹಂಚಿಕೊಂಡ ಡಿಎನ್‌ಆರ್‌
  • ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
ಹಾವನ್ನು ಹಾವೇ ನುಂಗಿತ್ತಾ! ಮೈ ಜುಂ ಎನಿಸುವಂತಿದೆ ಈ ವಿಡಿಯೋ  title=
Snake Strange Video

ಇತ್ತೀಚೆಗಷ್ಟೇ ಅಮೆರಿಕದ ಜಾರ್ಜಿಯಾದಲ್ಲಿ ಹಾವು ಮತ್ತೊಂದು ದೊಡ್ಡ ಹಾವನ್ನು ನುಂಗಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಷಕಾರಿ ಕಾಳಿಂಗ ಸರ್ಪವನ್ನು ಕಿಂಗ್‌ ಸ್ನೇಕ್‌ ನುಂಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. 80 ವರ್ಷದ ಟಾಮ್ ಸ್ಲ್ಯಾಗ್ ಎಂಬವರು ಈ ಘಟನೆಯನ್ನು ನೋಡಿದ ತಕ್ಷಣ, ತಮ್ಮ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. 

ಇದನ್ನು ಓದಿ: LPG Gas Connection: ಎಲ್‌ಪಿಜಿ ಗ್ಯಾಸ್‌ ಕನೆಕ್ಷನ್ ಇನ್ನು ಬಲು ದುಬಾರಿ

ವಿಡಿಯೊದಲ್ಲಿ, ಕಾಳಿಂಗ ಸರ್ಪವನ್ನು ಕಿಂಗ್‌ ಸ್ನೇಕ್‌ ನುಂಗುತ್ತಿರುವುದನ್ನು ಕಾಣಬಹುದು. ಕ್ಲಿಪ್ ಅನ್ನು ಜಾರ್ಜಿಯಾ ಡಿಪಾರ್ಟ್ಮೆಂಟ್ ಆಫ್ ನ್ಯಾಚುರಲ್ ರಿಸೋರ್ಸಸ್ (DNR) ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ.

ವೀಡಿಯೊವನ್ನು ಹಂಚಿಕೊಂಡ ಡಿಎನ್‌ಆರ್‌, "ಕಿಂಗ್‌ ಸ್ನೇಕ್‌ Vs ಟಿಂಬರ್ ರಾಟಲ್ಸ್ನೇಕ್: ಇದು ಹಾವು ತಿನ್ನುವ ಹಾವುಗಳ ಜಗತ್ತು' ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಕಾಳಿಂಗ ಸರ್ಪವು ಕಿಂಗ್‌ಸ್ನೇಕ್‌ಗಿಂತ ದೊಡ್ಡದಾಗಿ ಕಾಣುತ್ತದೆ. ಆದರೆ ಅಂತಹ ಬೃಹತ್‌ ಹಾವನ್ನು ಕಿಂಗ್‌ ಸ್ನೇಕ್‌ ನುಂಗುತ್ತಿರುವುದು ಆಶ್ಚರ್ಯ ಮೂಡಿಸುತ್ತೆ. 

 

ಈ ಪೋಸ್ಟ್ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಕ್ಲಿಪ್ ಇಂಟರ್ನೆಟ್ ಬಳಕೆದಾರರನ್ನು ಅಚ್ಚರಿಗೊಳಿಸಿದೆ. ಇದನ್ನು 278,000 ಬಾರಿ ವೀಕ್ಷಿಸಲಾಗಿದೆ ಮತ್ತು ಸಾವಿರಾರು ಮಂದಿ ಲೈಕ್‌ ಮಾಡಿದ್ದಾರೆ. "ಇದು ಅದ್ಭುತ. ಇಷ್ಟು ದೊಡ್ಡ ಹಾವನ್ನು ಕಿಂಗ್‌ ಸ್ನೇಕ್‌ ನುಂಗುವುದು ಅಚ್ಚರಿ ಮೂಡಿಸಿದೆ" ಎಂದು ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ. 

ನ್ಯೂಸ್‌ವೀಕ್‌ನೊಂದಿಗೆ ಮಾತನಾಡಿದ ಡಿಎನ್‌ಆರ್‌ ವಕ್ತಾರರು, ಕಿಂಗ್‌ಸ್ನೇಕ್‌ಗಳ ಆಹಾರವು ಸಾಮಾನ್ಯವಾಗಿ ಮೊಲಗಳು, ಉಭಯಚರಗಳು, ಆಮೆ ಮೊಟ್ಟೆಗಳು, ಹಲ್ಲಿಗಳು ಮತ್ತು ಇತರ ಹಾವುಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ. ಮೇಲಿನ ವೀಡಿಯೋದಲ್ಲಿ ನೋಡಿರುವಂತೆ ಟಿಂಬರ್ ರಾಟಲ್‌ಸ್ನೇಕ್‌(ಕಾಳಿಂಗ ಸರ್ಪ)ಗಳಂತಹ ವಿಷಕಾರಿ ಹಾವುಗಳನ್ನು ಹಿಡಿದು ತಿನ್ನುವ ಸಾಮರ್ಥ್ಯಕ್ಕೆ ಕಿಂಗ್‌ ಸ್ನೇಕ್‌ ಹಾವುಗಳು ಪ್ರಸಿದ್ಧವಾಗಿವೆ ಎಂದು ಹೇಳಿದರು. 

ಇದನ್ನು ಓದಿ: ರಾಷ್ಟ್ರ ಪತಿ‌ ಚುನಾವಣೆ ಹಿನ್ನೆಲೆ : ಇಂದು ಪ್ರಾದೇಶಿಕ ಪಕ್ಷಗಳ ನಾಯಕರ ಸಭೆ

ಇದಲ್ಲದೆ, ಕಿಂಗ್‌ ಸ್ನೇಕ್‌ಗಳು ವಿಷಕಾರಿಯಲ್ಲ ಮತ್ತು ಅವು ತಮ್ಮ ಬೇಟೆಯ ಮೇಲೆ ತೀವ್ರವಾಗಿ ದಾಳಿ ಮಾಡುತ್ತವೆ ಎಂದು ವಕ್ತಾರರು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
    

Trending News